ಸಮಾಚಾರ

ಈ ಊರಲ್ಲಿ ಮದುವೆ ಆಗೋ ಹುಡುಗೀನಾ ಮಾರಾಟ ಮಾಡ್ತಾರೆ ಗೊತ್ತಾ, ಈ ವಿಚಿತ್ರ ಪದ್ದತಿಯ ಇಂಟ್ರೆಸ್ಟಿಂಗ್ ವಿಷಯಗಳು ಇಲ್ಲಿವೆ

ಭಾರತ ದೇಶದಲ್ಲಿ ಮದುವೆ ಅನ್ನೋದು ಕೆಲವರಿಗೆ ಸಂಸ್ಕೃತಿ ಸಂಪ್ರದಾಯದ ಪ್ರತೀಕ ಆದರೆ ಇನ್ನು ಕೆಲವರಿಗೆ ಆಡಂಬರದ ವಸ್ತುವಾಗಿದೆ ,ಇನ್ನು ಅರೇಂಜ್ ಮ್ಯಾರೇಜ್ ವಿಷಯಕ್ಕೆ ಬಂದರೆ ಹುಡುಗ ಹಾಗೂ ಹುಡುಗಿಯ ಮನೆ ಕಡೆಯವರು ಇಬ್ಬರು ಅವರ ಅಂತಸ್ತು, ಕೆಲಸ ಕಾರ್ಯಗಳು ಇನ್ನೂ ಮುಂತಾದ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಇಬ್ಬರ ಮನೆಯವರಿಗೆ ಒಪ್ಪಿಗೆಯದರೆ ಹಾಗೆ ಹುಡುಗ ಹಾಗೂ ಹುಡುಗಿಗೆ ಒಪ್ಪಿಗೆಯಾದರೆ ಮದುವೆ ಮಾಡಿಕೊಳ್ಳುತ್ತಾರೆ.

ಇನ್ನು ಲವ್ ಮ್ಯಾರೇಜ್ ವಿಷಯ ನಿಮಗೆ ಗೊತ್ತೇ ಇದೆ ಹುಡುಗ ಹಾಗೂ ಹುಡುಗಿಯ ಮನೆಯಲ್ಲಿ ಕೆಲವರು ಒಪ್ಪಿಸಿ ಮದುವೆಯಾದರೆ ಇನ್ನು ಕೆಲವರು ಹಾಗೆಯೇ ಪೋಷಕರ ಒಪ್ಪಿಗೆ ಇಲ್ಲದೆ ಮದುವೆ ಆಗ್ತಾರೆ, ಈಗ ನೋಡಿ ಸ್ವಾಮಿ ಇಂಟರ್ನೆಟ್ನಲ್ಲಿ ಬೇಕಾದಷ್ಟು ಮ್ಯಾರೇಜ್ ಸೈಟ್ ಗಳಿವೆ ಅಲ್ಲಿ ಹುಡುಗ ಹಾಗೂ ಹುಡುಗಿ ತಮ್ಮ ಅಭಿರುಚಿಗೆ ತಕ್ಕನಾಗಿ ತಮಗೆ ಬೇಕಾಗುವ ಗುಣಗಳು ಇರುವ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ, ಇನ್ನು ಇನ್ನೂ ಮುಂದುವರಿದ ದೇಶಗಳಲ್ಲಾದರೆ ಲೀವಿಂಗ್ ರಿಲೇಷನ್ ನಲ್ಲಿದ್ದು ಆ ನಂತರ ಇಷ್ಟ ಇದ್ರೆ ತಮ್ಮ ಸಂಬಂಧವನ್ನು ಮುಂದುವರಿಸುತ್ತ ಮದುವೆ ಆಗ್ತಾರೆ, ಹೀಗಿರುವಾಗ ಈ ದೇಶದಲ್ಲೊಂದು ವಿಚಿತ್ರವಾದ ಪದ್ಧತಿಯಿದೆ ಈ ಪದ್ಧತಿಯ ಪ್ರಕಾರ ವಧು ವರರು ಹೇಗೆ ಒಬ್ಬರನ್ನೊಬ್ಬರು ಭೇಟಿಯಾಗ್ತಾರೆ ಅನ್ನೋದೇ ವಿಚಿತ್ರ

 

 

 

