fbpx
ಸಮಾಚಾರ

ಕನ್ನಡದಲ್ಲೇ ದಸರಾ ಶುಭಾಶಯವನ್ನು ಕೋರಿದ ರಾಷ್ಟ್ರಪತಿ ರಾಮನಾಥ್​ ಕೋವಿಂದ್.

ದೇಶದಾದ್ಯಂತ ಇಂದು ವಿಜಯ ದಶಮಿಯನ್ನ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿದೆ. ದಸರಾ ಹಬ್ಬದ ಪ್ರಯುಕ್ತ ವಿವಿಧ ಕ್ಷೇತ್ರಗಳ ಗಣ್ಯರು ನಾಡಿನ ಜನತೆಗೆ ಶುಭಾಶಯ ಕೋರುತ್ತಿದ್ದಾರೆ. ಅಂತೆಯೇ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಈ ಬಾರಿ ಕರ್ನಾಟಕದ ಮಂದಿಗೆ ಸ್ಪೆಷಲ್​ ಆಗಿ ವಿಶ್ ಮಾಡಿದ್ದಾರೆ. ಕನ್ನಡದಲ್ಲಿ ಟ್ವೀಟ್ ಮಾಡಿ, ಶುಭಾಶಯ ತಿಳಿಸುವ ಮೂಲಕ ಕನ್ನಡಿಗರನ್ನ ಸಂತಸಗೊಳಿಸಿದ್ದಾರೆ.

 

 

ಪ್ರೆಸಿಡೆಂಟ್​ ಆಫ್​ ಇಂಡಿಯಾ ಟ್ವಿಟರ್​ ಖಾತೆಯಲ್ಲಿ ಕನ್ನಡದಲ್ಲೇ ಶುಭಕೋರಲಾಗಿದ್ದು, “ವಿಜಯದಶಮಿ ಹಾಗೂ ದುರ್ಗಾಪೂಜೆಯ ಶುಭ ಸಂದರ್ಭದಲ್ಲಿ, ದೇಶದ ಸಹನಾಗರೀಕರೆಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು. ದಸರಾ ಹಬ್ಬವು ಸಮಾಜದಲ್ಲಿನ ದುಷ್ಟಶಕ್ತಿಗಳ ಮೇಲೆ ಶಿಷ್ಟಶಕ್ತಿಗಳ ಗೆಲುವಿನ ವಿಜಯೋತ್ಸವವಾಗಿದೆ. ದಸರಾ ಮಹೋತ್ಸವವು ನಮ್ಮೆಲ್ಲರ ಕುಟುಂಬದ ಸದಸ್ಯರೆಲ್ಲರಿಗೂ ಹಾಗೂ ನಮ್ಮ ಸಮಾಜದ ಎಲ್ಲಾ ವರ್ಗಗಳ ಸದಸ್ಯರಿಗೂ ಶುಭ ಉಂಟುಮಾಡಲಿ” ಎಂದು ಹಾರೈಸಿದ್ದಾರೆ.

ಕೇವಲ ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಮರಾಠಿ ಸೇರಿದಂತೆ ಹಲವು ಭಾಷೆಗಳಲ್ಲಿ ದೇಶದ ಜನತೆಗೆ ಶುಭ ಹಾರೈಸಿದ್ದಾರೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top