ಮನೋರಂಜನೆ

ಸಕ್ಕರೆ ಬಿಟ್ಟ ಸಕ್ಕರೆ ಗೊಂಬೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ,ಏಕೆ ಗೊತ್ತಾ

ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಪ್ರಭಾವ ಹೊಂದುವ ಮೂಲಕ ಆನ್‌ಲೈನ್ ವಿಭಾಗವನ್ನು ನಿರ್ವಹಿಸುತ್ತಿರುವಾಕೆ ರಮ್ಯಾ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೇರವಾಗಿಯೇ ಟ್ವೀಟ್ ಮಾಡುತ್ತಲೇ ಪದೇ ಪದೆ ಮೋದಿ ಅಭಿಮಾನಿಗಳನ್ನು ಕೆಣಕುತ್ತಾ ಸುದ್ದಿಯಾಗುವ ಮೋಹಕತಾರೆ ರಮ್ಯಾ ಈಗ ಸಿನಿಮಾ ರಂಗದಿಂದ ದೂರವೇ ಉಳಿದುಬಿಟ್ಟಿದ್ದಾರೆ. ರಮ್ಯಾ ಸಿನಿಮಾ ರಂಗಕ್ಕೆ ಮರಳಿ ಬರಬೇಕೆಂಬುದು ಹಲವು ಸಿನಿರಸಿಕರ ಇಚ್ಛೆಯಾಗಿದೆ.

ಟಾಪ್ ನಟಿಯಾಗಿದ್ದ ಸಂಧರ್ಭದಲ್ಲೇ ಚಿತ್ರರಂಗದಿಂದ ದೂರವಾಗಿ ರಾಜಕೀಯದಲ್ಲಿ ಸಕ್ರಿಯವಾಗಿರುವ ಮೋಹಕತಾರೆ ರಮ್ಯಾ ಪಾಲಿಟಿಕ್ಸ್ ಅಂತ ಬ್ಯುಸಿಯಾದ ಮೇಲೆ ಸ್ಯಾಂಡಲ್‌ವುಡ್‌ಗೆ ಮತ್ತೆ ವಾಪಸ್ ಬರ‍್ತಾರಾ ಅಥವಾ ಇಲ್ವಾ ಅನ್ನೋ ಚರ್ಚೆ ಸಾಕಷ್ಟು ದಿನಗಳಿಂದ ನಡೆಯುತ್ತಲೇ ಇದೆ. ಮೊನ್ನೆ ಅಷ್ಟೇ ರಮ್ಯಾ ದರ್ಶನ್ ಜೊತೆ ನಾಯಕಿಯಾಗಿ ವೀರ ಮದಕರಿ ಚಿತ್ರದಲ್ಲಿ ಮತ್ತೆ ಬಣ್ಣ ಹಚ್ಚಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಕ್ಕಿ ಇರೋ ರಮ್ಯಾ ಈ ಸಲ ಸುದ್ದಿಯಲ್ಲಿ ಇರುವುದು ಈ ಕಾರಣಕ್ಕೆ ,ರಮ್ಯಾ ಮಾಡಿರುವ ಈ ಹೊಸ ಇನ್ ಸ್ಟಾಗ್ರಾಂ ಪೋಸ್ಟ್ನಿಂದ ರಮ್ಯಾ ಸುದ್ದಿಯಲ್ಲಿ ಇದ್ದಾರೆ .