ಮದುವೆ ಆಗಬೇಕಿರುವ ಹುಡುಗ ಮಾರ್ಕೆಟ್ಗೆ ಹೋಗಿ ಅಲ್ಲಿ ತನಗೆ ಬೇಕಾದ ವಧುವನ್ನು ಆಯ್ಕೆ ಮಾಡಿಕೊಂಡು ಕೊಂಡುಕೊಂಡು ಬರುತ್ತಾನೆ ಅದು ಆಕೆ ಕೇಳಿದಷ್ಟು ರೇಟ್ನ ಕೊಟ್ಟು ಕೊಂಡುಕೊಂಡು ಬರುತ್ತಾನೆ ಈ ವಿಷಯ ನಿಮಗೆ ವಿಚಿತ್ರ ಅನಿಸದೆ ಇರಲ್ಲ ಅಲ್ವಾ .ಹೌದು ಇದನ್ನು ನೀವು ನಂಬಲೇಬೇಕು ಈ ದೇಶದಲ್ಲಿ ಈ ರೀತಿಯ ವಧುಗಳಿಗಾಗಿ ಒಂದು ಮಾರ್ಕೆಟ್ ಇರುತ್ತದೆ ಅಲ್ಲಿ ವರ ತನಗೆ ಬೇಕಾದ ವಧುವನ್ನು ಆಯ್ಕೆ ಮಾಡಿ ಆಕೆ ಕೇಳಿದಷ್ಟು ರೇಟ್ ಕೊಟ್ಟು ಕೆಲವೊಮ್ಮೆ ಹರಾಜಿನಲ್ಲಿ ಹೆಚ್ಚು ಹಣವನ್ನು ಕೊಟ್ಟು ವಧುವನ್ನು ಆಯ್ಕೆ ಮಾಡಿಕೊಂಡು ತರಬೇಕಾಗುತ್ತದೆ.

ಹಾಗಾದರೆ ಈ ಮಾರ್ಕೆಟ್ ಇರುವುದಾದರೂ ಎಲ್ಲಿ ?

ಬಲ್ಗೇರಿಯ ದ ಕಲೈ ಡ್ಜ್ಹಿ ದಲ್ಲಿ ಈ ಮಾರುಕಟ್ಟೆ ಇದೆ ಕ್ರಿಶ್ಚಿಯನ್ ಸಮುದಾಯದ ಉಪ ವಿಭಾಗವಾದ ರೋಮಾ ಕಮ್ಯುನಿಟಿಯಲ್ಲಿ ಈ ಆಚರಣೆಗಳು ಚಾಲ್ತಿಯಲ್ಲಿವೆ , ಪೂರ್ವ ಯುರೋಪಿನ ಈ ಸಂಪ್ರದಾಯವನ್ನು ಅನೇಕರು ವಿರೋಧಿಸುತ್ತಾರೆ ಆದರು ಸಹ ಹಿಂದಿನಿದ ಆಚರಣೆಯಲ್ಲಿರುವ ಈ ಸಂಪ್ರದಾಯವನ್ನು ಕಟ್ಟುನಿಟ್ಟಿನಿಂದ ಪಾಲನೆ ಮಾಡಿಕೊಂಡು ಬಂದಿರುತ್ತಾರೆ .

ಶಾಲೆಯಲ್ಲಿ ಓದುತ್ತಿರುವ ಕಾಲದಲ್ಲಿಯೇ ಪುಟ್ಟ ಹೆಣ್ಣು ಮಕ್ಕಳು ತಮ್ಮ ಶಾಲೆಯನ್ನು ಮೊಟಕುಗೊಳಿಸಿ ಈ ವಿಚಿತ್ರವಾದ ಆಚಾರದಲ್ಲಿ ಪಾಲ್ಗೊಳ್ಳುತ್ತಾರೆ, ಕೆಲವು ಹೆಣ್ಣುಮಕ್ಕಳಿಗೆ ಈ ಆಚರಣೆ ಇಷ್ಟವಿರುವುದಿಲ್ಲ ಆದರೂ ಸಹ ಅವರ ಪೋಷಕರ ಒತ್ತಾಯದ ಮೇರೆಗೆ ವಧು ಚೆನ್ನಾಗಿ ಸಿಂಗರಿಸಿಕೊಂಡು ಅಲಂಕಾರ ಮಾಡಿಕೊಂಡು ಈ ಮಾರ್ಕೆಟ್ನಲ್ಲಿ ಬಂದು ನಿಲ್ಲುತ್ತಾರೆ .ಈ ಮಾರ್ಕೆಟ್ ನ ಹೆಸರು ‘ರೋಮಾ ಬ್ರೈಡಲ್ ಮಾರ್ಕೆಟ್’ ಎಂದು , ಇನ್ನು ಇಲ್ಲಿ ಸಿಗುವ ವಧುಗಳ ರೇಟ್ ಸುಮಾರು ಇನ್ನೂರರಿಂದ ಮುನ್ನೂರು ಡಾಲರ್ ಇರಬಹುದು ಹಾಗೆಯೇ ಇವರು ಮದುವೆ ಮಾಡಿಕೊಂಡು ಸುಖವಾಗಿ ಸಂಸಾರ ಮಾಡುತ್ತಾರ ಎಂದರೆ ಅದಕ್ಕೆ ಗ್ಯಾರಂಟಿ ನೀಡಲಾಗುವುದಿಲ್ಲ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top