fbpx
ದೇವರು

ಜಾತಕದಲ್ಲಿ ಬರುವ ಮಾಂಗಲ್ಯ ದೋಷ ಅಂದ್ರೆ ಏನು,ಈ ದೋಷ ಯಾರ್ಯಾರಿಗೆ ಬರುತ್ತೆ ಹಾಗೂ ಈ ದೋಷದಿಂದ ಮದುವೆ ಮುರಿದು ಬೀಳುತ್ತಾ,ನೀವೇ ನೋಡಿ

ಮಾಂಗಲ್ಯ ದೋಷಕ್ಕೆ ಕಾರಣ ಏನು ? ಯಾರ್ಯಾರಿಗೆ ಈ ಮಾಂಗಲ್ಯ ದೋಷ ಬರುತ್ತದೆ ಮತ್ತು ಯಾಕೆ ಬರುತ್ತದೆ.ಮತ್ತು ಮದುವೆ ಮುರಿದು ಬೀಳುವುದು ಯಾಕೆ ?
ಕೆಲವರು ಹೇಳುತ್ತಾರೆ ಒಂದು ಮದುವೆ ಮಾಡುವುದು ತುಂಬಾ ಕಷ್ಟ ಎಂದು. ಹಾಗೆ “ಸಾವಿರ ಸುಳ್ಳನ್ನು ಹೇಳಿ ಒಂದು ಮದುವೆ ಮಾಡು” ಎಂದು ಹೇಳುತ್ತಾರೆ.ಆದರೆ ಇತ್ತೀಚಿನ ಆಧುನಿಕ ಯುಗದಲ್ಲಿ ಒಂದು ಸುಳ್ಳನ್ನು ಕೂಡ ಹೇಳುವುದಿಲ್ಲ, ಎಲ್ಲವನ್ನೂ ಪ್ರತಿಯೊಂದು ಮಾಹಿತಿಯನ್ನು ಕೊಡುತ್ತೇವೆ,ಆದರೂ ಮದುವೆ ಮಾಡಿಕೊಳ್ಳಿ ಎಂದರೆ ಮಾಡಿಕೊಳ್ಳಲು ತಯಾರಿರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಜಾತಕ ಎನ್ನುವುದು ಎಷ್ಟು ಮುಖ್ಯವಾಗುತ್ತದೆ. ಜಾತಕದಲ್ಲಿ ಮದುವೆ ವಿಳಂಬಕ್ಕೆ ಯಾವೆಲ್ಲ ದೋಷಗಳು ಕಾರಣವಾಗುತ್ತವೆ ?ಎಂದು ನಿಮಗೆ ಗೊತ್ತೇ ?

ನಾವು ಜಾತಕವನ್ನು ಬರೆಯುವಾಗ ಮುಖ್ಯವಾಗಿ ಒಂದು ಶ್ಲೋಕವನ್ನು ಬರೆಯುತ್ತೇವೆ “ಜನನೀ ಜನ್ಮ ಸೌಖ್ಯಾನಾಂ ವರದತಿ ಕುಲ ಸಂಪದ ಪದವಿ ಪೂರ್ವ ಪುಣ್ಯಾನಾಮ್ ಲಿಖ್ಯತೇ ಜನ್ಮ ಪತ್ರಿಕಾ” . ಅಂದರೆ ಜಾತಕ ಎನ್ನುವುದು ಕನ್ನಡಿ ಇದ್ದ ಹಾಗೆ. ನಮ್ಮ ಜಾತಕದಲ್ಲಿ ನಾವು ಇರುವ ದೋಷಗಳನ್ನು, ಯೋಗಗಳನ್ನು ಮೊದಲೇ ನಿರ್ಣಯವನ್ನು ಮಾಡಬಹುದು. ಇದು ನಿಜವಾದ ಜ್ಯೋತಿಷ್ಯದಲ್ಲಿ ಈಗಲೂ ಕೂಡ ಸಾಧ್ಯ. ನಾವು ಇದನ್ನು ತಿಳಿದುಕೊಳ್ಳಬಹುದು.
ಜಾತಕ ಎಂದ ತಕ್ಷಣ ನೀವು ನೋಡಬಹುದು. ಅದರಲ್ಲಿ ಹನ್ನೆರಡು ಮನೆಗಳಿರುತ್ತವೆ ಆ ಹನ್ನೆರಡು ಮನೆಗಳಲ್ಲಿ ಮೇಷ ರಾಶಿಯಿಂದ ಮೀನ ರಾಶಿಯವರೆಗೂ ಇರುತ್ತದೆ. ಉದಾಹರಣೆಗೆ – ಒಬ್ಬ ವ್ಯಕ್ತಿ ಸಿಂಹ ಲಗ್ನದಲ್ಲಿ ಜನನವಾಗಿರುತ್ತಾನೆ ಲಗ್ನಾಧಿಪತಿ ವ್ಯಯಸ್ಥಾನದಲ್ಲಿ ಇದ್ದು, ಕಟಕ ರಾಶಿಯಲ್ಲಿ ಕುಜನು ಸ್ಥಿತನಿದ್ದು ಅಥವಾ ರಾಹುವಿನ ಜೊತೆ, ಕೇತುವಿನ ಜೊತೆ ಕುಜನು ಸ್ಥಿತನಿದ್ದರೆ, ಆಗ ಇವರು ಮದುವೆ ಮಾಡಲಿಕ್ಕೆ ಹೋದರೆ ಮದುವೆಯೂ ಮಂಟಪದವರೆಗೆ ಹೋಗಿ ಅಲ್ಲಿ ಯಾವುದೋ ಒಂದು ಕೇತು ಕಾರಕನಾಗಿರುವಂತಹ ವ್ಯಕ್ತಿಗಳಿಂದ ಒಂದು ಮಾತು ಅಡ್ಡ ಬರುತ್ತದೆ.

