ಅರೋಗ್ಯ

ಸೂರ್ಯಕಾಂತಿಯಿಂದ ಈ ಕಾಯಿಲೆಗಳನ್ನು ಸುಲಭವಾಗಿ ಗುಣಪಡಿಸ್ಕೊಬಹುದು.

ಸೂರ್ಯಕಾಂತಿಯೆಂದರೆ ಕೇವಲ ನೋಡಲು ಮಾತ್ರ ಸುಂದರವಾಗಿರುತ್ತೆ, ಅದರ ಬೀಜದಿಂದ ಎಣ್ಣೆಯಷ್ಟೇ ತೆಗೆಯಬಹುದು ಎಂದೇ ಹಲವಾರು ತಿಳ್ಕೊಂಡಿರ್ತಾರೆ. ಆದರೆ ಸೂರ್ಯಕಾಂತಿಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ ಸೂರ್ಯಕಾಂತಿ ಬೀಜದಲ್ಲಿನ ಕೆಲ ಪೌಷ್ಟಿಕಾಂಶಗಳು ಮಾನವನ ದೇಹಕ್ಕೆ ಅಗತ್ಯವಾದ ಅಂಶಗಳನ್ನು ನೀಡುತ್ತವೆ.ಸೂರ್ಯಕಾಂತಿ ಬೀಜಗಳಿಂದ ಮಾನವನ ದೇಹದಮೇಲಾಗುವ ಪರಿಣಾಮಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.

 

 

 

ಜೀವಕೋಶ ಅರೋಗ್ಯ:ಸೂರ್ಯಕಾಂತಿ ಬೀಜದ ಎಣ್ಣೆಯಲ್ಲಿ ‘ವಿಟಮಿನ್ ಇ’ ಅಂಶ ಹೆಚ್ಚಾಗಿರುವುದರಿಂದ ರೋಗ ಹರಡುವ ರೋಗಾಣುಗಳ ವಿರುದ್ಧ ಹೋರಾಡಿ ಜೀವ ಕೋಶಗಳಿಗೆ ಹಾನಿಯಾಗದಂತೆ ತಡೆಯುತ್ತದೆ.ಸೂರ್ಯಕಾಂತಿ ಬೀಜಗಳನ್ನು ತಿನ್ನುವುದರಿಂದ ಹೊಸ ಜೀವಕೋಶಗಳ ಉತ್ಪತ್ತಿಯಲ್ಲಿ ಸಹಕಾರಿಯಾಗುತ್ತದೆ.

 

ಅಜೀರ್ಣತೆಯನ್ನು ಹೋಗಲಾಡಿಸುತ್ತದೆ:ಸೂರ್ಯಕಾಂತಿ ಬೀಜದ ಎಣ್ಣೆಯಲ್ಲಿ ನಾರಿನಂಶ ಜಾಸ್ತಿ ಪ್ರಮಾಣದಲ್ಲಿರುವುದರಿಂದ ಜೀರ್ಣಕ್ರಿಯೆ ಸುಲಭವಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ. ಸೂರ್ಯಕಾಂತಿಯು ಮಲಬದ್ಧತೆ ಮತ್ತು ಪೈಲ್ಸ್ ನಂತಹ ಕಾಯಿಲೆಗಳು ಬರದಂತೆ ತಡೆಯುತ್ತದೆ.

ಹೃದಯದ ಆರೋಗ್ಯ:ಸೂರ್ಯಕಾಂತಿ ಎಣ್ಣೆಯಲ್ಲಿ ಅಧಿಕ ಮ್ಯಾಗ್ನಿಷಿಯಂನ ಪ್ರಮಾಣವಿದ್ದು ಅಧಿಕ ರಕ್ತದೊತ್ತಡ ಉಂಟಾಗದಂತೆ ತಡೆಯುತ್ತದೆ. ಇದರಿಂದಾಗಿ ಹೃದಯಾಘಾತ ಉಂಟಾಗುವ ಸಾಧ್ಯತೆ ಕಡಿಮೆ ಇರುತ್ತದೆ. ಅಡುಗೆಯಲ್ಲಿ ಸೂರ್ಯಕಾಂತಿ ಎಣ್ಣೆಯನ್ನು ಬಳಸುವುದರಿಂದ ಕ್ಯಾನ್ಸರ್, ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

