fbpx
ಮನೋರಂಜನೆ

ಗಂಡ ಹೆಂಡತಿ ಚಿತ್ರದ ನಟಿ ಸಂಜನಾಗೆ ನಿರ್ದೇಶಕ ಕೊಟ್ಟ ಹಿಂಸೆಯನ್ನು ಸಂಜನಾ ಪರಿ ಪರಿಯಾಗಿ ಬೆಚ್ಚಿಬೀಳಿಸೋ ಹಾಗೇ ಬಿಚ್ಚಿಟ್ಟಿಡು ಹೀಗೆ

ಸಿನಿಮಾಗಳಲ್ಲಿ ನಟಿಸಲು ಅವಕಾಶ ಕೊಡುವ ಆಮಿಷವೊಡ್ಡಿ ನಟಿಯರನ್ನು ಮಂಚಕ್ಕೆ ಆಹ್ವಾನಿಸುವ ಕಾಯಿಲೆ ಎಲ್ಲ ಚಿತ್ರರಂಗಗಳಿಗೂ ಸಾಂಕ್ರಾಮಿಕವಾಗಿ ಹರಡಿರೋ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಇಂಥ ಕಾಸ್ಟ್ ಕೌಚಿಂಗ್‌ನ ಸರಣಿ ಇದೀಗ ಎಲ್ಲೆಲ್ಲಿಯೋ ಬಿಚ್ಚಿಕೊಳ್ಳುತ್ತಿವೆ. ಇತ್ತೀಚಿನ ದಿನಗಳಲ್ಲಿ ದೇಶವ್ಯಾಪಿ ಭಾರಿ ಚರ್ಚೆಯನ್ನು ಹುಟ್ಟುಹಾಕಿರುವ ಇಂತಹ ಅನಿಷ್ಟ ಪಿಡುಗಿನ ವಿರುದ್ಧ ದಕ್ಷಿಣ ಭಾರತ ಚಿತ್ರರಂಗದ ಎಲ್ಲಾ ಭಾಷೆಯ ಪ್ರಸಿದ್ಧ ಯುವ ನಟಿಯರನೇಕರು ತಾವೇ ಅನುಭವಿಸಿದ್ದ ಕಾಸ್ಟಿಂಗ್ ಕೌಚ್ ಮನೋ ವ್ಯಾಕುಲವನ್ನು ಸಾಂದರ್ಭಿಕವಾಗಿ ಬಿಚ್ಚಿಡುತ್ತಿದ್ದಾರೆ.

ಇತ್ತೀಚಿಗೆ ಕಾಸ್ಟಿಂಗ್ ಕೌಚ್ ವಿರುದ್ಧ ರೊಚ್ಚಿಗೆದ್ದು ನಡುರಸ್ತೆಯಲ್ಲಿ ಬಟ್ಟೆಗಳನ್ನು ಬಿಚ್ಚಿ ಅರೆ ಬೆತ್ತಲೆ ಪ್ರತಿಭಟನೆ ನಡೆಸಿದೇಟಿಗೆ ತೆಲುಗು ಚಿತ್ರರಂಗದೊಳಗೆ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿ ಇಡೀ ದೇಶದಾದ್ಯಂತ ಸುದ್ದಿಗೆ ಗ್ರಾಸವಾಗಿತ್ತು. ಅದಾದೇಟಿಗೆ ಹಲವು ಚಿತ್ರರಂಗದ ನಟಿಯರೂ ಕೂಡ ಚಿತ್ರರಂಗದಲ್ಲಿ ತಮಗಾಗುತ್ತಿರುವ ಚಿತ್ರ ಹಿಂಸೆಯನ್ನು ಒಂದರ ಹಿಂದೊಂದರಂತೆ ಬಿಚ್ಚಿಡುತ್ತಾ ಬಂದಿದ್ದಾರೆ.ಮೊನ್ನೆ ಎಷ್ಟೇ ಸಂಗೀತ ಶೆಟ್ಟಿ ತಾನು ಅನುಭವಿಸಿದ ಹಿಂಸೆ ಹಾಗು ಅನ್ಯಾಯದ ಬಗ್ಗೆ ಬಿಡಿ ಬಿಡಿ ಯಾಗಿ ಬಿಚ್ಚಿಟ್ಟರು .

 

 

 

