ಹೆಚ್ಚಿನ

ನೋಡಿ ಇಲ್ಲಿ ಒಂದು ಉಡುಗೊರೆಯಿಂದ ನಿಮಗೆ ಉಡುಗೊರೆಯನ್ನು ನೀಡುವವರು ನಿಮ್ಮ ಏಳಿಗೆಯನ್ನು ಬಯಸುತ್ತಿದ್ದರೋ ಅಥವಾ ನಿಮ್ಮ ಅವನತಿಯನ್ನು ಬಯಸುತ್ತಿದ್ದರೋ ಎಂದು ಸುಲಭವಾಗಿ ಕಂಡುಕೊಳ್ಳಬಹುದು .

ಇಂತಹ ಉಡುಗೊರೆಯನ್ನು ನೀಡುವವರು ನಿಮ್ಮ ಖುಷಿಯನ್ನು ಬಯಸುವುದಿಲ್ಲ .ಆ ವಸ್ತುಗಳು ಯಾವುವು 

ಉಡುಗೊರೆ ನೀಡುವುದು ಜೀವನದ ಒಂದು ಭಾಗವಾಗಿದೆ. ಉಡುಗೊರೆ ಪಡೆದವರು ತುಂಬಾ ಖುಷಿ ಪಡುತ್ತಾರೆ .ಆದರೆ ಉಡುಗೊರೆ ನೀಡಿದವರು ನಿಮ್ಮ ಖುಷಿ ಬಯಸುತ್ತಾರೆ ಅಥವಾ ದುಃಖವನ್ನು ಬಯಸುತ್ತಾರೆ ಎಂಬುದು ಉಡುಗೊರೆ ನೀಡಿದ ವಸ್ತುಗಳೇ ಹೇಳಿಬಿಡುತ್ತದೆ. ಕೆಲವು ವಸ್ತುಗಳು ನಿಮಗೆ ಉಡುಗೊರೆ ರೂಪದಲ್ಲಿ ಸಿಕ್ಕಿದರೆ ಉಡುಗೊರೆ ನೀಡಿದವರು ನಿಮ್ಮ ಖುಷಿ ಬಯಸುವುದಿಲ್ಲ ಎಂದು ಅರ್ಥ ಮಾಡಿಕೊಳ್ಳಿ .

 

 

 

ಹಿಂಸೆ ನೀಡುವ ಹುಲಿಯಂತಹ ಕ್ರೂರ ಪ್ರಾಣಿಗಳ ಫೋಟೋ ಅಥವಾ ಮೂರ್ತಿ ಉಡುಗೊರೆ ರೂಪದಲ್ಲಿ ಸಿಕ್ಕಿದರೆ ಉಡುಗೊರೆ ನೀಡಿದವರು ನಿಮ್ಮ ಯಶಸ್ಸನ್ನು ಬಯಸುತ್ತಿಲ್ಲ ಎಂದೇ ಅರ್ಥ .ಮುಳುಗುತ್ತಿರುವ ಹಡಗನ್ನು ಉಡುಗೊರೆ ರೂಪದಲ್ಲಿ ಪಡೆದವರು ಅದನ್ನು ಮನೆಯಲ್ಲಿಟ್ಟರೆ ಆರ್ಥಿಕ ನಷ್ಟ ಖಂಡಿತವಾಗಿಯೂ ಉಂಟಾಗುತ್ತದೆ .ಚಾಕು ಅಥವಾ ಚೂಪಾದ ವಸ್ತುಗಳನ್ನು ಉಡುಗೊರೆ ರೂಪದಲ್ಲಿ ಪಡೆಯಬೇಡಿ. ಅದನ್ನು ಮನೆಯಲ್ಲಿ ಇಡಬೇಡಿ. ಉಡುಗೊರೆ ಸಿಕ್ಕ ಚಾಕು ಮನೆಯಲ್ಲಿಟ್ಟರೆ ಕುಟುಂಬದಲ್ಲಿ ಹಿಂಸೆ ಜಾಸ್ತಿಯಾಗುತ್ತದೆ .ಕಪ್ಪು ಬಣ್ಣದ ಬಟ್ಟೆಯನ್ನು ಉಡುಗೊರೆಯಾಗಿ ಪಡೆದರೂ ಅದನ್ನು ಅಪಶಕುನ ಎನ್ನಲಾಗುತ್ತದೆ. ಇದು ದುಃಖ ಮತ್ತು ಕಷ್ಟದ ಸಂಕೇತವಾಗಿದೆ. ಇದೇ ಕಾರಣಕ್ಕೆ ಮದುವೆಯಾಗಿ ಒಂದು ವರ್ಷ ಆಗುವವರೆಗೂ ಕಪ್ಪು ಬಟ್ಟೆಯನ್ನು ಧರಿಸುವುದಿಲ್ಲ .ಚಪ್ಪಲಿ ದೂರವಾಗುವ ಸಂಕೇತ. ಹಾಗಾಗಿ ಪ್ರೇಮಿಗಳು ಎಂದಿಗೂ ಸಹ ಚಪ್ಪಲಿಯನ್ನು ಉಡುಗೊರೆ ರೂಪದಲ್ಲಿ ಸ್ವೀಕರಿಸಬಾರದು .ಅನೇಕ ಜನರು ಗಡಿಯಾರವನ್ನು ಉಡುಗೊರೆಯಾಗಿ ನೀಡುತ್ತಾರೆ. ಹಾಳಾಗಿರುವ ಗಡಿಯಾರವನ್ನು ಉಡುಗೊರೆಯಾಗಿ ಪಡೆಯಬಾರದು. ಇದು ಯಶಸ್ಸಿಗೆ ಅಡ್ಡಿಯನ್ನು ಉಂಟುಮಾಡುತ್ತದೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top