ಮನೋರಂಜನೆ

ಸರ್ಕಾರಿ ಶಾಲೆ ದತ್ತು ಪಡೆದ ಪ್ರಣೀತಾ- ಇತರೆ ನಟಿಯರಿಗೆ ಮಾದರಿಯಾದ ಕನ್ನಡತಿ.

ಸಾಮಾನ್ಯವಾಗಿ ಸಿನಿಮಾ ನಟಿಯರೆಂದರೆ ಸಿನಿಮಾದಲ್ಲಿ ಸೊಂಟ ಬಳುಕಿಸೋಕೆ ಮಾತ್ರ ಲಾಯಕ್ಕು ಎನ್ನುವ ಮಾತಿದೆ ಆದ್ರೆ ಬಹುಭಾಷಾ ನಟಿ ಪ್ರಣೀತಾ ಮಾತ್ರ ತಾನು ಸಿನಿಮಾದಲ್ಲಿ ಮಾತ್ರ ನಾಯಕಿಯಲ್ಲ ನಿಜಜೀವನದಲ್ಲೂ ನಾಯಕಿ ಎಂಬುದನ್ನು ನಿರೂಪಿಸಿದ್ದಾರೆ. ಏನಾದರೊಂದು ಎಡವಟ್ಟುಮಾಡಿಕೊಳ್ಳುವ ಮುಖಾಂತವರೋ ಅಥವಾ ಬಟ್ಟೆ ಕಳಚಿ ಅಂಗಾಂಗ ಪ್ರದರ್ಶನದ ಮೂಲಕವೇ ಸದ್ದು ಮಾಡಲೆತ್ನಿಸುವ ಈಗಿನ ನಟಿಯರ ಮಧ್ಯೆ ಕೆಲವೇ ಕೆಲವು ಮಂದಿ ಮಾತ್ರ ಸಾಮಾಜಿಕ ಕಳಕಳಿಯ ಮನೋಭಾವವನ್ನು ಹೊಂದಿರೋ ನಟಿಯರೂ ಇದ್ದಾರೆ. ಅಂತಹವರಲ್ಲಿ ಕನ್ನಡತಿ ಪ್ರಣೀತಾ ಕೂಡ ಒಬ್ಬಳು.

ಈಗ ಈ ವಿಚಾರಗಳೆಲ್ಲಾ ಯಾಕೆ ಅಂತೀರಾ? ಕಾರಣ ಇದೇ.. ಪ್ರಣೀತಾ ಸುಬಾಷ್ ಅವ್ರು ಸರ್ಕಾರಿ ಶಾಲೆಯೊಂದನ್ನು ದತ್ತು ಪಡೆದಿದ್ದಾರೆ. ಹಾಸನ ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಯನ್ನು ದತ್ತು ಪಡೆದಿರುವ ಪ್ರಣೀತಾ ಅದರ ಮೂಲಸೌಕರ್ಯ ಅಭಿವೃದ್ದಿಗಾಗಿ ವೈಯುಕ್ತಿಕವಾಗಿ ಐದು ಲಕ್ಷ ರೂಪಾಯಿಯನ್ನು ನೀಡಿದ್ದಾರೆ.

 

 

ಬೆಂಗಳೂರಿನಲ್ಲಿ ಮಂಗಳವಾರ ಸರಕಾರಿ ಶಾಲೆ ಉಳಿಸಿ ಆಂದೋಲನ ಸಮಿತಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತಮ್ಮ 26ನೇ ವರ್ಷ ಹುಟ್ಟು ಹಬ್ಬನ್ನು ಆಚರಿಸಿಕೊಂಡ ನಟಿ ಪ್ರಣೀತಾ ಸುಭಾಷ್‌ ತಮ್ಮ ತಂದೆಯ ಮೂಲಸ್ಥಳ ಹಾಸನ ಜಿಲ್ಲೆಯಲ್ಲಿ ಒಂದು ಶಾಲೆ ದತ್ತು ತೆಗೆದುಕೊಳ್ಳುವುದಾಗಿ ಘೋಷಿಸಿದರು.

ಇದೇ ವೇಳೆ ಮಾತನಾಡಿದ ಪ್ರಣೀತ ಅವ್ರು ”ನಾನು ಈ ಹಿಂದೆ “ಟೀಚ್ ಫಾರ್ ಚೇಂಜ್” ಆಂದೋಲನದಲ್ಲಿ ಭಾಗವಹಿಸಿದ್ದೆ. ಆ ವೇಳೆ ಸರ್ಕಾರೀ ಶಾಲೆಗಳಲ್ಲಿ ಸೌಕರ್ಯಗಳ ಕೊರತೆ, ಹೆಣ್ಣು ಮಕ್ಕಳ ಶೌಚಾಲಯ ಮತ್ತು ಶುಚಿತ್ವ ದುಸ್ಥಿತಿಯೂ ನೋಡಿದ್ದೇ. ಹಾಗಾಗಿ ಪ್ರತಿ ವಿಷಯಕ್ಕೆ ಸರ್ಕಾರವನ್ನು ದೂರುವ ಬದಲು, ನಮ್ಮನ್ನು ಬೆಳೆಸಿದ ಸಮಾಜಕ್ಕೆ ಏನಾದರೂ ಸಣ್ಣ ಸೇವೆ ಸಲ್ಲಿಸಬೇಕು ಎಂಬ ಉದ್ದೇಶದಿಂದ ಶಾಲೆಯನ್ನು ದತ್ತು ಪಡೆಯುತ್ತಿದ್ದೇನೆ,” ಎಂದರು..

ಒಟ್ಟಿನಲ್ಲಿ ಬೆಡಗು ಬಿನ್ನಾಣಗಳಲ್ಲೇ ಮುಳುಗಿಹೋಗಿರುವ ಎಷ್ಟೋ ನಟಿಯರಿಗೆ ಪ್ರಣೀತಾ ಅವರ ಈ ನಡೆ ಮಾದರಿಯಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top