ಮೀಟೂ ಅಭಿಯಾನ ಸ್ಯಾಂಡಲ್​ವುಡ್​ನಲ್ಲಿ ಭರ್ಜರಿಯಾಗಿ ಸದ್ದು ಮಾಡುತ್ತಿದೆ ,ಈ ಬೆನ್ನಲ್ಲೇ ಈಗ ಗಂಡ ಹೆಂಡತಿ ಫಿಲಂ ಹೀರೋಯಿನ್ ತಾನು ಅನುಭವಿಸದ ಕಿರುಕುಳದ ಬಗ್ಗೆ ಮಾತನಾಡಿ ಒಂದು ಹೊಸ ಸಂಚಲನ ಸೃಷ್ಟಿಸಿದ್ದಾರೆ,ಸಂಜನಾ ಗಲ್ರಾನಿ 2006ರಲ್ಲಿ ತಮಗಾದ #Metoo ಅನುಭವವನ್ನ ಹಂಚಿಕೊಂಡಿದ್ದಾರೆ,ಗಂಡ ಹೆಂಡತಿ ಸಿನಿಮಾ 2006 ರಲ್ಲಿ ತೆರೆ ಕಂಡಿತ್ತು. ಆಗ ನನಗೆ ಕೇವಲ 16 ನೇ ವಯಸ್ಸಷ್ಟೆ, ಆಗಲೇ ನನಗೆ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರು ಮಾನಸಿಕ ಕಿರುಕುಳ ನೀಡಿದ್ರು ಅಂತ ಸಂಜನಾ ಆರೋಪಿಸಿದ್ದಾರೆ. ಮರ್ಡರ್ ಸಿನಿಮಾದ ಹಿಂದಿ ರೀಮೇಕ್ ಇದು, ಆದ್ರೆ, ಕನ್ನಡಕ್ಕೆ, ಸೌತ್​ಗೆ ತಕ್ಕಂತೆ ಬದಲಾಯಿಸುತ್ತೇವೆ. ನಮ್ಮ ಸಂಸ್ಕೃತಿಗೆ ತಕ್ಕ ಸಿನಿಮಾ ಮಾಡ್ತೀವಿ ಅಂತ ಹೇಳಿದ್ದರು. ಹೀಗಾಗಿ ನಾನು ಚಿತ್ರಕ್ಕೆ ಒಪ್ಪಿಕೊಂಡಿದ್ದೆ. ಆದ್ರೆ, ನಂತರ ಒತ್ತಾಯಪೂರ್ವಕವಾಗಿ ಕಿಸ್ಸಿಂಗ್ ಸೀನ್ಸ್ ಮಾಡಿಸಿದ್ರು. ಇಲ್ಲದಿದ್ರೆ ನಿರ್ಮಾಪಕ ಸಂಘಕ್ಕೆ ಹೇಳ್ತೀವಿ ಅಂತ ಬೆದರಿಕೆ ಹಾಕಿದ್ರು.

 

 

 

21 ದಿನ ಬ್ಯಾಂಕಾಕ್​ನಲ್ಲಿ ಶೂಟಿಂಗ್ ಇತ್ತು. ಅದಕ್ಕೆ ನನ್ನ ಅಮ್ಮನನ್ನ ಕರೆದುಕೊಂಡು ಹೋಗಲು ಕೂಡ ವಿರೋಧಿಸಿದ್ದರು. ಒಬ್ಬರೇ ಬರೋಕೆ ಆಗಲ್ವಾ ಎಂದು ಕೇಳಿದ್ರು.ಇದರಿಂದ ಅಮ್ಮ ಕೂಡ ಭಯ ಪಟ್ಟಿದ್ದರು. ಆಮೇಲೆ ಖರ್ಚು ಹೆಚ್ಚಾಗುತ್ತೆ ಅಂತ ಅಮ್ಮನನ್ನ ವಾಪಸ್ ಕಳಿಸಿದ್ರು. ಆಗ ನನಗೆ ಚಿತ್ರರಂಗವೇ ಹೊಸದಾಗಿತ್ತು. ಆ ಚಿತ್ರದಲ್ಲೂ ಹಲವು ದೃಶ್ಯಗಳನ್ನ ಒತ್ತಾಯದಿಂದ ಮಾಡಿಸಿದ್ದು, ಕ್ಯಾಮೆರಾ ಌಂಗಲ್ ಅಂತಲೂ ತುಂಬಾ ಕಳಪೆಯಾಗಿದೆ. ಎಲ್ಲೆಲ್ಲೋ ಕ್ಯಾಮೆರಾ ಇಟ್ಟು ಚಿತ್ರೀಕರಿಸಿದ್ದಾರೆ. ನನ್ನ ಮೇಲೆ ರೇಗಾಡ್ತಿದ್ರು. ಸಾಯೋದಿಲ್ಲ, ಏನೂ ಆಗಲ್ಲ, ಹೇಳಿದ್ದನ್ನ ಮಾಡು ಅಂತಿದ್ರು. ನನಗೆ ಹೇಳಿದ ಕಥೆಯ 5 ಪರ್ಸೆಂಟ್​ನಷ್ಟೂ ಮಾಡಿಲ್ಲ. ನಾನು ಏನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಎಲ್ಲವನ್ನೂ ಸಹಿಸಿಕೊಂಡು ಅಭಿನಯಿಸಿದ್ದೇನೆ. ಸಿನಿಮಾ ರಿಲೀಸ್ ನಂತರವೂ ಒಂದೂವರೆ ವರ್ಷ ಅವಕಾಶವೇ ಇರಲಿಲ್ಲ. ಸ್ವಂತ ಪ್ರತಿಭೆಯಿಂದ ಬೆಳೆದಿದ್ದೇನೆ ಅಂತ ಸಂಜನಾ ಗಂಡ, ಹೆಂಡಿತ ಚಿತ್ರದ ವೇಳೆ ತಮಗಾದ ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top