ಅರೋಗ್ಯ

ಸೌತೆಕಾಯಿ ತಿನ್ನೋದ್ರಿಂದ ಈ 8 ಅದ್ಭುತ ಪ್ರಯೋಜನಗಳನ್ನ ಪಡ್ಕೋಬೋದು.

ಎಲ್ಲರಿಗೂ ತಿಳಿದಿರುವಂತೆ ಸೌತೆಕಾಯಿ ಸಮೃದ್ಧ ಆರೋಗ್ಯಗುಣಗಳನ್ನು ಹೊಂದಿರುವ ಒಂದು ತರಕಾರಿ.ಸರಿಯಾದ ಸಮತೋಲಿತ ಆಹಾರವನ್ನು ತಿನ್ನುವುದು ಕೆಲವೊಮ್ಮೆ ಸವಾಲಾಗುತ್ತದೆ ಏನನ್ನು ತಿನ್ನಬೇಕು ಏನನ್ನು ತಿನ್ನಬಾರದು ಎಂಬ ಗೊಂದಲಗಳು ಮಾರ್ಪಡುತ್ತವೆ ಸೌತೇಕಾಯನ್ನು ಸೇವಿಸುವುದರಿಂದ ಈ ಗೊಂದಲಗಳಿಗೆ ತೆರೆಯೆಳೆಯಬಹುದು. ಅಷ್ಟು ಆರೋಗ್ಯಗುಣಗಳು ಸೌತೆಕಾಯಿನಲ್ಲಿರುತ್ತವೆ.ಸೌತೆಕಾಯಿಯನ್ನು ದಿನಾ ತಿಂದರೆ ಏನೆಲ್ಲಾ ಲಾಭ ಪಡೆಯಬಹುದೆಂದು ತಿಳಿಯಲು ಮುಂದೆ ಓದಿ.

 

 

 

ದೇಹದ ಉಷ್ಣತೆಯನ್ನು ಶಮನಮಾಡುತ್ತದೆ:ಸೌತೆಕಾಯಿಯಲ್ಲಿ ಹೆಚ್ಚು ನೀರಿನಂಶವಿರುವುದರಿಂದ ದೇಹದ ಒಳಗೆ ಮತ್ತು ಹೊರಗೆ ದೇಹವನ್ನು ತಂಪಾಗಿರಿಸುತ್ತದೆ.ಸೂರ್ಯನ ಶಾಖದಿಂದಾಗಿರುವ ಕಲೆಗಳು ಮಾಯವಾಗುತ್ತವೆ. ಹೊಟ್ಟೆ ಹುರಿಯುವುದು ಕಡಿಮೆಯಾಗುತ್ತದೆ.

ತೂಕ ಇಳಿಸಿಕೊಳ್ಳಲು:ಸೌತೆಕಾಯಿಯಲ್ಲಿ ಅತಿಯಾದ ನೀರಿನ ಪ್ರಮಾಣವಿದ್ದು ಕಡಿಮೆ ಕ್ಯಾಲರಿ ಶಕ್ತಿಯನ್ನು ಬಳಸುವುದರಿಂದ ಅನಾವಶ್ಯಕ ಬೊಜ್ಜನ್ನು ಕರಗಿಸಿ ದೇಹದ ತೂಕವನ್ನು ಇಳಿಸಿಕೊಳ್ಳಲು ತುಂಬಾ ಸಹಕಾರಿಯಾಗಿದೆ.

ಕಣ್ಣುಗಳ ಆರೋಗ್ಯವನ್ನು ಕಾಪಾಡುತ್ತದೆ:ತಂಪಾದ ಸೌತೆಯೊಂದರ ಪೀಸ್ ಅನ್ನು ನಿಮ್ಮ ಕಣ್ಣಿನ ಮೇಲೆ ಇಟ್ಟುಕೊಳ್ಳುವುದರಿಂದ ನಿಮ್ಮ ಕಣ್ಣು ಉರಿ, ಕಣ್ಣಿನ ಊಟ ಮತ್ತು ಕಣ್ಣಿನ ಸುತ್ತ ಆಗಿರುವ ಕಪ್ಪು ಕಲೆಯನ್ನು ದೂರಮಾಡುತ್ತದೆ. ಹೀಗೆ ಮಾಡುವುದರಿಂದ ದೇಹವು ಕೂಡ ತಂಪಾಗುತ್ತದೆ.

