ಭವಿಷ್ಯ

19 ಅಕ್ಟೋಬರ್: ನಾಳೆಯ ಭವಿಷ್ಯ ಮತ್ತೆ ಪಂಚಾಂಗ

ಶುಕ್ರವಾರ, ೧೯ ಅಕ್ಟೋಬರ್ ೨೦೧೮
ಸೂರ್ಯೋದಯ : ೦೬:೩೮
ಸೂರ್ಯಾಸ್ತ : ೧೮:೦೭
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಆಶ್ವಯುಜ

ಪಕ್ಷ : ಶುಕ್ಲ ಪಕ್ಷ
ತಿಥಿ : ದಶಮೀ – ೧೭:೫೭ ವರೆಗೆ
ನಕ್ಷತ್ರ : ಧನಿಷ್ಠ – ೨೭:೨೫+ ವರೆಗೆ
ಯೋಗ : ಶೂಲ – ೧೦:೪೩ ವರೆಗೆ
ಸೂರ್ಯ ರಾಶಿ : ತುಲಾ

ಅಭಿಜಿತ್ ಮುಹುರ್ತ: ೧೨:೦೦ – ೧೨:೪೬
ಅಮೃತಕಾಲ : ೧೫:೪೭ – ೧೭:೩೪
ರಾಹು ಕಾಲ:೧೦:೫೭ – ೧೨:೨೩
ಗುಳಿಕ ಕಾಲ:೦೮:೦೪ – ೦೯:೩೦
ಯಮಗಂಡ:೧೫:೧೫ – ೧೬:೪೧

ಆದಷ್ಟು ಎಚ್ಚರದಿಂದ ಇರಿ. ನೀವು ಮಾಡುತ್ತಿರುವ ಕೆಲಸ ಕಾರ್ಯಗಳಲ್ಲಿ ಕೆಲವರು ಮೂಗು ತೂರಿಸುತ್ತಾ ಇಲ್ಲಸಲ್ಲದ ಸಲಹೆಗಳನ್ನು ನೀಡಿ ನಿಮ್ಮ ದಾರಿ ತಪ್ಪಿಸಲು ಹೊಂಚು ಹಾಕುತ್ತಿರುವರು. ನಿಮ್ಮ ಬುದ್ಧಿಶಕ್ತಿಯನ್ನು ನಂಬಿ ಕೆಲಸ ಮಾಡಿ.

ನಿಮ್ಮ ಬಳಿಯಲ್ಲಿ ವಿವಿಧ ತೆರನಾದ ಜನರು ಬರುವರು. ಅವರುಗಳಲ್ಲಿ ಕೆಲವರು ತಮ್ಮ ಸ್ವಾರ್ಥ ಪೂರೈಸಿಕೊಳ್ಳಲು ಬರುವರು. ಅಂಥವರನ್ನು ಎಚ್ಚರದಿಂದ ಸಾಗಹಾಕಿ.

ಒಂದು ಕಡೆ ಮಾಡಿದ ಸಾಲ ತೀರಿಸಲು ಮತ್ತೊಂದು ಕಡೆ ಸಾಲ ಮಾಡಿದಂತೆ ಒಂದು ಸಮಸ್ಯೆಯಿಂದ ಬಿಡುಗಡೆ ಆಯಿತು ಅನ್ನುವಷ್ಟರಲ್ಲಿ ಮತ್ತೊಂದು ಸಮಸ್ಯೆ ಎದುರಾಗುವುದು. ಮನೆದೇವರ ಸನ್ನಿಧಾನಕ್ಕೆ ಹೋಗಿ ಬನ್ನಿ, ಒಳಿತಾಗುವುದು.

ಹಲವು ವಿಧಗಳಿಂದ ಇಂದು ಮಹತ್ತರ ದಿನವಾಗಿದೆ. ನಿಮ್ಮ ಮನೋಕಾಮನೆಗಳು ಯಾವುದೇ ಅಡೆತಡೆಗಳಿಲ್ಲದೆ ಮುಗಿಯುವವು. ಬಂಧುಗಳು ಸ್ನೇಹಿತರು ನಿಮಗೆ ಸಹಾಯ ಮಾಡಲು ಮುಂದೆ ಬರುವರು.

 

ನಿಮ್ಮ ಜೀವನದ ಶಿಲ್ಪಿ ನೀವೇ. ನಿಮ್ಮನ್ನು ಇತರರು ಉದ್ಧಾರ ಮಾಡುತ್ತಾರೆಂಬ ಭ್ರಮೆಗೆ ಒಳಗಾಗುವಿರಿ. ಜೀವನದಲ್ಲಿ ಹಲವು ಏರಿಳಿತಗಳನ್ನು ಕಾಣುವಿರಿ. ಮನೋ ನಿಯಾಮಕ ರುದ್ರದೇವರನ್ನು ಭಜಿಸಿ.

