ಮನೋರಂಜನೆ

ಪ್ರೇಕ್ಷಕರಿಗೆ ವಿಲನ್ ವಾರ್ನಿಂಗ್ – ಥಿಯೇಟರ್‌ನಲ್ಲಿ ಈ ಕೆಲಸ ಮಾಡುದ್ರೆ ಕಂಬಿ ಎಣಿಸಬೇಕಾಗುತ್ತೆ ಹುಷಾರ್.

ಕನ್ನಡ ಚಿತ್ರರಂಗದಲ್ಲಿ ವಿಪರೀತ ಕ್ರೆಜ್ ಹುಟ್ಟುಹಾಕಿರುವ ‘ದಿ ವಿಲನ್’ ಚಿತ್ರ ನಾಳೆ ಪ್ರಪಂಚದಾದ್ಯಂತ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ಸೆಟ್ಟೇರಿ ಎರಡು ವರ್ಷಗಳೇ ಕಳೆಯುತ್ತಾ ಬಂದಿದ್ದರೂ ಪ್ರೇಕ್ಷಕರ ವಲಯದಲ್ಲಿ ವಿಪರೀತ ಕುತೂಹಲ ಕ್ರಿಯೇಟ್ ಮೆಂಟೇನ್ ಮಾಡಿಕೊಂಡು ಬಂದಿರೋ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಸಿನಿಮಾ, ಸುದೀಪ್ ಮತ್ತು ಶಿವಣ್ಣ ಒಟ್ಟಾಗಿ ನಟಿಸಿರುವುದರಿಂದ ಈ ಪಾಟಿ ಸಂಚಲನ ಸೃಷ್ಟಿಸುತ್ತಿದೆ..

ಇಂಥಾ ಬಹುನಿರೀಕ್ಷಿತ ‘ದಿ ವಿಲನ್’ ಚಿತ್ರವನ್ನು ಕಣ್ತುಂಬಿಕೊಳ್ಳಲು ಸಿನಿ ರಸಿಕರು ತುದಿಗಾಲಿನಲ್ಲಿ ನಿಂತಿದ್ದಾರೆ. ಕೇವಲ ಕರ್ನಾಟಕ ಮಾತ್ರವಲ್ಲದೆ ವಿದೇಶದ ಸಿನಿರಸಿಕರು ಚಿತ್ರವನ್ನು ನೋಡಲು ಕಾತುರರಾಗಿದ್ದಾರೆ. ಈ ಮಧ್ಯೆ ಸಿನಿಮಾ ನೋಡೋಕೆ ಬರುವ ಪ್ರೇಕ್ಷಕರಿಗೆ ಚಿತ್ರತಂಡ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.,,

ದಿ ವಿಲನ್ ಚಿತ್ರ ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಇಡೀ ದಕ್ಷಿಣ ಭಾರತ ಚಿತ್ರರಂಗಗಳಲ್ಲೂ ಟಾಕ್ ಕ್ರಿಯೇಟ್ ಮಾಡಿರೋದ್ರಿಂದ ಸಾಮಾನ್ಯವಾಗಿ ಚಿತ್ರ ಹೇಗಿರಬಹುದು ಎಂಬ ಕುತೂಹಲ ಹೆಚ್ಚಾಗಿದೆ,.. ಇತ್ತೀಚಿನ ದಿನಗಳಲ್ಲಿ ಈ ರೀತಿ ಹೆಚ್ಚು ನಿರೀಕ್ಷೆ ಮೂಡಿಸಿದ್ದ ಚಿತ್ರಗಳಿಗೆ ಫೇಸ್ಬುಕ್ ಲೈವ್ ಎಂಬ ಬೂತ ಕಾಡಿತ್ತು(ಹೆಬ್ಬುಲಿ,ಚಕ್ರವರ್ತಿ,ಭರ್ಜರಿ, ತಾರಕ್) ಹಾಗಾಗಿ ದಿ ವಿಲನ್ ಚಿತ್ರಕ್ಕೆ ಈ ರೀತಿಯ ಸಮಸ್ಯೆ ಎದುರಾಗಬಾರದು ಎಂದು ಸಿನಿಮಾ ನೋಡೋಕೆ ಬರುವ ಜನರಿಗೆ ಮೊಬೈಲ್ ನಲ್ಲಿ ವಿಡಿಯೋ ಹಾಗೂ ಫೋಟೋ ತೆಗೆಯಬಾರದು ಎಂದು ಕಟ್ಟುನಿಟ್ಟಾಗಿ ಹೇಳಿದ್ದಾರೆ.

ಒಂದು ವೇಳೆ ವಿಡಿಯೋ ಮಾಡುವುದಾಗಲಿ ಅಥವಾ ಫೇಸ್ಬುಕ್ ಲೈವ್ ಮಾಡುವುದಾಗಲಿ ಕಂಡು ಬಂದರೆ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ. “ದಯಮಾಡಿ ಯಾರು ಕೂಡ ಈ ಸಿನಿಮಾ ದೃಶ್ಯಗಳನ್ನು ಸೆರೆ ಹಿಡಿದು ಯೂಟ್ಯೂಬ್ ಅಥವಾ ಇನ್ಯಾವುದೇ ಮಾಧ್ಯಮಗಳಲ್ಲಿ ಪ್ರಸಾರ ಮಾಡಬಾರದು, ಮಾಡಿದಲ್ಲಿ ಗೂಂಡಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಆದ ಕಾರಣ ಅಭಿಮಾನಿಗಳು ಪೈರಸಿ ತಡೆಗೆ ಸಹಕರಿಸಬೇಕಾಗಿ ವಿನಂತಿ.” ಎಂದು ಚಿತ್ರತಂಡ ಮನವಿ ಮಾಡಿಕೊಂಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top