ಮನೋರಂಜನೆ

ಮಧ್ಯರಾತ್ರಿಯಿಂದಲೇ ಶುರುವಾಗಲಿದೆ ‘ದಿ ವಿಲನ್’ ಘರ್ಜನೆ: ಬೆಲೆ ಹೆಚ್ಚಿಸಿದರೂ ಟೆಕೆಟ್‌ಗಳು ಸೋಲ್ಡ್​ಔಟ್.

ಕನ್ನಡ ಚಿತ್ರರಂಗದಲ್ಲಿ ವಿಪರೀತ ಕ್ರೆಜ್ ಹುಟ್ಟುಹಾಕಿರುವ ‘ದಿ ವಿಲನ್’ ಚಿತ್ರ ನಾಳೆ ಪ್ರಪಂಚದಾದ್ಯಂತ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ಸೆಟ್ಟೇರಿ ಎರಡು ವರ್ಷಗಳೇ ಕಳೆಯುತ್ತಾ ಬಂದಿದ್ದರೂ ಪ್ರೇಕ್ಷಕರ ವಲಯದಲ್ಲಿ ವಿಪರೀತ ಕುತೂಹಲ ಕ್ರಿಯೇಟ್ ಮೆಂಟೇನ್ ಮಾಡಿಕೊಂಡು ಬಂದಿರೋ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಸಿನಿಮಾ, ಸುದೀಪ್ ಮತ್ತು ಶಿವಣ್ಣ ಒಟ್ಟಾಗಿ ನಟಿಸಿರುವುದರಿಂದ ಈ ಪಾಟಿ ಸಂಚಲನ ಸೃಷ್ಟಿಸುತ್ತಿದೆ.. ಈಗಾಗಲೇ ಬಿಡುಗಡೆಯಾಗಿರೋ ಟೀಸರ್ ಮತ್ತು ಹಾಡುಗಳ ಅಬ್ಬರವನ್ನು ಕಂಡು ಇಡೀ ಗಾಂಧಿನಗರವೇ ಬೆಚ್ಚಿಬಿದಿದೆ.

ಇಂಥಾ ಬಹುನಿರೀಕ್ಷಿತ ‘ದಿ ವಿಲನ್’ ಸಿನಿಮಾ ಮುಂಗಡ ಟಿಕೆಟ್‌ ಬುಕ್ಕಿಂಗ್‌’ಗೆ ಭರ್ಜರಿ ಪ್ರತಿಕ್ರಿಯೆ ದೊರೆತಿದ್ದು ಮೊದಲ ದಿನದ ಟಿಕೆಟ್‌ಗಳು ಸೋಲ್ಡ್‌ ಔಟ್‌ ಆಗಿವೆ. ಆದ ಕಾರಣ ಮಧ್ಯರಾತ್ರಿಯಲ್ಲಿ ಶೋಗಳನ್ನ ಹಾಕಿ ಎಂದು ಅಭಿಮಾನಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ.. ಕೆಲವಡೆ ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಥಿಯೇಟರ್ ಮಾಲೀಕರು ಬೆಳಗಿನ ಜಾವದ ಪ್ರದರ್ಶನಗಳನ್ನು ಏರ್ಪಡಿಸಿದ್ದಾರೆ. ಇನ್ನೂ ಕೆಲವು ಕಡೆ ಮಧ್ಯರಾತ್ರಿಯೇ ‘ವಿಲನ್’ ಶೋ ಮಾಡಲು ಮುಂದಾಗಿದ್ದಾರೆ.