 

ಸಕಾರಾತ್ಮಕ ಚಿಂತನೆಯಿಂದ ಮಹತ್ತರವಾದ ಕೆಲಸವನ್ನು ಲೀಲಾಜಾಲವಾಗಿ ಮಾಡಿ ಮುಗಿಸುವಿರಿ. ಇದು ನಿಮ್ಮ ಪ್ರಸಿದ್ಧಿಗೆ ದಾರಿಯಾಗುವುದು. ಇದರ ಜತೆಗೆ ಖರ್ಚಿನ ದಾರಿ ತೆರೆದುಕೊಳ್ಳವುದರಿಂದ ಖರ್ಚು ವೆಚ್ಚದ ಕಡೆ ಬಿಗಿ ಹಿಡಿತ ಮಾಡುವುದು ಒಳ್ಳೆಯದು.

 

ಜೀವನದ ಮಹತ್ವದ ಕ್ಷ ಣಗಳು ಸದಾಕಾಲ ಬರುವುದಿಲ್ಲ. ಆದರೆ ಆ ಅದೃಷ್ಟ ನಿಮ್ಮ ಮನೆ ಬಾಗಿಲಿಗೆ ಬಂದಿದೆ. ಅದನ್ನು ತಿರಸ್ಕರಿಸಬೇಡಿ. ಇದರಿಂದ ಮುಂದಿನ ದಿನಗಳಲ್ಲಿ ಬಹು ಬದಲಾವಣೆಗಳು ಉಂಟಾಗುವವು.

 

ನಿಮ್ಮ ಚಾಕಚಕ್ಯತೆಯನ್ನು ಗಮನಿಸಿ ಏಕಕಾಲದಲ್ಲಿ ಹಲವಾರು ಕಾರ್ಯಯೋಜನೆಗಳು ನಿಮ್ಮ ಬಳಿ ಬರುವವು. ಅವುಗಳಲ್ಲಿ ಪ್ರಮುಖವಾದ ಮತ್ತು ಮುಖ್ಯವಾದ ಕಾರ್ಯಗಳನ್ನು ಆದ್ಯತೆಯ ಮೇಲೆ ಹಮ್ಮಿಕೊಳ್ಳಿ. ಒಳಿತಾಗುವುದು.

 

ಕಲ್ಪನಾ ಲೋಕದಲ್ಲಿ ವಿಹರಿಸುವಿರಿ. ಅದರೊಟ್ಟಿಗೆ ವಾಸ್ತವಿಕ ಕುಂದುಕೊರತೆಗಳ ಬಗ್ಗೆಯೂ ಚಿಂತಿಸುವುದು ಒಳಿತು. ಕೆಲವೊಮ್ಮೆ ನಿಮ್ಮ ಉದಾಸೀನ ಪ್ರವೃತ್ತಿ ನಿಮ್ಮ ಭವಿಷ್ಯವನ್ನು ಹಾಳು ಮಾಡುವ ಸಾಧ್ಯತೆ ಇದೆ.

ಅರಿತು ಬಾಳಿದರೆ ಆರು ವರುಷ, ಮರೆತು ಬಾಳಿದರೆ ಮೂರು ವರುಷ ಎನ್ನುವಂತೆ ಕೆಲವೊಂದು ವಿಚಾರಗಳನ್ನು ವಿಮರ್ಶಿಸಿ ಕಾರ್ಯರೂಪಕ್ಕೆ ತರುವುದು ಒಳ್ಳೆಯದು.

 

 

ಮಾನಸಿಕ ಗೊಂದಲದಿಂದ ದೂರವಿರಿ. ಕೆಲವೊಮ್ಮೆ ನಿಮ್ಮ ಉದಾಸೀನದಿಂದ ವ್ಯವಹಾರದಲ್ಲಿ ಸಮಸ್ಯೆಗಳು ತಲೆದೋರುವ ಸಾಧ್ಯತೆ ಇದ್ದು ಸಂಯಮದಿಂದ ವರ್ತಿಸಿ.

ಆತಂಕದಿಂದಲೇ ತೆಗೆದುಕೊಂಡ ನಿರ್ಧಾರಗಳು ಇನ್ನು ಮುಂದೆ ಗಟ್ಟಿಯಾಗುತ್ತಲೇ ಹೋಗುತ್ತವೆ. ಇದರಿಂದ ನಿರ್ಧಾರಗಳು ಸ್ಪಷ್ಟವಾಗಿ ಕೈಗೊಳ್ಳಲಿರುವ ಕಾರ್ಯಗಳು ಹೊಸ ಸ್ವರೂಪ ಪಡೆಯಲಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top