ಮನೋರಂಜನೆ

ಒಡೆಯ ದರ್ಶನ್‍ಗೆ ಒಡತಿ ಸಿಕ್ಕಾಯ್ತು- ಚಂದನವನಕ್ಕೆ ಮತ್ತೊಬ್ಬ ಕೊಡಗಿನ ಬೆಡಗಿ.

ದರ್ಶನ್ ಅವರ ನಟನೆಯ 52ನೇ ಚಿತ್ರ `ಒಡೆಯ’ ಚಿತ್ರದ ಮುಹೂರ್ತ ಇತ್ತೀಚೆಗಷ್ಟೇ ಮೈಸೂರಿನಲ್ಲಿ ನೆರವೇರಿತ್ತು. ಇದೀಗ ಚಿತ್ರಕ್ಕೆ ಸಂಬಂದಿಸಿದ ಒಂದೊಂದೇ ವಿಚಾರಗಳು ಬಹಿರಂಗವಾಗುತ್ತಿವೆ..ಕನ್ನಡತಿಯೇ ಬೇಕು ಅಂತ ಹಠಹಿಡಿದ ಚಿತ್ರತಂಡಕ್ಕೆ ಬೊಂಬೆಯಂತಹ ಬೆಡಗಿ ಸಿಕ್ಕಿದ್ದಾಳೆ.

ಕೊಡಗಿನ ಬೆಡಗಿ ರಾಘವಿ ‘ಒಡೆಯ’ ಸಿನಿಮಾಗೆ ಆಯ್ಕೆಯಾಗಿದ್ದಾರೆ. ಇವರು ಸಿನಿಮಾಗಾಗಿ ರಾಘವಿ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಶೀಘ್ರದಲ್ಲೇ ಒಡೆಯ ಸಿನಿಮಾದ ಫೋಟೋಶೂಟ್‍ನಲ್ಲಿ ರಾಘವಿ ಅವರು ಪಾಲ್ಗೊಳ್ಳಲಿದ್ದಾರೆ.

 

 

ಉಳಿದಂತೆ ದೇವರಾಜ್, ರವಿಶಂಕರ್, ಸಾಧುಕೋಕಿಲ, ಚಿಕ್ಕಣ್ಣ, ಚಿತ್ರಾಶೆಣೈ, ಶರತ್ ಲೋಹಿತಾಶ್ವ, ಅವಿನಾಶ್, ಸೇರಿದಂತೆ ಹಲವಾರು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಲಿದ್ದಾರೆ. ಇನ್ನು ‘ಒಡೆಯ’ ಚಿತ್ರವನ್ನು ಎಂ.ಡಿ.ಶ್ರೀಧರ್ ನಿರ್ದೇಶನ ಮಾಡುತ್ತಿದ್ದು ಇನ್ನು ‘ಒಡೆಯ’ ಚಿತ್ರವನ್ನು ಎಂ.ಡಿ.ಶ್ರೀಧರ್ ನಿರ್ದೇಶನ ಮಾಡುತ್ತಿದ್ದಾರೆ.

ಚಿತ್ರಕ್ಕೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಸದ್ಯ ಯಜಮಾನ ಚಿತ್ರದ ಹಾಡಿನ ಚಿತ್ರೀಕರಣ ಬಾಕಿ ಉಳಿದಿದ್ದು ಅದು ಮುಗಿದ ನಂತರ ಅಂದ್ರೆ ಸೆಪ್ಟೆಂಬರ್ 10ರಿಂದ ‘ಒಡೆಯ’ ಚಿತ್ರದ ಶೂಟಿಂಗ್ ಶುರುವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಈ ಸಿನಿಮಾ ತಮಿಳು ಸೂಪರ್ ಹಿಟ್ ಆಗಿದ್ದ ‘ವೀರಂ’ ಚಿತ್ರದ ಅಫೀಶಿಯಲ್ ರಿಮೇಕ್ ಅಂತೇ. ತಮಿಳಿನಲ್ಲಿ ಧಳಾ ಅಜಿತ್ ನಟಿಸಿದ್ದ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಳ್ಳಲಿದ್ದು ತಮ್ಮನ್ನಾಳ ಪಾತ್ರವನ್ನು ಕನ್ನಡದ ಹುಡುಗಿಯೇ ಮಾಡಲಿದ್ದಾರಂತೆ.. ಅಂದಹಾಗೆ ಇದಕ್ಕೂ ಮುಂಚೆ ವೀರಂ ಚಿತ್ರವನ್ನು ತೆಲುಗಿನ ಪವನ್ ಕಲ್ಯಾಣ್ ‘ಕಾಟಮರಾಯುಡು’ ಎಂಬ ಹೆಸರಿನಲ್ಲಿ ರಿಮೇಕ್ ಮಾಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top