ಅರೋಗ್ಯ

ನೀವು ನಿದ್ದೆಯಲ್ಲಿ ಕನಸು ಕಾಣುವುದು ಕಡಿಮೆಯಾಗಿದೆಯೇ, ಆಗದ್ರೆ ನೀವು ಈ ರೋಗಕ್ಕೆ ಹತ್ತಿರವಾಗುತ್ತಿದ್ದಾರಾ,ಒಂದ್ಸಲ ನೋಡ್ಕೊಳ್ಳಿ

ರಾತ್ರಿ ಮಲಗಿದಾಗ ಕನಸುಗಳು ಬೀಳುವುದು ನಿಮ್ಮ ನಿದ್ರೆಯಲ್ಲಿ ಕಡಿಮೆಯಾಗಿದ್ದರೆ, ನೀವು ಹಲವು ರೋಗಗಳಿಗೆ ದಾಸರಾಗುವುದು ಖಂಡಿತ ಎನ್ನುವುದು ಅಧ್ಯಯನಗಳಿಂದ ತಿಳಿದು ಬಂದಿದೆ .ಕನಸಿನ ನಷ್ಟವೂ ನಿದ್ರಾಹೀನತೆಯ ಒಂದು ಅಂಶವಾಗಿದ್ದು ಇದು ನಿಮ್ಮನ್ನು ಹಲವು ಮಾನಸಿಕ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ ಎಂಬುದು ಸಂಶೋಧನೆಗಳಿಂದ ತಿಳಿದು ಬಂದಿದೆ,ನಿಮ್ಮ ನಿದ್ರೆಯಲ್ಲಿ ಎರಡು ಹಂತಗಳು ಇರುತ್ತವೆ ಒಂದು REM (ರ್ಯಾಪಿಡ್ ಐ ಮೂವ್ಮೆಂಟ್) ಮತ್ತು NREM (ನಾನ್ ರ್ಯಾಪಿಡ್ ಐ ಮೂವ್ಮೆಂಟ್)ಎಂಟು ಗಂಟೆಯ ನಿದ್ರೆಯಲ್ಲಿ ಈ ಸೈಕಲ್ ಗಳು ಸುಮಾರು ನಾಲ್ಕು ಬಾರಿ ಕಂಡುಬರುತ್ತವೆ. REM ಸೈಕಲ್ ನಲ್ಲಿ ನಿಮಗೆ ಕನಸು ಬೀಳುತ್ತದೆ. ಮಲಗಿದ 90 ನಿಮಿಷಗಳ ನಂತರ ರಾತ್ರಿಯಲ್ಲಿ ಮತ್ತು ಮುಂಜಾನೆಯ ಬೆಳಗ್ಗೆ ಜನರು ನಿದ್ರೆ ಮಾಡುವಾಗ, ಕನಸು ಕಾಣುತ್ತಾರೆ. ನಿಮ್ಮ ನಿದ್ರೆಯ ಚಕ್ರವು 25 % ಪರ್ಸೆಂಟ್ ನಷ್ಟು REM ನಿದ್ರೆಯೇ ಪುನರಾವರ್ತನೆಯ ಕಾರಣದಿಂದಾಗಿ ರಾತ್ರಿಯಲ್ಲಿ REM ನಿದ್ರೆಗೆ ಹಲವು ಬಾರಿ ಪ್ರವೇಶಿಸುತ್ತಾರೆ .

 

 

 