ಉತ್ತಮ ರಕ್ತಪರಿಚಲನೆ:ಸೂರ್ಯಕಾಂತಿ ಎಣ್ಣೆಯಲ್ಲಿ ಅಧಿಕ ಪ್ರೊಟೀನ್ ಮತ್ತು ಕಾರ್ಬೋಹೈಡ್ರೇಟ್ ಇದ್ದು ಅವುಗಳು ದೇಹದಲ್ಲಿ ಗ್ಲೈಕೋಜಿನ್ ಉತ್ಪತ್ತಿ ಮಾಡುವುದರಿಂದ ದೇಹದಲ್ಲಿ ಶಕ್ತಿ ಹೆಚ್ಚುತ್ತದೆ.ಇದರಿಂದ ದೇಹದಲ್ಲಿ ಉತ್ತಮ ರಕ್ತ ಪರಿಚಲನೆಯಾಗುತ್ತದೆ.

ಸ್ನಾಯುಗಳು ಬಲವಾಗುತ್ತದೆ:ಸೂರ್ಯಕಾಂತಿಯ ಬೀಜಗಳಲ್ಲಿ ಇರುವ ಕಬ್ಬಿಣದಂಶವು ಆಮ್ಲಜನಕವನ್ನು ಹೆಚ್ಚಾಗಿ ಹೀರಿಕೊಂಡು ಸ್ನಾಯು ಮತ್ತು ಮಾಯಂಸಖಂಡಗಳಿಗೆ ಪೂರೈಸುತ್ತದೆ, ಇದರಿಂದ ಸ್ವಾಯುಗಳು ಬಲವಾಗುತ್ತವೆ. ಸೂರ್ಯಕಾಂತಿ ಬೀಜಗಳನ್ನು ತಿನ್ನುವುದರಿಂದ ಸ್ನಾಯುಗಳಿಗೆ ಹೆಚ್ಚಿನ ಶಕ್ತಿ ಬರುತ್ತದೆ.ದ್ರಾಕ್ಷಿ ಗೋಡಂಬಿಯ ಜೊತೆ ಸೂರ್ಯಕಾಂತಿ ಬೀಜವನ್ನು ಸೇವಿಸುವುದು ತುಂಬಾ ಒಳ್ಳೆಯ ಅಭ್ಯಾಸವಾಗಿದೆ.

ಒತ್ತಡವನ್ನು ಕಡಿಮೆ ಮಾಡುತ್ತದೆ:ಸೂರ್ಯಕಾಂತಿ ಬೀಜವನ್ನು ಸೇವಿಸುವುದರಿಂದ ಮತ್ತು ಅಡುಗೆಯಲ್ಲಿ ಸೂರ್ಯಕಾಂತಿಯ ಎಣ್ಣೆಯನ್ನು ಬಳಸುವುದರಿಂದ ಟೆನ್ಷನ್ ಕಡಿಮೆ ಮಾಡುತ್ತದೆ . ಅಲ್ಲದೆ ಇದರಲ್ಲಿರುವ ಕೊಲೀನ್ ಅಂಶ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

ಮಧುಮೇಹಿಗಳಿಗೆ:ಸೂರ್ಯಕಾಂತಿ ಬೀಜಗಳಲ್ಲಿ ಕಂಡುಬರುವ ಪೋಷಕಾಂಶಗಳು ಸಕ್ಕರೆ-ಪುಷ್ಟೀಕರಿಸಿದ ಆಹಾರಗಳೊಂದಿಗೆ ಸಂಬಂಧಿಸಿದ ಸಕ್ಕರೆ ಅಂಶವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಇದು ಮಧುಮೇಹದ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.

ಗರ್ಭಿಣಿ ಉತ್ತಮ ಅರೋಗ್ಯ:ಸೂರ್ಯಕಾಂತಿ ಬೀಜದ ಎಣ್ಣೆಯಲ್ಲಿ ವಿಟಮಿನ್ ಬಿ ಇದ್ದು ಹೊಸ ಜೀವಕೋಶಗಳನ್ನು ಹೆಚ್ಚಾಗಿ ಉತ್ಪತ್ತಿ ಮಾಡುತ್ತದೆ. ಇದರಿಂದ ಗರ್ಭಿಣಿಯ ಹೊಟ್ಟೆಯೊಳಗಿರುವ ಭ್ರೂಣವು ಉತ್ತಮವಾಗಿ ಬೆಳವಣಿಗೆಗೆ ಸಹಕಾರಿಯಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top