ಮನೋರಂಜನೆ

ಪಾಕ್ ಆಟಗಾರನ ಈ ರನೌಟ್ ನೋಡುದ್ರೆ ಬಿದ್ದು ಬಿದ್ದು ನಗ್ತೀರಾ.

ಕ್ರಿಕೆಟ್ ನಲ್ಲಿ ಆಗಾಗ್ಗೆ ಸಂಭವಿಸುವ ಕೆಲ ತಮಾಷೆಯೆನಿಸುವ ಎಡವಟ್ಟುಗಳು ಜನರನ್ನು ನಗೆಪಾಟಲಿಗೀಡಾಗುವಂತೆ ಮಾಡುತ್ತವೆ. ಇದೀಗ ಅಂಥಾ ಎಡವಟ್ಟುಗಳ ಸಾಲಿಗೆ ಮತ್ತೊಂದು ಘಟನೆ ಸೇರ್ಪಡೆಯಾಗಿದ್ದು ಇದಕ್ಕೆ ಸಂಭಂದಿಸಿದ ವಿಡಿಯೋವೊಂದು ಸದ್ಯ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನದ ಪರ ಉತ್ತಮವಾಗಿ ಆಡುತ್ತಿದ್ದ ಬ್ಯಾಟ್ಸ್ ಮನ್ ಅಜರ್ ಅಲಿ ಅವರು ವಿಚಿತ್ರ ರೀತಿಯಲ್ಲಿ ರನ್ ಔಟ್ ಆಗಿ ನಗೆಪಾಟಲಿಗೀಡಾಗಿದ್ದಾರೆ.

 

 

ಟೆಸ್ಟ್ 3ನೇ ದಿನದಾಟದ 53ನೇ ಓವರ್ ಬೌಲ್ ಮಾಡುತ್ತಿದ್ದ ಪೀಟರ್ ಸಿಡ್ಲ್ ಎಸೆತವನ್ನ ಅಲಿ ಬೌಂಡರಿಯತ್ತ ಬಾರಿಸಿದ್ದರು. ವೇಗವಾಗಿ ಸಾಗುತ್ತಿದ್ದ ಚೆಂಡನ್ನು ಕಂಡ ಅಲಿ ಬೌಂಡರಿ ತಲುಪುತ್ತದೆ ಎಂಬ ಅತಿ ಆತ್ಮವಿಶ್ವಾದಿಂದ ರನ್ ಗಳಿಸದೇ ಮತ್ತೊಂದು ತುದಿಯಲ್ಲಿದ್ದ ಬ್ಯಾಟ್ಸ್‌ಮನ್ ಅಸಾದ್ ಶಫಿಕ್ ರೊಂದಿಗೆ ಮಾತುಕತೆಗಿಳಿದಿದ್ದರು.

ಇದೇವೇಳೆ ಚೆಂಡು ಬೌಂಡರಿ ಲೈನ್​ಗೆ ತಲುಪಿಲ್ಲದ್ದನ್ನು ಗಮನಿಸಿದ ಫೀಲ್ಡರ್ ಮಿಚೆಲ್ ಸ್ಟಾರ್ಕ್​​ ಕೀಪರ್ ಟಿಮ್ ಪೈನೆಗೆ ಚೆಂಡನ್ನು ಎಸೆದು ರನೌಟ್​ ಮಾಡುತ್ತಾರೆ. ಅಜರ್ ಪಿಚ್ ಮಧ್ಯದಲ್ಲಿ ಶಾಫಿಕ್ ಜೊತೆ ಸಂಭಾಷಣೆಯಲ್ಲಿ ತೊಡಗಿರುವಾಗ ಈ ಸನ್ನಿವೇಶ ನಡೆದಿದೆ. ಚೆಂಡನ್ನು ಸರಿಯಾಗಿ ಗಮನಿಸದೆ ಅಜರ್ ಅವರು 64 ರನ್​ ಗಳಿಸಿರುವಾಗ ಹೀನಾಯವಾಗಿ ರನೌಟ್ ಬಲೆಗೆ ಬಿದ್ದರು.

ಅಜರ್ ರನೌಟ್ ಆದ ಸನ್ನಿವೇಶ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟ್ವೀಟರ್ ನಲ್ಲಿ ಸಾಕಷ್ಟು ಕಾಮೆಂಟ್ ಗಳು ಬರುತ್ತಿವೆ.


copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top