ಮನೋರಂಜನೆ

ಪ್ರೇಮ್ಸ್ ವಿರುದ್ಧ ಶಿವಣ್ಣನ ಫ್ಯಾನ್ಸ್ ಆಕ್ರೋಶ- ಅಭಿಮಾನಿಗಳ ಆರೋಪಗಳೇನು?

ನಿರ್ದೇಶಕ ಪ್ರೇಮ್ ಅವರ ಬಹುನಿರೀಕ್ಷಿತ ಚಿತ್ರ ‘ದಿ ವಿಲನ್’ ಗುರುವಾರವಷ್ಟೇ ತೆರೆಕಂಡಿದ್ದು, ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಆದರೆ ಸಿನಿಮಾ ನೋಡಿದ ಬಳಿಕ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಅಭಿಮಾನಿಗಳು ನಿರ್ದೇಶಕ ಪ್ರೇಮ್ ವಿರುದ್ಧ ತಿರುಗಿ ಬಿದ್ದಿದ್ದಾರೆ.,

“ಸಿನಿಮಾದಲ್ಲಿ ಸುದೀಪ್ ಅವರ ಪಾತ್ರವನ್ನು ಮಾತ್ರವೇ ಹೈಲೈಟ್ ಮಾಡಲಾಗಿದೆ, ಅಲ್ಲದೇ ಶಿವಣ್ಣನ ಪಾತ್ರವನ್ನು ಅತಿಥಿ ಪಾತ್ರದ ರೀತಿ ತೋರಿಸಲಾಗಿದೆ, ಅಲ್ಲದೇ ಕ್ಲೈಮಾಕ್ಸ್ ನಲ್ಲಿ ಸುದೀಪ್ ಅವರು ಶಿವಣ್ಣನಿಗೆ ಹೊಡೆಯುವ ದೃಶ್ಯವಿದ್ದು, ಈ ದೃಶ್ಯಕ್ಕೆ ಕತ್ತರಿ ಹಾಕಬೇಕು ಅಂತ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಈ ಸಂಬಂಧ ಇಂದು ಮಧ್ಯಾಹ್ನ 3 ಗಂಟೆಗೆ ನರ್ತಕಿ ಚಿತ್ರಮಂದಿರದ ಮುಂದೆ ಪ್ರತಿಭಟನೆ ಮಾಡಲು ಸಜ್ಜಾಗಿದ್ದಾರೆ..

“ನಿರ್ದೇಶಕ ಪ್ರೇಮ್ ಸುದೀಪ್​ರನ್ನು ಹೈಲೇಟ್ ಮಾಡಿ ಶಿವಣ್ಣನನ್ನು ಅತಿಥಿ ಪಾತ್ರಧಾರಿಯಂತೆ ತೋರಿಸಲಾಗಿದೆ ಎಂಬುದು ಅಭಿಮಾನಿಗಳ ವಾದವಾಗಿದೆ. ಇಲ್ಲಿ ಸುದೀಪ್​ ಪಾತ್ರದ ಸಮಯ ಹೆಚ್ಚಿದ್ದು, ಶಿವಣ್ಣನಿಗೆ ಕಡಿಮೆ ಸಮಯ ಮಾತ್ರ ನೀಡಲಾಗಿದೆ.. ಚಿತ್ರದ ಕಥೆಯಲ್ಲೂ ತಾಯಿ ಪ್ರೀತಿನ್ನು ಪಡೆಯುವುದು ಸುದೀಪ್, ಹಾಗೆಯೇ ನಾಯಕಿ ಸಿಗುವುದು ಕೂಡ ಸುದೀಪ್​ಗೆ., ಅಲ್ಲದೆ ಶಿವರಾಜ್ ಕುಮಾರ್ ಅವರಿಗೆ ಸುದೀಪ್ ಹೊಡೆದಿದ್ದಾರೆ. ಇದು ಅನಗತ್ಯವಾಗಿದೆ. ಶಿವಣ್ಣನ ಮೇಲೆ ಸುದೀಪ್ ಪಾತ್ರದಿಂದ ಹೊಡೆಸಿದ್ದು ತಪ್ಪು” ಎಂಬುದು ಅಭಿಮಾನಿಗಳ ಆರೋಪವಾಗಿದೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top