 

 

 

ಒಂದು ಗಾದೆ ಮಾತೇ ಇದೆಯಲ್ಲ “ ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು” ಎನ್ನುವ ಹಾಗೆ ಯಾರೋ ಮದುವೆಗೆ ಬಂದಿರುವಂತಹ ಅತಿಥಿಗಳಾಗಿರಬಹುದು ಅಥವಾ ಸಂಬಂಧಿಕರಾಗಿರಬಹುದು. ಇಲ್ಲದೇ ಇರುವ ಮಾತುಗಳನ್ನು ಆಡಿ, ಆ ಮಾತಿನಿಂದ ಮಾತಿಗೆ ಮಾತು ಬೆಳೆದು, ದ್ವೇಷವೂ ಹೆಚ್ಚಾಗಿ ಕೊನೆಗೆ ಮದುವೆಯೇ ನಿಂತು ಹೋಗುತ್ತದೆ. ಅಂತಹ ಉದಾಹರಣೆಗಳು ಬಹಳಷ್ಟನ್ನು ನಾವು ನೋಡಬಹುದು . ಯಾಕೆ ಈ ರೀತಿಯಾಗುತ್ತದೆ ?.
ಎಷ್ಟೋ ಹೆಣ್ಣು ಮಕ್ಕಳಾಗಲಿ ಅಥವಾ ಗಂಡು ಮಕ್ಕಳಾಗಲಿ ನಿಶ್ಚಿತಾರ್ಥವಾಗಿ, ನಿಶ್ಚಿತಾರ್ಥವೂ ಕೂಡ ಮುರಿದು ಬಿದ್ದು ಹೋಗಿರುವುದು ಸಾಕಷ್ಟು ಇವೆ. ಇವೆಲ್ಲವನ್ನೂ ಕೂಡ ನಾವು ಯೋಚನೆಯನ್ನು ಮಾಡಿದಾಗ ಜ್ಯೋತಿಷ್ಯ ಭಾಗದಲ್ಲಿ ವಿಮರ್ಶೆಯನ್ನು ಮಾಡಿದಾಗ, ಮೊದಲು ಮಾಂಗಲ್ಯಾಧಿಪತಿಯಾದ ಕುಜನ ಅನುಗ್ರಹ ಮದುವೆಗೆ ಬೇಕೇ ಬೇಕು.ಅದಕ್ಕೆ ಪಂಚಾಂಗದಲ್ಲಿ ಬರೆದಿದ್ದೇವೆ ಲಗ್ನದಿಂದ, ಶುಕ್ರನಿಂದ ಮತ್ತು ಕುಜನಿಂದ ತೊಂದರೆಗಳು ಮದುವೆಗೆ ಬರುತ್ತವೆ. ಒಂದು, ಎರಡು, ನಾಲ್ಕು, ಏಳು, ಎಂಟು ಮತ್ತು ಹನ್ನೆರಡನೇ ಮನೆ ಈ ಸ್ಥಾನಗಳಲ್ಲಿ ಕುಜನಿದ್ದರೆ ಕುಜ ದೋಷವೂ ಹೆಚ್ಚು, ಅದರಲ್ಲೂ ಮಿಥುನ ಮತ್ತು ಕನ್ಯಾ ಲಗ್ನದಲ್ಲಿ ಜನನವಾಗಿದ್ದವರಿಗೆ ನೂರು ಪ್ರತಿಶತ ಕುಜ ದೋಷವಿರುತ್ತದೆ ಮತ್ತು ವೃಷಭ ಮತ್ತು ತುಲಾ ಲಗ್ನದವರಿಗೆ ನೂರು ಪ್ರತಿಶತ ಕುಜ ದೋಷವಿರುತ್ತದೆ ಮತ್ತು ಮಕರ ಮತ್ತು ಕುಂಭ ಲಗ್ನದಲ್ಲಿ ಜನನವಾಗಿರುವವರಿಗೆ ತ್ರಿಪಾದಿ ದೋಷಕಾರಿ ಅಂದರೆ 75 ಪ್ರತಿಶತ ದೋಷ ಇರುತ್ತದೆ.

