ಮನೋರಂಜನೆ

“ವಿನಾಶಕಾಲೆ ವಿಪರೀತ ಬುದ್ಧಿ”ಎಂದು ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನ ಪಡೆದವಳ ಮೇಲೆ ಕಿಡಿಕಾರಿದ ನವರಸ ನಾಯಕ

ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರೋ ನವರಸ ನಾಯಕ ಜಗ್ಗೇಶ್ ಇದೀಗ ಒಂದು ಸ್ವಾರಸ್ಯಕರ ವಿಚಾರವನ್ನು ತಮ್ಮ ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ಜಗ್ಗೇಶ್ ಅವರನ್ನು ಅಭಿಮಾನಿಸುವವರು ಮೊದಲು ಮಾತಾಡೋದೇ ಅವರ ಭಿನ್ನವಾದ ಮ್ಯಾನರಿಸಂ ಮತ್ತು ತಮ್ಮ ವಿಶಿಷ್ಟವಾದ ನಟನಾ ಶೈಲಿ.

ಚಿತ್ರರಂಗಕ್ಕೆ ಪೋಷಕ ನಟನಾಗಿ ಎಂಟ್ರಿ ಕೊಟ್ಟು ಖಳನಾಯಕನಾಗಿ, ಹಾಸ್ಯನಟನಾಗಿ ನಟಿಸಿ ಆಮೇಲೆ ತಮ್ಮ ಸ್ವಪ್ರತಿಭೆಯಿಂದಲೇ ನಾಯಕನಟನಾಗಿ ಬೆಳೆದಿರುವ ಜಗ್ಗೇಶ್ ವೃತ್ತಿ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ನೋಡಿದ್ದಾರೆ. ತಾವು ಹೀರೊ ಆಗೋಕೂ ಮುಂಚೆ ಅಂದ್ರೆ ಸಣ್ಣ ಪುಟ್ಟ ಪಾತ್ರಗಳನ್ನ ನಿರ್ವಹಿಸುವ ಪೋಷಕ ನಟನಾಗಿದ್ದಾಗಾಲೇ ತೆಲುಗು ಚಿತ್ರರಂಗದ ಮೇರು ನಟ NTR ನೀವು ಮುಂದೊಂದು ದಿನ ದೊಡ್ಡ ನಟನಾಗಿ ಬೆಳೆಯುತ್ತೀರಿ ಎಂದು ಜಗ್ಗೇಶ್’ಗೆ ಹೇಳಿದ್ದರಂತೆ.

ವಯಕ್ತಿಕ, ಸಿನಿಮಾ ವಿಚಾರಗಳ ಜೊತೆಗೆ ಸಮಾಜದಲ್ಲಿ ನಡೆಯುವ ಆಗುಹೋಗುಗಳ ಬಗ್ಗೆ ತಮ್ಮ ಟ್ವಿಟರ್ ಅಕೌಂಟ್ ಮೂಲಕವೇ ಪ್ರತಿಕ್ರಿಯಿಸುತ್ತಾ ಸದಾ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುವವರು ನವರಸ ನಾಯಕ ಜಗ್ಗೇಶ್.. ಕನ್ನಡದ ಮಟ್ಟಿಗೆ ಟ್ವಿಟರ್’ನಲ್ಲಿ ಅತಿಹೆಚ್ಚು ಸಕ್ರಿಯವಾಗಿರೋ ನಟ ಎಂಬ ಕೀರ್ತಿ ನಿಸ್ಸಂದೇಹವಾಗಿ ಜಗ್ಗೇಶ್ ಅವರಿಗೆ ಸಲ್ಲುತ್ತದೆ
ಸುಪ್ರೀಂ ಕೋರ್ಟ್ ನಿಂದ ಅನುಮತಿ ಸಿಕ್ಕಿದ ಕೂಡಲೇ ಕೆಲ ಮಹಿಳೆಯರು ಶಬರಿಮಲೆ ಪ್ರವೇಶ ಮಾಡಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿದ್ದಾರೆ,ಸದ್ಯ ಕಿಸ್​ ಆಫ್​ ಲವ್​​ ಖ್ಯಾತಿಯ ರೆಹನಾ ಫಾತಿಮಾ, ಪೊಲೀಸರ ಭದ್ರತೆಯೊಂದಿಗೆ ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನ ಮಾಡಿದ್ದಾಳೆ,ದರ್ಶನ ಪಡೆದ ನಂತರ ಫೋಟೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದರ ಮೂಲಕ ಸುದ್ದಿಯಾಗಿದ್ದಾಳೆ.ಆ ಫೋಟೋ ಈಗ ಫುಲ್ ವೈರಲ್ ಆಗಿದ್ದು ಅನೇಕ ವಿವಾದಗಳಿಗೆ ಎಡೆ ಮಾಡಿಕೊಟ್ಟಿದೆ ,ರೆಹನಾ ಫಾತಿಮಾ ಮಾಲೆ ಧರಿಸಿ ದರ್ಶನ ಪಡೆದ ನಂತರತನ್ನ ಫೋಟೋವನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದರು.

 

 

 

ಈ ಫೋಟೋ ನೋಡಿದ ಜಗ್ಗೇಶ್ ಆಕೆ ಆ ಫೋಟೋದಲ್ಲಿ ಆಕೆ ನಿಂತಿರುವ ಭಂಗಿಯನ್ನು ನವರಸನಾಯಕ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ವಿನಾಶಕಾಲೆ ವಿಪರೀತ ಬುದ್ಧಿ ಎಂದು ಬರೆದುಕೊಂಡು ಅವರ ಅಭಿಪ್ರಾಯ ತಿಳಿಸಿದ್ದಾರೆ ಅದರ ಜೊತೆ “ಅನ್ಯಧರ್ಮಿಯಳು ಈ ಅವತಾರದಲ್ಲಿ ಪೊಲೀಸರ ಬೆಂಗಾವಲಿನಲ್ಲಿ ಅಯ್ಯಪ್ಪನ ದರ್ಶನಮಾಡಿ ಸಾಧಿಸಿ ಬಣ್ಣದ ವೇಶತೊಟ್ಟು ಜಾಲತಾಣದಲ್ಲಿ ಹಾಕಿರುವ ಪೋಸ್ಟ್..ಇದು ನಮ್ಮ ಸಂಪ್ರದಾಯಕ್ಕೆ ಕೊಡಲಿಪೆಟ್ಟಲ್ಲವೆ! ವಿನಾಶಕಾಲೆ ವಿಪರೀತ ಬುದ್ಧಿ!ಇಂಥವರ ಸಂತೈಸಿ ವಿಕೃತ ಆನಂದ ಪಡುತ್ತಿರುವ ಕೇರಳ ಸರ್ಕಾರ!ಬ್ರಿಟಿಷರು ಮೊಘಲ್ ಗಳಿಗೆ ಬಗ್ಗದ ಹಿಂದೂಧರ್ಮ ಇಂಥವರಿಗಾ? ಜೈಹಿಂದ್ “ಎಂದು ತಮ್ಮ ಟ್ವಿಟ್ಟರ್​​ನಲ್ಲಿ ಬರೆದುಕೊಂಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top