 

 

`ದಿ ವಿಲನ್’ ಸಿನಿಮಾ ಸ್ಯಾಂಡಲ್‍ವುಡ್‍ನ ದೊಡ್ಡ ಬಜೆಟ್ ಸಿನಿಮಾ. ಹೀಗಾಗಿ ಹಾಕಿರೋ ಬಂಡವಾಳವನ್ನ ಮತ್ತೆ ಪಡೆಯುವ ಒತ್ತಡದಲ್ಲಿರೋ ಚಿತ್ರತಂಡ ಟಿಕೆಟ್ ಬೆಲೆಯನ್ನ ಹೆಚ್ಚಿಸಿದೆ. ಸಿಂಗಲ್‌ ಥಿಯೇಟರ್‌ಗಳಲ್ಲಿ ಟಿಕೆಟ್‌ಗೆ 25ರಿಂದ 100 ರೂ. ವರೆಗೆ ಹೆಚ್ಚಿಸಲಾಗಿದೆ. ಹೀಗಿದ್ದರೂ ನಮ್ಮ ನೆಚ್ಚಿನ ನಟರ ಸಿನಿಮಾವನ್ನ ಎಷ್ಟಾದರೂ ಕೊಟ್ಟು ನೋಡುತ್ತೇವೆ ಅಂತಿದ್ದಾರೆ ಅಭಿಮಾನಿಗಳು. ಹೀಗಾಗಿ ಎಲ್ಲ ಕಡೆ ಮೂರು ದಿನ ಮುಂಚೆಯೇ ಟಿಕೆಟ್ ಸೋಲ್ಡ್ ಔಟ್ ಆಗಿವೆ.

ಅಂದಹಾಗೆ ಚಿತ್ರ ಬಿಡುಗಡೆಗೆ ವಾರ ಬಾಕಿ ಇರುವಾಗಲೇ ಸಂಭ್ರಮಾಚರಣೆ ಆರಂಭಿಸಿದ್ದ ಅಭಿಮಾನಿಗಳು ನಾಳಿನ ರಿಲೀಸ್ ದಿನಕ್ಕೆ ಈಗಾಗಲೇ ತಯಾರಿ ಆರಂಭಿಸಿದ್ದಾರೆ. ಮುಖ್ಯವಾದ ಥೇಟರುಗಳು ಸೇರಿದಂತೆ ಎಲ್ಲ ಕಡೆಗಳಲ್ಲಿಯೂ ‘ದಿ ವಿಲನ್’ ಚಿತ್ರಕ್ಕೆ ಅದ್ದೂರಿ ಸ್ವಾಗತ ಕೋರಲು ತಯಾರಿಗಳು ಭರದಿಂದ ಸಾಗುತ್ತಿವೆ. ಇದಕ್ಕಾಗಿ ಭಾರೀಗಾತ್ರದ ಕಟೌಟುಗಳೂ ಸೇರಿದಂತೆ ಡಿಫರೆಂಟಾದ ಬ್ಯಾನರುಗಳೂ ಸಿದ್ಧಗೊಳ್ಳುತ್ತಿವೆ.

ದಿ ವಿಲನ್ ಬಗ್ಗೆ ಹೇಳ್ಬೇಕಂದ್ರೆ ಚಿತ್ರದಲ್ಲಿ ಕಿಚ್ಚ ಸುದೀಪ್ ಮತ್ತು ಶಿವಣ್ಣನಿಗೆ ನಾಯಕಿಯಾಗಿ ಬ್ರಿಟಿಷ್ ಬ್ಯೂಟಿ ಆಮಿ ಜಾಕ್ಸನ್ ನಟಿಸುತ್ತಿದ್ದಾರೆ,,ಚಿತ್ರಕ್ಕೆ ಸಿ.ಮನೋಹರ್ ಬಂಡವಾಳ ಹಾಕಿದ್ದು ಅರ್ಜುನ್ಯ ಜನ್ಯರವರು ಸಂಗೀತ ಸಂಯೋಜನೆ ಮಾಡಿದ್ದಾರೆ…ಉಳಿದಂತೆ ಗಿರಿಗೌಡ ಅವರ ಕ್ಯಾಮರಾ ಕೈಚಳಕ ಚಿತ್ರಕ್ಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top