ಇದನ್ನು ಮೊದಲೇ ನಿರ್ಣಯ ಮಾಡಿ ಹಿಂದೂ ಸನಾತನ ಧರ್ಮದಲ್ಲಿ, ಪಂಚಾಂಗದಲ್ಲಿ ಈ ರೀತಿ ಹೇಳಲಾಗಿದೆ. ಒಂದು ಮಗು ಹಿಂದು ಸಂಪ್ರದಾಯದಲ್ಲಿ ಜನನವಾದ ತಕ್ಷಣ ಏನು ಮಾಡುತ್ತೇವೆ ? ಎಂದರೆ ಒಂಬತ್ತು ದಿನ ಅಥವಾ ಹನ್ನೊಂದು ದಿನಗಳ ನಂತರ ಮಗು ಮತ್ತು ತಾಯಿಗೆ ನೀರು ಹಾಕುವುದು ಎನ್ನುವ ಸಂಪ್ರದಾಯವನ್ನು ಮಾಡುತ್ತಾರೆ ಅಥವಾ ಅಶೌಚ ಅಥವಾ ಸೂತಕ ಕಳೆದುಕೊಳ್ಳುವುದು ಎನ್ನುವುದನ್ನು ಮಾಡುತ್ತಾರೆ.
ಇನ್ನು ಬ್ರಾಹ್ಮಣರಲ್ಲಿ ವಿವಿಧ ಬ್ರಾಹ್ಮಣ ವರ್ಗದವರು ವಿವಿಧ ಹೆಸರಿನಿಂದ ಕರೆಯುತ್ತಾರೆ. ಪುಣ್ಯಹಾ ಎಂದು ಕರೆಯುತ್ತಾರೆ. ತಾಯಿ ಮಗುವಿಗೆ ನೀರು ಹಾಕಿ ಒಳಗೆ ಕರೆದುಕೊಳ್ಳುವುದಕ್ಕೆ ಪುಣ್ಯಹಾ ಎಂದು ಕರೆಯುತ್ತಾರೆ. ಯಾಕೆ ಮಗುವಿಗೆ ನೀರು ಹಾಕಬೇಕು ? ಇವತ್ತಿನ ಒಂದು ಪರಿಸ್ಥಿತಿಯಲ್ಲಿ ನಾವು ನೋಡಿದಾಗ ಆಸ್ಪತ್ರೆಯಲ್ಲೇ ಮಗುವಿಗೆ ಸ್ನಾನ ಮಾಡಿಸುತ್ತಾರೆ ? ಹೀಗಿರುವಾಗ ನೀರು ಹಾಕುವ ಪದ್ಧತಿ ಹೇಗೆ ಬಂತು ಅಂದರೆ ಇರುವ ಒಂದು ದೋಷಗಳನ್ನು ಕಳೆದುಕೊಂಡು ಅದರ ಜೊತೆಯಲ್ಲೇ ಹೊರಗಡೆ ಬಿಟ್ಟು ಪರಿಶುದ್ಧತೆಯಾಗುವ, ಮಡಿ ಮಾಡಿಕೊಂಡು ಮನೆಯ ಒಳಗಡೆ ತಾಯಿ ಮಗುವನ್ನು ಒಳಗಡೆ ಕರೆದುಕೊಳ್ಳುವುದನ್ನು ಅಂದಿನ ಕಾಲದಲ್ಲಿ ನಿರ್ಣಯ ಮಾಡಿದ್ದರು. ಆದರೆ ಇದು ಬರೀ ಸ್ವಚ್ಛ ಮಾಡುವುದಲ್ಲ. ಮಡಿ ಮಾಡುವುದಷ್ಟೇ ಅಲ್ಲ.

