ಮನೋರಂಜನೆ

ಹೆಸರು ಬದಲಿಸಿಕೊಂಡ ಪುಟ್ಟಗೌರಿ ಖ್ಯಾತಿಯ ರಕ್ಷಿತ್​ ಅಲಿಯಾಸ್ ಮಹೇಶ

ಪುಟ್ಟಗೌರಿ ಧಾರವಾಹಿ ಕನ್ನಡ ಧಾರಾವಾಹಿಗಳ ಇತಿಹಾಸದಲ್ಲೆ ಒಂದು ಹೊಸ ದಾಖಲೆ ಬರೆದ ಧಾರವಾಹಿ ,ಈ ಧಾರಾವಾಹಿಯು ಕೊನೆಯ ವರೆಗೂ ಹೈ ಟಿ ಆರ್ ಪಿ ಹೊಂದಿದೆ ,ಹೆಣ್ಣು ಮಕ್ಕಳ ಫೇವರಿಟ್ ಅಧಿಕ ಸಂಚಿಕೆ ಹೊಂದಿದ ಸೀರಿಯಲ್ ಆಗಿತ್ತು .ಈ ಧಾರಾವಾಹಿಯ ಪ್ರತಿಯೊಬ್ಬ ನಟ ನಟಿಯರಿಗೂ ಒಂದು ಒಳ್ಳೆ ಬ್ರೇಕ್ ಕೊಡ್ತು ಈ ಸೀರಿಯಲ್.

 

 

 

ಪುಟ್ಟ ಗೌರಿ ಧಾರಾವಾಹಿಯ ನಾಯಕ ನಟ ಮಹೇಶ ಅಲಿಯಾಸ್ ರಕ್ಷಿತ್ ತಮ್ಮ ಹೆಸರನ್ನು ಬದಲಾಯಿಸಿಕೊಂಡು ಸ್ಯಾಂಡಲ್​ವುಡ್​ಗೆ ಎಂಟ್ರಿ ನೀಡುತ್ತಿದ್ದಾರೆ.ರಕ್ಷಿತ್ ಈಗ ರಕ್ಷ್ ಆಗಿ ಅವರ ಹೆಸರನ್ನು ಬದಲಿಸಿಕೊಂಡಿದ್ದಾರೆ ಸ್ಯಾಂಡಲ್‍ವುಡ್‍ನಲ್ಲಿ ಈಗಾಗಲೇ ರಕ್ಷಿತ್ ಶೆಟ್ಟಿ ಇರುವುದರ ಕಾರಣ ಅವರು ತಮ್ಮ ಹೆಸರನ್ನು ರಕ್ಷ್ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ.8ಎಂಎಂ ಚಿತ್ರದ ನಿರ್ದೇಶಕರಾದ ಹರಿಕೃಷ್ಣ ರಕ್ಷ್ ಅವರ ಹೊಸ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ‘ರೆಡ್’ ಎಂದು ಹೆಸರಿಡಲಾಗಿದೆ. ಈ ಚಿತ್ರದಲ್ಲಿ ರಕ್ಷ್ ಹ್ಯಾಕರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಕ್ಷ್‍ಗೆ ನಾಯಕಿಯಾಗಿ ಸೋನು ಗೌಡ ಮಿಲಿಟರಿ ಆಫಿಸರ್ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.ಸದ್ಯ ಶುಕ್ರವಾರ ರೆಡ್ ಸಿನಿಮಾದ ಮುಹೂರ್ತ ನಡೆಯಲಿದೆ. ಅಲ್ಲದೇ ಈ ಚಿತ್ರದಲ್ಲಿ ಮತ್ತೊಬ್ಬರು ನಾಯಕಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಮತ್ತೊಬ್ಬ ನಾಯಕಿ ಅಧಿಕೃತವಾಗಿಲ್ಲ. ಈ ಚಿತ್ರಕ್ಕೆ ಜುದಾ ಸ್ಯಾಂಡಿ ಸಂಗೀತ ನೀಡುತ್ತಿದ್ದಾರೆ.

ಈ ರಂಜಿನಿ ಧಾರಾವಾಹಿಯಂದ ಹೊರ ಬರುತ್ತಿದ್ದಂತೆ ಧಾರಾವಾಹಿ ಕೊನೆಗೊಳ್ಳುತ್ತೆ ಎಂಬ ಮಾತುಗಳು ಕೇಳಿ ಬಂದಿದ್ದವು. ರಂಜಿನಿ ಕಿರುತೆರೆಯಿಂದ ಹಿರಿತೆರೆ ಅತ್ತ ಗಮನ ಹರಿಸುತ್ತಿದ್ದ ಹಿನ್ನೆಲೆಯಲ್ಲಿ ಧಾರಾವಾಹಿಯಿಂದ ಹೊರ ಹೋಗಿದ್ದಾರೆ. ನಮ್ಮ ಕಥೆಗೆ ಮಂಗಳ ಗೌರಿ ಹೊಸ ತಿರುವನ್ನು ನೀಡಲಿದೆ ಎಂದು ನಿರ್ದೇಶಕರು ಸ್ಪಷ್ಟಪಡಿಸಿದ್ದರು

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top