ಉಪ್ಪಯುತ್ತ ಮಾಹಿತಿ

ಹೆಣ್ಮಕ್ಳು ಕೈ ಹಾಗೂ ಕಾಲುಗಳಿಗೆ ಮೆಹಂದಿ ಹಾಕಿಕೊಳ್ಳುವುದರಿಂದ ಆಗುವ ಲಾಭ ಹಾಗೂ ಅದರ ಹಿಂದೆ ಇರುವ ವೈಜ್ಞಾನಿಕ ಕಾರಣದ ಬಗ್ಗೆ ಸ್ವಲ್ಪ ತಿಳ್ಕೊಳ್ಳಿ .

ಸ್ತ್ರೀಯರ ಕೈಗಳಿಗೆ ಮತ್ತು ಕಾಲುಗಳಿಗೆ ಮೆಹಂದಿ ಹಾಕಿಕೊಂಡರೆ ಏನು ಫಲ  ಎಂಬುದು ನಿಮಗೆ ಗೊತ್ತೇ ?

ಸ್ತ್ರೀಯರು ಕೈಗಳಿಗೆ ಮೆಹಂದಿಯನ್ನು ಹಾಕಿಕೊಳ್ಳಲೇಬೇಕು. ಆದೇಷ್ಟೋ ಅನೇಕ ಹುಡುಗಿಯರು, ಸ್ತ್ರೀಯರು ಇತ್ತೀಚಿನ ಆಧುನಿಕ ಯುಗದಲ್ಲಿ ಮೆಹಂದಿಯನ್ನು ಇಷ್ಟಪಡುವುದಿಲ್ಲ.ಆದರೆ ಈ ಮೆಹಂದಿಯನ್ನು ಹಾಕಿಕೊಳ್ಳುವುದರಿಂದ ರಸಿಕತನ ಹೆಚ್ಚಾಗುತ್ತದೆ, ನಿಮ್ಮ ಕೈಗೆ ಅಂದ ಕೂಡ ಹೆಚ್ಚುತ್ತದೆ. ಆನಂದ ಹೆಚ್ಚುತ್ತದೆ. ತನ್ನ ಕುಟುಂಬ ಮತ್ತು ಮನೆಯವರನ್ನು ಪ್ರೀತಿಸುವ ಗುಣ ಸ್ತ್ರೀಯರಲ್ಲಿ ಹೆಚ್ಚಾಗುತ್ತದೆ. ಅದು ನಿಮಗೆ ಗೊತ್ತಿದೆಯೇ ? ಎಷ್ಟೋ ಜನ ಮಹಿಳೆಯರು ಇದನ್ನು ಮಾಡುವುದಿಲ್ಲ.

 

 

 

ಕನಿಷ್ಠ ಹದಿನೈದು ದಿನಕ್ಕೆ ಒಮ್ಮೆಯಾದರೂ ಕೈಗೆ ಮೆಹೆಂದಿಯನ್ನು ಹಾಕಿಕೊಳ್ಳಬೇಕು. ಅಷ್ಟೆ ಅಲ್ಲದೆ ಕಾಲಿಗೂ ಕೂಡ ಮುಖ್ಯವಾಗಿ ಹಾಕಿಕೊಳ್ಳಲೇಬೇಕು. ಮೆಹಂದಿ ಹಾಕಿಕೊಂಡಿರುವ ಹೆಣ್ಣನ್ನು ಎಷ್ಟು ಚೆನ್ನಾಗಿ ಅಥವಾ ಅಂದವಾಗಿ ಹಾಕಿಕೊಂಡಿದ್ದಾಳೆ ಎಂದು ಸಹ ನೋಡುತ್ತಾರೆ. ಏನೇನು ಹಾಕಿದ್ದಾರೆ ಆದರಲ್ಲಿ ಎಂದೂ ಸಹ ನೋಡುತ್ತಾರೆ. ಹೂಗಳಿವೆಯೋ, ಮನೆಗಳು ಇದೆಯೋ, ಗೋಪುರಗಳನ್ನು ಕಟ್ಟಿದ್ದಾರೋ, ಅಥವಾ ಆಸೆ ಆಕಾಂಕ್ಷೆ ಭಾವನೆಗಳನ್ನು ಆ ಮೆಹಂದಿ ತೋರಿಸುತ್ತದೆ. ಅಂತಹ ಒಂದು ಶಕ್ತಿ ಆ ಮೆಹಂದಿಯಲ್ಲಿ ಇದೆ.

