ಮನೋರಂಜನೆ

‘ಪುಟ್ಟ ಗೌರಿ’ ಹುಡುಗನೊಂದಿಗೆ ಸೋನು ಗೌಡ ರೋಮ್ಯಾನ್ಸ್.

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುತ್ತಿರುವ ರಕ್ಷಿತ್ ಈಗ ಸ್ಯಾಂಡಲ್‍ವುಡ್‍ಗೆ ಎಂಟ್ರಿ ನೀಡುತ್ತಿದ್ದಾರೆ. ಸಾಹಿತಿ ಕಮ್ ನಟರಾಗಿರುವ ಬಿ ಎಲ್ ವೇಣು ಅವರ ‘ಕೆಲಸದಾಕೆ’ ಎನ್ನುವ ಪುಟ್ಟ ಕತೆ ಆಧರಿಸಿ ಸಿನಿಮಾವೊಂದು ತಯಾರಾಗಿದ್ದು ಅದಕ್ಕೆ ‘ಕಾಲ್+ ಎ= ಕಾಲೇಜ್’ ಎಂದು ಹೆಸರಿಡಲಾಗಿದೆ.

 

 

ಗುಳ್ಟು ಖ್ಯಾತಿಯ ಈ ಚಿತ್ರದಲ್ಲಿ ‘ಸೋನು ಗೌಡ’ ನಾಯಕ ರಕ್ಷಿತ್’ಗೆ ನಾಯಕಿಯ ಪಾತ್ರವನ್ನು ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ಸೋನು ಗೌಡ ಜತೆಗೆ ಬಾಂಬೆ ಮೂಲದ ಇಶಾ ಛಾಬ್ರಾ ಕೂಡ ನಟಿಸಿದ್ದಾರೆ. ಈ ಹಿಂದೆ ಪ್ರಜ್ವಲ್ ದೇವರಾಜ್ ಜತೆಗೆ ‘ಸವಾಲ್’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ಈಕೆ ತುಂಬಾ ವರ್ಷಗಳ ನಂತರ ಈಗ ‘ಕಾಲ್+ ಎ= ಕಾಲೇಜ್ ’ ಚಿತ್ರದ ಮೂಲಕ ಕನ್ನಡಕ್ಕೆ ಮರಳಿ ಬಂದಿದ್ದಾರೆ.

ಉಳಿದ ತಾರಾಬಳಗದಲ್ಲಿ ರಂಗಾಯಣ ರಘು, ರಮೇಶ್ ಭಟ್, ಎಂ ಎಸ್ ಉಮೇಶ್, ಮಜಾ ಟಾಕೀಸ್ ಪವನ್ ಚಿತ್ರದ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಹಿರಿಯ ನಿರ್ದೇಶಕ ಚಿಕ್ಕಣ್ಣ ನಿರ್ದೇಶನ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top