ಮನೋರಂಜನೆ

ಒಬ್ಬ ಖ್ಯಾತ ನಟಿ ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸುಮಲತಾ ಮದುವೆಗೆ ಅಡ್ಡಿ ಪಡಿಸಿದ್ದಾರಂತೆ ,ಆ ನಟಿ ಯಾರು ಗೊತ್ತಾ

ಕನ್ನಡದ ಖ್ಯಾತ ನಟ ರೆಬೆಲ್ ಸ್ಟಾರ್ ಅಂಬರೀಷ್ ಹಾಗು ಸುಮಲತಾ ಪ್ರೀತಿಸಿ ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದಾರೆ. ಅವರು ಮದುವೆಯಾಗುವ ಸಂಧರ್ಭದಲ್ಲಿ ನಟಿ ಸುಹಾಸಿನಿ ಅಡ್ಡಿಪಡಿಸಿದ್ದರಂತೆ. ಆಕೆ ಗೊತ್ತೇ? ಹಾಗಾದರೆ ಮುಂದೆ ಓದಿ.

ಪ್ರೀತಿಯಲ್ಲಿದ್ದ ಅಂಬರೀಷ್ ಮತ್ತು ಸುಮಲತಾ ಅವರು ವಿವಾಹ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದರು. ಅದು ಮುಗ್ಗುರು ಮಿತ್ರಲು ಅನ್ನೋ ಚಿತ್ರದ ಶೂಟಿಂಗ್ ನಡೆದಿತ್ತು. ಆಗ ಸುಹಾಸಿನಿ ಡಾಕ್ಟರ್ ಪಾತ್ರದಲ್ಲಿ ಅಭಿನಯ ಮಾಡುತ್ತಿದ್ದರು. ಸುಮಲತಾ ಸ್ಟ್ರೆಚರ್ ಮೇಲೆ ಮಲಗಿದ್ದರು.ಆಗ ಸುಮಲತಾ ಸುಹಾಸಿನಿಗೆ “ನಾನು ಹಾಗು ಅಂಬರೀಷ್ ಮದುವೆ ಮಾಡಿಕೊಳ್ಳೋಣ ಎಂದು ನಿರ್ಧಾರ ಮಾಡಿದ್ದೇವೆ ಎಂದು ಹೇಳಿದ್ದರು” ಇದನ್ನು ಕೇಳಿದ ಸುಹಾಸಿನಿ ಅವರು ಸುಮಲತಾ ಮಲಗಿದ್ದ ಸ್ಟ್ರೆಚರ್ ಬಿಟ್ಟೆ ಬಿಟ್ಟರು ಎನ್ನಲಾಗಿದೆ. ನಂತ್ರ ಸುಮಲತಾ ಬಳಿ ತೆರಳಿದ ಸುಹಾಸಿನಿ. “ನಿನಗೇನೂ ಹುಚ್ಚ, ಏನು ಅನ್ಕೊಂಡಿದೀಯ ನೀನು ? ಅಂಬರೀಷ್ ಹ್ಯಾಂಡಲ್ ಮಾಡಕ್ಕೆ ಆಗಿತ್ತ ನಿನ್ನ ಕೈನಲ್ಲಿ, ನೀನು ನೋಡಿದರೆ ಮೃದು ಸ್ವಭಾವದವಳು, ಅವರದು ಬೇರೆ ವ್ಯಕ್ತಿತ್ವ ಎಂದು ಸುಹಾಸಿನಿ ಸುಮಲತಾಗೆ ಹೇಳಿದ್ದರಂತೆ.

 

 

 

ಇದೆಲ್ಲ ಆಗೋ ಕೆಲಸವಲ್ಲ ಎಂದು ಸುಹಾಸಿನಿ ಅವರು ಸುಮಲತಾಗೆ ಕ್ಲಾಸ್ ತೆಗೆದುಕೊಂಡಿದ್ದರು. ಆದರೆ ಸುಮಲತಾ ಹಾಗು ಅಂಬರೀಷ್ ಕೊನೆಗೂ ಮದುವೆ ಆದರು. ಮದುವೆಯಾದ 10 ವರ್ಷದ ಬಳಿಕ ಸುಮಲತಾ ಈ ವಿಷಯವನ್ನು ಅಂಬರೀಷ್ ಗೆ ತಿಳಿಸಿದ್ದರು. ನಂತರ ಒಮ್ಮೆ ಅಂಬರೀಷ್ ಅವರು ಸುಹಾಸಿನಿಗೆ ಏನಮ್ಮ ಹಾಗೆಲ್ಲ ಹೇಳಿದ್ದೆ ಎಂದು ಕೇಳಿದ್ರಂತೆ. ಈ ವಿಷಯವನ್ನು ಸುಮಲತಾ ಸಂದರ್ಶನವೊಂದರಲ್ಲಿ ಹೇಳಿದ್ದರು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top