 

 

 

ಯಾರೂ ತಮ್ಮನ್ನು ಅಲಂಕಾರ ಪೂರ್ವಕವಾಗಿ ಮತ್ತು ಸ್ವಚ್ಛವಾಗಿ ಮೆಹೆಂದಿಯನ್ನು ಹಾಕಿಕೊಳ್ಳುತ್ತಾರೋ, ತಮ್ಮ ಮನೆಯನ್ನು ಸಹ ಅಷ್ಟೇ ಸ್ವಚ್ಛವಾಗಿ ಇಟ್ಟುಕೊಳ್ಳುತ್ತಾರೆ ಹಾಗೂ ಸ್ವಚ್ಛ ಮನಸ್ಸಿನಿಂದ ಪ್ರೀತಿಸುತ್ತಾರೆ. ನೀವು ನೋಡಿ ಬೇಕಾದರೆ ಗಂಡ ಏನೇ ಅಂದರೂ ಕೂಡ, ಗಂಡ ಎಷ್ಟೇ ಒರಟಾಗಿದ್ದರೂ ಕೂಡ, ಅವನನ್ನು ಸರಿದಾರಿಗೆ ತರುವುದರಲ್ಲಿ ಮತ್ತು ಸರಿ ದಾರಿಗೆ ತಂದಿರುವುದಕ್ಕೆ ಮೆಹಂದಿ ಹಾಕಿಕೊಂಡಿರುವ ಹೆಣ್ಣು ಮಕ್ಕಳೇ ಸಾಕ್ಷಿ.

ಆದ್ದರಿಂದ ನಿಮ್ಮ ಮನೆ ಸ್ವಚ್ಛವಾಗಿರಬೇಕು, ಮನಸ್ಸುಗಳು ಚೆನ್ನಾಗಿರಬೇಕು, ನಿಮ್ಮ ಗಂಡ ಸರಿ ದಾರಿಯಲ್ಲಿ ನೆಡೆಯಬೇಕು, ನಿಮ್ಮನ್ನೇ ಪ್ರೀತಿಸಬೇಕು, ನಿಮ್ಮನ್ನು ಎಲ್ಲರೂ ಗೌರವಿಸಬೇಕು, ಸದಾ ನಿಮ್ಮಲ್ಲಿ ಆನಂದ ಇರಬೇಕು . ನಿಮ್ಮನ್ನು ನೀವು ಪ್ರೀತಿಸಬೇಕು, ಸದಾ ಖುಷಿಯಾಗಿರಬೇಕು, ಸದಾ ಸಂತೋಷ ಎನ್ನುವುದು ಮನೆ ಮಾಡಿರಬೇಕು ಎಂದರೆ, ನಿಮ್ಮ ಕೈ ಮತ್ತು ಕಾಲಿನಲ್ಲಿ ಮೆಹೆಂದಿಯನ್ನು ಹಾಕಿಕೊಳ್ಳಿ.
ಮೆಹೆಂದಿ ಹಾಕುವುದರ ಹಿಂದಿರುವ ವೈಜ್ಞಾನಿಕ ಕಾರಣ.

ಇದಕ್ಕೆ ಇನ್ನೊಂದು ವೈಜ್ಞಾನಿಕ ಕಾರಣವೂ ಇದೆ. ಅದೇನೆಂದರೆ ಮೆಹಂದಿ ಹಾಕಿಕೊಳ್ಳುವುದರಿಂದ ಹೆಣ್ಣಿನ ದೇಹದಲ್ಲಿರುವ ಉಷ್ಣಾಂಶ ಕಡಿಮೆಯಾಗುತ್ತದೆ. ದೇಹವನ್ನು ಮೆಹಂದಿಯ ತಂಪಾಗಿ ಇರಿಸುತ್ತದೆ. ಯಾಕೆಂದರೆ ಹೆಣ್ಣಿನ ದೇಹದಲ್ಲಿ ಉಷ್ಣತೆ ಎನ್ನುವುದು ಅಧಿಕವಾಗಿ ಇರುತ್ತದೆ. ಆದ್ದರಿಂದ ಇದು ವೈಜ್ಞಾನಿಕವಾಗಿಯೂ ಕೂಡ ಆರೋಗ್ಯಕ್ಕೆ ಒಳ್ಳೆಯದು ನಿಮ್ಮ ದೇಹವನ್ನು ತಂಪಾಗಿ ಇರಿಸುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top