fbpx
ಸಮಾಚಾರ

ವಿಜಯದಶಮಿ ದಿನವೇ ವಿಧಿವಶರಾದ ರಾಜಮಾತೆ ಪ್ರಮೋದಾ ದೇವಿ ತಾಯಿ,ಈ ಸಾವು ಅರಮನೆಗೆ ಸೂತಕವೇ ಹಾಗೂ ಮೈಸೂರು ದಸರಾ ಮೇಲೆ ಯಾವ ಪರಿಣಾಮ ಬೀರುತ್ತೆ ಗೊತ್ತಾ

ಈ ದಿನ ನಾಡಿನಾದ್ಯಂತ ವಿಜಯ ದಶಮಿಯನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುತ್ತಿದೆ,ಇಂದು ಸಮಸ್ತ ನಾಡಿನ ಜನತೆಯೂ ಜಂಬೂಸವಾರಿಗೆ ಕಾತುರದಿಂದ ಕಾಯುತ್ತಿದ್ದಾರೆ,ಆದ್ರೆ ಇಂದೇ ರಾಜಮಾತೆ ಪ್ರಮೋದಾದೇವಿ ಅವರ ತಾಯಿ ವಿಧಿವಶರಾಗಿದ್ದಾರೆ.ಪ್ರಮೋದಾದೇವಿ ಅವರ ತಾಯಿ 98 ವರ್ಷದ ಪುಟ್ಟ ಚಿನ್ನಮ್ಮಣ್ಣಿ ವಿಧಿವಶರಾಗಿದ್ದಾರೆ,ಪ್ರಮೋದಾದೇವಿ ಅವರ ತಾಯಿ ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಪುಟ್ಟಚಿನ್ನಮ್ಮಣಿ ಅವರು ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.

 

 

 

ಅರಮನೆಯಲ್ಲಿ ಜಂಬೂಸವಾರಿಯ ಹಬ್ಬದ ವಾತಾವರಣ ಕಂಗೊಳಿಸುತ್ತಿತ್ತು.ಜಂಬೂ ಸವಾರಿ ದಿನವೇ ರಾಜಮಾತೆಯ ತಾಯಿಯವರು ವಿಧಿವಶವಾಗಿದ್ದರಿಂದ ಅಪಶಕುನನಾ? ಅರಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣ ಆಗುತ್ತಾ? ಜಂಬೂ ಸವಾರಿ ನಡೆಯುತ್ತಾ? ಎಂಬಿತ್ಯಾದಿ ಪ್ರಶ್ನೆಗಳು ನಾಡಿನ ಜನರಲ್ಲಿ ಹುಟ್ಟಿಕೊಂಡಿವೆ.ಆದರೆ ಪುಟ್ಟ ಚಿನ್ನಮ್ಮಣ್ಣಿ ನಿಧನದಿಂದ ಅರಮನೆಯಲ್ಲಿ ಸೂತಕವಾದ ವಾತಾವರಣ ನಿರ್ಮಾಣ ಆಗಲ್ಲ. ಪ್ರಮೋದಾದೇವಿಯವರ ತವರು ಮನೆ ಆಗಿದ್ದರಿಂದ ಅರಮನೆಗೆ ಸೂತಕ ಎಂಬ ಮಾತು ಬರಲ್ಲ. ಮೃತ ದೇಹದ ದರ್ಶನ ಪಡೆಯುವ ಮೊದಲು ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗಿ ಆಗಬಹುದು. ಆದ್ರೆ ದರ್ಶನ ಪಡೆದ ನಂತರ 5 ಅಥವಾ 11 ಅಥವಾ 13 ದಿನ ಜನರು ದೇವತಾ ದರ್ಶನ ಮತ್ತು ದೇವತಾ ಕಾರ್ಯ ಮಾಡಬಾರದು ಎಂಬುದು ನಮ್ಮ ಸಂಸ್ಕಾರಗಳಲ್ಲಿದೆ.ಪುಟ್ಟಚಿನ್ನಮ್ಮಣಿ ವಯೋಸಹಜ, ಪ್ರಕೃತ್ತಿದತ್ತವಾಗಿ ವಿಧಿವಶವಾಗಿದ್ದರಿಂದ ಅರಮನೆಗೆ ಸೂತಕದ ಛಾಯೆ ಬರೋದಿಲ್ಲ. ನಾಡ ಹಬ್ಬ ದಸರಾ ಮೇಲೆ ಯಾವುದೇ ಪರಿಣಾಮ ಬೀರಲ್ಲ

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top