ರಮ್ಯಾ ಅವರಿಗೆ ಸಕ್ಕರೆ ಅಂದರೆ ತುಂಬಾ ಇಷ್ಟ. ಆದರೆ ಈಗ ರಮ್ಯಾ ಅವರು ಈ ವರ್ಷದ ಕೊನೆಯವರೆಗೂ ಸಕ್ಕರೆ ಹಾಗೂ ಸಿಹಿ ಪದಾರ್ಥಗಳನ್ನ ಸೇವಿಸದೇ ಇರಲು ನಿರ್ಧಾರ ಮಾಡಿದ್ದಾರಂತೆ ,ಹೌದು ಸಕ್ಕರೆ ಮತ್ತು ಸಿಹಿ ಪದಾರ್ಥಗಳು ತಮ್ಮ ಜೀವನ ಶೈಲಿಯ ಮೇಲೆ ಭಾರೀ ಪರಿಣಾಮ ಬೀರಿರುವ ಕಾರಣ ಡಿಸೆಂಬರ್ 31 ರವರೆಗೂ ಸಕ್ಕರೆ ಸೇವಿಸುವುದಿಲ್ಲ ಎಂದು ರಮ್ಯಾ ಅವರು #ನೋಶುಗರ್ ಚಾಲೆಂಜ್ ಸ್ವೀಕರಿಸಿದ್ದಾರೆ. ಮೂರು ದಿನಗಳ ಹಿಂದೆ ಈ ಬಗ್ಗೆ ಅವರೇ ಇನ್ ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ.ನಟಿ ರಮ್ಯಾ ”ಇದು ಸಕ್ಕರೆ ಇಲ್ಲದ ನನ್ನ ಮೊದಲ ದಿನವಾಗಿದೆ. ಈ ವರ್ಷದ ಕೊನೆಯವರೆಗೂ ಇದನ್ನು ಮುಂದುವರಿಸಲು ನಾನು ತೀರ್ಮಾನ ಮಾಡಿದ್ದೇನೆ. ಇದು ತುಂಬಾ ಒಳ್ಳೆಯದು. ಈ ಹಿಂದೆ ನಾನು ಸಕ್ಕರೆಯನ್ನ ಬಿಟ್ಟು ಇರಬೇಕು ಅಂತ ಹಲವಾರು ಬಾರಿ ನಾನು ಪ್ರಯತ್ನ ಪಟ್ಟಿದ್ದೇನೆ. ಆದರೆ 2-3 ದಿನಗಳಿಗಿಂತ ಹೆಚ್ಚು ದಿನ ಸಕ್ಕರೆಯನ್ನು ಬಿಟ್ಟಿರಲು ಸಾಧ್ಯ ಆಗಲಿಲ್ಲ” ಎಂದು ಹೇಳಿಕೊಂಡಿದ್ದಾರೆ.
ಅಷ್ಟೇ ಅಲ್ಲದೇ ಎಷ್ಟೋ ಬಾರಿ ಸಕ್ಕರೆ ತ್ಯಜಿಸಲು ನಾನು ನನ್ನ ಪ್ರೀತಿಸುವ ವ್ಯಕ್ತಿಗಳ ಮೇಲೆ ಪ್ರತಿಜ್ಞೆ ಮಾಡಿದ್ದೇನೆ. ಆದರೂ ನಾನು ಅವರ ಮೇಲೆ ಪ್ರಮಾಣ ಮಾಡಿದ್ದೇನೆ ಎಂದು ನಾನು ಮರೆತುಬಿಡುತ್ತಿದ್ದೆ. ನಾನು ಈ ಹಿಂದೆ ಇಷ್ಟಪಟ್ಟು ಸಿಹಿ ತಿನಿಸುಗಳನ್ನು ತಿನ್ನುತ್ತಿದ್ದೆ. ಆದರೆ ಈಗ ಅದೇ ಅಭ್ಯಾಸವಾಗಿ ಹೋಗಿದೆ. ನನಗೆ ಒತ್ತಡ ಹೆಚ್ಚಾದಾಗ ಸಿಹಿ ತಿನ್ನಬೇಕು ಎನಿಸುತ್ತದೆ. ಸಕ್ಕರೆ ದೈಹಿಕ ಹಾಗೂ ಮಾನಸಿಕವಾಗಿ ನನ್ನ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರಿದೆ” ಎಂದು ರಮ್ಯಾ ತಿಳಿಸಿದ್ದಾರೆ.

 

 

 

ನಟಿ ರಮ್ಯಾ ”ಇದು ಸಕ್ಕರೆ ಇಲ್ಲದ ನನ್ನ ಮೊದಲ ದಿನವಾಗಿದೆ. ಈ ವರ್ಷದ ಕೊನೆಯವರೆಗೂ ಇದನ್ನು ಮುಂದುವರಿಸಲು ನಾನು ತೀರ್ಮಾನ ಮಾಡಿದ್ದೇನೆ. ಇದು ತುಂಬಾ ಒಳ್ಳೆಯದು. ಈ ಹಿಂದೆ ನಾನು ಸಕ್ಕರೆಯನ್ನ ಬಿಟ್ಟು ಇರಬೇಕು ಅಂತ ಹಲವಾರು ಬಾರಿ ನಾನು ಪ್ರಯತ್ನ ಪಟ್ಟಿದ್ದೇನೆ. ಆದರೆ 2-3 ದಿನಗಳಿಗಿಂತ ಹೆಚ್ಚು ದಿನ ಸಕ್ಕರೆಯನ್ನು ಬಿಟ್ಟಿರಲು ಸಾಧ್ಯ ಆಗಲಿಲ್ಲ” ಎಂದು ಹೇಳಿಕೊಂಡಿದ್ದಾರೆ.“ಅಷ್ಟೇ ಅಲ್ಲದೇ ಎಷ್ಟೋ ಬಾರಿ ಸಕ್ಕರೆ ತ್ಯಜಿಸಲು ನಾನು ನನ್ನ ಪ್ರೀತಿಸುವ ವ್ಯಕ್ತಿಗಳ ಮೇಲೆ ಪ್ರತಿಜ್ಞೆ ಮಾಡಿದ್ದೇನೆ. ಆದರೂ ನಾನು ಅವರ ಮೇಲೆ ಪ್ರಮಾಣ ಮಾಡಿದ್ದೇನೆ ಎಂದು ನಾನು ಮರೆತುಬಿಡುತ್ತಿದ್ದೆ. ನಾನು ಈ ಹಿಂದೆ ಇಷ್ಟಪಟ್ಟು ಸಿಹಿ ತಿನಿಸುಗಳನ್ನು ತಿನ್ನುತ್ತಿದ್ದೆ. ಆದರೆ ಈಗ ಅದೇ ಅಭ್ಯಾಸವಾಗಿ ಹೋಗಿದೆ. ನನಗೆ ಒತ್ತಡ ಹೆಚ್ಚಾದಾಗ ಸಿಹಿ ತಿನ್ನಬೇಕು ಎನಿಸುತ್ತದೆ. ಸಕ್ಕರೆ ದೈಹಿಕ ಹಾಗೂ ಮಾನಸಿಕವಾಗಿ ನನ್ನ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರಿದೆ” ಎಂದು ರಮ್ಯಾ ಹೇಳಿದ್ದಾರೆ

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top