ಸಮಾಚಾರ

ಜಗತ್ತಿನಾದ್ಯಂತ ಯೂಟ್ಯೂಬ್ ಸ್ಥಗಿತ-ತಾಂತ್ರಿಕ ದೋಷ ಎಂದು ಸಮಜಾಯಿಷಿ

ಪ್ರಖ್ಯಾತ ವಿಡಿಯೋ ಸಾಮಾಜಿಕ ಜಾಲತಾಣವಾದ ಯೂಟ್ಯೂಬ್ ನೆನ್ನೆ (ಮಂಗಳವಾರ) ರಾತ್ರಿ ಸ್ಥಗಿತವಾಗಿತ್ತು.. ಸರ್ವರ್ ಸಮಸ್ಯೆಯಿಂದ ಸುಮಾರು ರಾತ್ರಿಯೆಲ್ಲಾ ಯೂಟ್ಯೂಬ್ ಕಾರ್ಯ ನಿರ್ವಹಿಸಿರಲಿಲ್ಲ. ಇಂಟರ್ನೆಟ್ ನಲ್ಲಿ ಯೌಟ್ಯೂಬ್ ವೆಬ್ ಸೈಟ್ ಓಪನ್ ಆಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಅಸಂಖ್ಯ ಬಳಕೆದಾರರು ಈ ಬಗ್ಗೆ ಯ್ಯೂಟ್ಯೂಬ್ ​ಗೆ ಪೋಸ್ಟ್ ಮಾಡಿದ್ದರು.

 

 

ಜಗತ್ತಿನ ಬಹು ದೊಡ್ಡ ವಿಡಿಯೋ ಜಾಲ ಎನಿಸಿಕೊಂಡಿರುವ ಯ್ಯೂಟ್ಯೂಬ್​ನಲ್ಲಿ ಜಗತ್ತಿನಾದ್ಯಂತ ಮಂಗಳವಾರ ರಾತ್ರಿ ತಾಂತ್ರಿಕದೋಷ ಎದುರಾಗಿತ್ತು.. ಹೀಗಾಗಿ ವಿಡಿಯೋ ಪ್ಲೇ ಮಾಡಲು ಮತ್ತು ಅಪ್ಲೋಡ್​ ಮಾಡಲು ಬಳಕೆದಾರರಿಗೆ ತೊಂದರೆಯಾಗಿತ್ತು.

ಈ ಬಗ್ಗೆ ಬಳಕೆದಾರರಿಂದ ವರದಿ ಪಡೆದ ಕೂಡಲೇ ಎಚ್ಚೆಟ್ಟುಕೊಂಡ ಯೌಟ್ಯೂಬ್ ಸಂಸ್ಥೆ “ಶೀಘ್ರವೇ ಈ ಸಮಸ್ಯೆ ಸರಿಪಡಿಸುತ್ತೇವೆ. ಎಂದು ಟ್ವೀಟ್ ಮಾಡಿದೆ. ತಾಂತ್ರಿಕ ದೋಷದಿಂದ ಸ್ಥಗಿತವಾಗಿದೆ. ” ಎಂದು ತಿಳಿಸಿತ್ತು.. ಅದಾದ ನಂತರ ಯ್ಯೂಟ್ಯೂಬ್​ ಬುಧವಾರ ಬೆಳಗ್ಗೆ 8 ಗಂಟೆ ಹೊತ್ತಿಗೆ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top