ಬಾಯಿಯ ದುರ್ವಾಸನೆಯನ್ನು ದೂರವಾಗಿಸುತ್ತದೆ:ಸೌತೆಕಾಯಿಯಲ್ಲಿರುವ ನೀರಿನಂಶ ರಸವು ರೋಗಪೀಡಿತ ವಸಡುಗಳನ್ನು ಗುಣಪಡಿಸಿ ಅವುಗಳನ್ನು ತಾಜಾಗೊಳಿಸುತ್ತದೆ. ಸೌತೆಕಾಯಿಯೊಂದರ ಪೀಸ್ ಅನ್ನು ನಿಮ್ಮ ನಾಲಗೆಯ ಸಹಾಯದಿಂದ ಬಾಯಿಯ ಒಳಮೇಲ್ಭಾಗಕ್ಕೆ ಅರ್ಧ ನಿಮಿಷದವರೆಗೆ ಒತ್ತಿ ಹಿಡಿದರೆ ನಿಮ್ಮ ಬಾಯಿಯ ದುರ್ವಾಸನೆಗೆ ಕಾರಣವಾದ ಸೂಕ್ಷ್ಮಾಣು ಜೀವಿಗಳನ್ನು ನಾಶಪಡಿಸುತ್ತದೆ.

ಚರ್ಮದ ಅರೋಗ್ಯ:ಚರ್ಮದ ಮೇಲೆ ಸೌತೆಕಾಯಿ ಚೂರುಗಳನ್ನು ತಿಕ್ಕಿದರೆ ಚರ್ಮವು ಕಾಂತಿಯುಕ್ತವಾಗುವುದು. ಸನ್ ಬರ್ನ್ ತುರಿಕೆ, ಅಲರ್ಜಿಯಂತ ಸಮಸ್ಯೆಗಳಿಗೆ ಸೌತೆಕಾಯಿಯ ಜ್ಯೂಸ್ ಇಂದ ಮಸ್ಸಾಜ್ ಮಾಡಿಸಿಕೊಂಡರೆ ಗುಣವಾಗುತ್ತದೆ. ಸೌತೆಕಾಯಿ ಜ್ಯೂಸ್ ಕುಡಿದರೂ ಒಳ್ಳೆಯದು.

ಕೂದಲಿನ ಅರೋಗ್ಯ:ತಲೆ ಬುರುಡೆಗೆ ಸೌತೆಕಾಯಿಯ ರಸವನ್ನು ಹಚ್ಚಿ ಒಂದು ಗಂಟೆ ಬಿಟ್ಟು ಕೂದಲನ್ನು ತೊಳೆದರೆ ಕೂದಲು ಉದುರುವುದನ್ನು ನಿಲ್ಲಿಸುತ್ತದೆ. ಹೀಗೆ ಮಾಡುವುದರಿಂದ ಕೂದಲು ದಟ್ಟವಾಗಿ ಮತ್ತು ಉದ್ದವಾಗಿ ಬೆಳೆಯುತ್ತದೆ. ಕೂದಲು ಹೊಳೆಯಲು ಕಂಡಿಷನರ್ ಆಗಿಯೂ ಸಹ ಇದು ಕೆಲಸ ಮಾಡುತ್ತದೆ.

ಮಲಬದ್ಧತೆ ಮತ್ತು ಜೀರ್ಣ ಕ್ರಿಯೆ ಸಮಸ್ಯೆ:ಸೌತೆಕಾಯಿಯಲ್ಲಿ ನೀರಿನಂಶವು ಹೆಚ್ಚಾಗಿರುವುದರಿಂದ ಪ್ರತಿದಿನ ಸೌತೆಕಾಯಿ ತಿನ್ನೋದ್ರಿಂದ ಅಸಿಡಿಟಿ, ಹೊಟ್ಟೆ ಉರಿ ಮತ್ತೆ ಹೊಟ್ಟೆ ಹುಣ್ಣು ಕ್ರಮೇಣ ಕಡಿಮೆ ಆಗತ್ತೆ. ಹೊಟ್ಟೆಯ ಪದರಗಳಿಗೆ ತಂಪು ಕೊಡತ್ತೆ. ಮಲಬದ್ಧತೆ ಸಮಸ್ಯೆಕೂಡ ಕ್ರಮೇಣವಾಗಿ ಕಡಿಮೆಯಾಗುತ್ತದೆ.

ಕಿಡ್ನಿ ಮತ್ತು ಹೃದಯಕ್ಕೆ ಒಳ್ಳೆಯದು:ಸೌತೆಕಾಯಿಯಲ್ಲಿ ಹೆಚ್ಚು ನೀರಿನ ಹೆಚ್ಚಾಗಿ ಅಂಶ ಇರುತ್ತದೆ ಮತ್ತು ಜೀರ್ಣಕ್ರಿಯೆಯಲ್ಲಿ ಕಡಿಮೆ ಕ್ಯಾಲೋರಿಯನ್ನು ಬಳಸುವುದರಿಂದ ದೇಹದ ಕಲ್ಮಶವನ್ನು ಹೊರಹಾಕಲು ಕಿಡ್ನಿಗಳಿಗೆ ಸಹಕರಿಸುತ್ತದೆ. ಮತ್ತು ರಕ್ತಪರಿಚಲನೆಯನ್ನು ಸುಧಾರಿಸಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top