ಅಮೆರಿಕದ ಅರಿಜೋನಾ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ರೂಬಿನ್ ನೈಮನ್ ಪ್ರಕಾರ ಅ ವ್ಯಕ್ತಿ ಕನಸು ಕಾಣುತ್ತಿಲ್ಲವೆಂದು, ಅವರು ನಿದ್ರೆಯ ಗುಣಮಟ್ಟ ಸರಿಯಿಲ್ಲವೆಂದು ಅರ್ಥ. ಇದು ಕ್ರಮೇಣ ಅನೇಕ ರೋಗಗಳನ್ನು ತಂದೊಡ್ಡುತ್ತವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.REM ನಿದ್ರೆಯ ಸಮಯದಲ್ಲಿ ನಿಮ್ಮ ಮೆದುಳು ಮತ್ತು ದೇಹವು ಶಕ್ತಿಯನ್ನು ತುಂಬಿಕೊಳ್ಳುತ್ತದೆ ಮತ್ತು ಕನಸುಗಳು ಸಂಭವಿಸುತ್ತವೆ . REM ನೆನಪುಗಳು , ಕಲಿಯುವುದು, ಕಲಿಕೆ ಮತ್ತು ನಿಮ್ಮ ಚಿತ್ತ ಸ್ಥಿತಿಯನ್ನು ಸಮತೋಲನ ಗೊಳಿಸುವುದರಲ್ಲಿ ತೊಡಗಿಸಿಕೊಳ್ಳುತ್ತದೆ ಎಂದು ಭಾವಿಸಲಾಗಿದೆ .ಮೆದುಳಿನ ವಿವಿಧ ಭಾಗಗಳಿಗೆ ಮತ್ತು ಕಳುಹಿಸಿದ ಸಂಕೇತಗಳಿಗೆ ಪ್ರತಿಕ್ರಿಯೆಯಾಗಿ REM ನಿದ್ರೆ ಪ್ರಾರಂಭವಾಗುತ್ತದೆ. ಸಿಗ್ನಲ್ ಗಳನ್ನು ಮೆದುಳಿನ ಸೆರೆಬ್ರಲ್ ಕಾರ್ಟೆಕ್ಸ್ ಗೆ ಕಳುಹಿಸಲಾಗುತ್ತದೆ. ಅದು ಕಲಿಕೆ , ಆಲೋಚನೆ ಮತ್ತು ಸಂಗ್ರಹಿಸುವ ಮಾಹಿತಿಗೆ ಕಾರಣವಾಗಿದೆ.

REM ನಿದ್ರೆಯು ಕಲಿಕೆಗೆ ಬಳಸಲಾಗುವ ಮೆದುಳಿನ ಭಾಗಗಳನ್ನು ಪ್ರಚೋದಿಸುತ್ತವೆ ಜನರಿಗೆ REM ನಿದ್ರೆ ಕಳೆದುಕೊಂಡಿರುವಾಗ, ನಿದ್ರೆಗೆ ಹೋಗುವ ಮುನ್ನ ಅವರು ಏನು ಕಲಿತರು ಎಂದು ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ಅಧ್ಯಯನಗಳು ತೋರಿಸಿವೆ .REM ನಿದ್ರೆಯ ಕೊರತೆ ಮೈಗ್ರೇನ್, ಮಾನಸಿಕ ಖಿನ್ನತೆ, ಏಕಾಗ್ರತೆಯ ಕೊರತೆ, ಹೈಪೋಥೈರಾಯ್ಡಿಸಂ, ನೆನಪಿನ ಕೊರತೆ ಸೇರಿದಂತೆ ಹಲವು ಅನಾರೋಗ್ಯಗಳಿಗೆ ಮೂಲ ಕಾರಣವಾಗಿದೆ.ನಿಯಮಿತ ನಿರ್ದಿಷ್ಟ ವೇಳೆಯಲ್ಲಿ ನಿದ್ರಿಸಿ ಮಲಗುವ ಮುಂಚೆ ಹತ್ತು ನಿಮಿಷಗಳ ಕಾಲ, ಪ್ರಾಣಾಯಾಮ ಅಭ್ಯಾಸ ಮಾಡಿ ಮೊಬೈಲ್ ಮತ್ತು ಟಿವಿಗಳಿಂದ ದೂರವಿರಿ. ಒಳ್ಳೆಯ ಪೌಷ್ಟಿಕ ಆಹಾರ ಸೇವಿಸಿ. ನಿಮ್ಮ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಿಕೊಂಡು ಆರೋಗ್ಯವಂತರಾಗಿರಿ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top