ಸಿನಿಮಾ

‘ದಿ ವಿಲನ್’ಗೆ ಎದುರಾಯ್ತು ಕಂಟಕ- ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ., ಯಾಕೆ ಗೊತ್ತಾ?

ಕನ್ನಡ ಚಿತ್ರರಂಗದಲ್ಲಿ ವಿಪರೀತ ಕ್ರೆಜ್ ಹುಟ್ಟುಹಾಕಿರುವ ‘ದಿ ವಿಲನ್’ ಚಿತ್ರ ನಾಳೆ ಪ್ರಪಂಚದಾದ್ಯಂತ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ಸೆಟ್ಟೇರಿ ಎರಡು ವರ್ಷಗಳೇ ಕಳೆಯುತ್ತಾ ಬಂದಿದ್ದರೂ ಪ್ರೇಕ್ಷಕರ ವಲಯದಲ್ಲಿ ವಿಪರೀತ ಕುತೂಹಲ ಕ್ರಿಯೇಟ್ ಮೆಂಟೇನ್ ಮಾಡಿಕೊಂಡು ಬಂದಿರೋ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಸಿನಿಮಾ, ಸುದೀಪ್ ಮತ್ತು ಶಿವಣ್ಣ ಒಟ್ಟಾಗಿ ನಟಿಸಿರುವುದರಿಂದ ಈ ಪಾಟಿ ಸಂಚಲನ ಸೃಷ್ಟಿಸುತ್ತಿದೆ.. ಈಗಾಗಲೇ ಬಿಡುಗಡೆಯಾಗಿರೋ ಟೀಸರ್ ಮತ್ತು ಹಾಡುಗಳ ಅಬ್ಬರವನ್ನು ಕಂಡು ಇಡೀ ಗಾಂಧಿನಗರವೇ ಬೆಚ್ಚಿಬಿದಿದೆ.

ಇಂಥಾ ಬಹುನಿರೀಕ್ಷಿತ ‘ದಿ ವಿಲನ್’ ಸಿನಿಮಾಗೆ ಪ್ರತಿಭಟನೆಯ ಎಚ್ಚರಿಕೆ ಎದುರಾಗಿದೆ. ಹೌದು, ಚಿತ್ರದ ಹಾಡೊಂದರಲ್ಲಿ ‘ಗರುಡ್ನಂಗ್ ಇದ್ದೋನ್ ನೋಡ್ಲಾ ಕುರುಡ್ನಂಗ್ ಆಗೋದ್ನೋ’ ಎಂಬ ಸಾಹಿತ್ಯವಿದೆ. ಆ ಹಾಡಿನಿಂದ ‘ಕುರುಡ’ ಪದವನ್ನ ತೆಗೆಯದಿದ್ದರೆ ಚಿತ್ರ ಬಿಡುಗಡೆಯಂದು ನರ್ತಕಿ ಚಿತ್ರಮಂದಿರದ ಮುಂದೆ ಪ್ರತಿಭಟನೇ ನಡೆಸುವುದಾಗಿ ಅಂಧ ಸಮುದಾಯ ಚಿತ್ರತಂಡಕ್ಕೆ ಎಚ್ಚರಿಕೆ ನೀಡಿದೆ.

ಈ ಬಗ್ಗೆ ಮಾತಂದಿರುವ ಅಂಧ ಸಮುದಾಯದ ಪ್ರತಿನಿಧಿ ಎಂ. ವೀರೇಶ್ ಅವ್ರು ” ಸಿನಿಮಾಗಳಲ್ಲಿ ಅಂಧತ್ವನ್ನು ತುಚ್ಛವಾಗಿ ಬಿಂಬಿಸುವುದನ್ನು ನಿಲ್ಲಿಸಬೇಕು. ದಿ ವಿಲನ್ ಚಿತ್ರದ ಹಾಡಿನಲ್ಲಿ ಬಳಸಿರುವ ‘ಕುರುಡ’ ಎಂಬ ಪದವನ್ನು ತೆಗೆದು ಹಾಕಬೇಕು. ಹಾಗೇನಾದರೂ ತಮ್ಮ ಬೇಡಿಕೆಯನ್ನು ಪರಿಗಣಿಸದಿದ್ದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು. ಕಾನೂನಿನ ಪ್ರಕಾರ ಯಾವುದೇ ವಿಕಲಚೇತನರ ನ್ಯೂನತೆಯನ್ನು ಎತ್ತಿ ತೋರಿಸಬಾರದು. ಹಾಗೇನಾದರೂ ತೋರಿಸಿದರೆ ಅದಕ್ಕೆ ಕಾರಣರಾದವರ ಬಗ್ಗೆ ಕಾನೂನು ಕ್ರಮಕ್ಕೆ ಅವಕಾಶವಿದೆ” ಎಂದು ಎಚ್ಚರಿಕೆ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top