 

 

 

ತಾಯಿ ಮತ್ತು ಮಗುವಿಗೆ ದೋಷಗಳು ಏನಾದರೂ ಇದ್ದರೆ ಅಥವಾ ದುಷ್ಟ ನಕ್ಷತ್ರದಲ್ಲಿ ಜನನವಾಗಿದ್ದರೆ ಅಥವಾ ಮಗು ಜನನವಾಗಿರುವ ಲಗ್ನವನ್ನು ನಾವು ನೋಡಿದಾಗ ತಾಯಿಗೆ ಏನಾದರೂ ಸಮಸ್ಯೆಗಳು ಸಂಭವಿಸುವ ಸಾಧ್ಯತೆಗಳಿದ್ದರೆ ಇವೆಲ್ಲವನ್ನೂ ಕೂಡ ದೋಷ ನಿವಾರಣೆಯನ್ನು ಮಾಡಿಕೊಂಡು ಮನೆಯ ಒಳಗೆ ಬಿಟ್ಟುಕೊಳ್ಳುವ ಸಂಪ್ರದಾಯ ಆಗಿನ ಕಾಲದಿಂದಲೇ ಬಂದಿದೆ. ಆದರೆ ಈಗಿನ ಕಾಲದಲ್ಲಿ ಇದನ್ನು ಯಾರು ಮಾಡುತ್ತಿದ್ದಾರೆ ? ಯಾರೂ ಮಾಡುತ್ತಿಲ್ಲ. ಮದುವೆ ಮಾಡುವ ಸಮಯದಲ್ಲಿ ಅವರು ಏನು ಮಾಡುತ್ತಾರೆ ? ಜ್ಯೋತಿಷ್ಯರ ಬಳಿ ಹೋಗುತ್ತಾರೆ. ಈಗಿನ ಕಾಲದ ಜ್ಯೋತಿಷ್ಯರ ಪರಿಸ್ಥಿತಿಯನ್ನು ನಾವು ನೋಡಿದಾಗ ಚಿತ್ರ ವಿಚಿತ್ರವಾದ ಜ್ಯೋತಿಷ್ಯರನ್ನು ನಾವು ಕಾಣಬಹುದಾಗಿದೆ. ನಿಜವಾದ ಜ್ಯೋತಿಷ್ಯರ ಬಳಿ ಹೋದಾಗ ಅವರು ಹೇಳುತ್ತಾರೆ… ನೋಡಿ ಈ ರೀತಿ ಮಾಂಗಲ್ಯ ದೋಷಗಳು ಇವೆ, ಆದ್ದರಿಂದ ಮೊದಲು ಇವುಗಳನ್ನು ನಿವಾರಣೆ ಮಾಡಿಕೊಳ್ಳಿ ಎಂದು ಹೇಳುತ್ತಾರೆ. ಆದ್ದರಿಂದ ಮೊದಲು ನಿಮ್ಮ ಜಾತಕಗಳನ್ನು ಸರಿಯಾಗಿ ಸರಿಯಾದ ಜ್ಯೋತಿಷ್ಯರ ಬಳಿ ಪರಿಶೀಲಿಸಿ ನಂತರ ಅದರಲ್ಲಿ ಇರುವ ದೋಷಗಳನ್ನು ಸರಿಯಾದ ಕ್ರಮದಲ್ಲಿ ನಿವಾರಣೆ ಮಾಡಿಕೊಳ್ಳಿ ಆಗ ನಿಮಗೆ ಆ ಮಾಂಗಲ್ಯಾಧಿಪತಿಯ ಅನುಗ್ರಹ ಅಂದರೆ ಕುಜನ ಅನುಗ್ರಹ ಪ್ರಾಪ್ತಿಯಾಗುತ್ತದೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top