ದೇವರು

ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಮನುಷ್ಯನ ಯಶಸ್ಸು, ಅಹಂಕಾರ ಮತ್ತು ಸಮಸ್ಯೆಗಳ ಬಗ್ಗೆ ಹೇಳಿದ ಮಾತುಗಳನ್ನೂ ಕೇಳಿದ್ರೆ ನೀವು ನಿಜ ಅಂತೀರಾ

ಮನುಷ್ಯನ ಯಶಸ್ಸು, ಅಹಂಕಾರ ಮತ್ತು ಸಮಸ್ಯೆಗಳ ಬಗ್ಗೆ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ ಮಾತು ಏನು ಎಂದು ಗೊತ್ತಾ ?
ಭಗವಂತನಾದ ಶ್ರೀಕೃಷ್ಣ ತಿಳಿಸಿಕೊಟ್ಟ ಮನುಷ್ಯನ ಅಭಿಮಾನ, ಯಶಸ್ಸು, ಅಹಂಕಾರ ಹಾಗೂ ಸಮಸ್ಯೆಗಳು ಹೇಗೆ ಮನುಷ್ಯನ ಜೀವನದಲ್ಲಿ ಉದ್ಭವವಾಗುತ್ತವೆ ಎಂಬ ವಿಷಯದ ಬಗ್ಗೆ ತಿಳಿಸಿಕೊಡಲಾಗಿದೆ. ಈ ಮೂರು ವಿಷಯಗಳ ಬಗ್ಗೆ ಭಗವಂತನಾದ ಶ್ರೀಕೃಷ್ಣನ ಪ್ರಕಾರ ಬಹಳಷ್ಟು ನಂಟಿದೆ. ಹೇಗೆ ಎಂದರೆ.

ಯಾವಾಗ ಮನುಷ್ಯ ತಾನು ಒಳ್ಳೆಯ ಮಾರ್ಗದಲ್ಲಿ ಬೆಳೆಯಬೇಕು ಎಂದು ಯೋಚಿಸುತ್ತಾನೋ, ಅದು ಮನುಷ್ಯನ ಯಶಸ್ಸಿನ ಮೊದಲ ಹೆಜ್ಜೆಯಾಗಿರುತ್ತದೆ. ಭಗವಂತನ ಪ್ರಕಾರ ಯಾವ ಮನುಷ್ಯ ತಾನು ಒಳ್ಳೆಯ ಮಾರ್ಗದಲ್ಲಿ ಮುಂದುವರಿಯಬೇಕು, ಜೀವನ ನಡೆಸಬೇಕು, ಎಂದುಕೊಳ್ಳುತ್ತಾನೋ, ಅದು ಅವನ ಯಶಸ್ಸಿನ ಮೊದಲ ಹೆಜ್ಜೆಯಾಗಿರುತ್ತದೆ. ಅವನ ಪ್ರಯತ್ನಕ್ಕೆ ಮಾರ್ಗ ಸರಿ ಇದ್ದಲ್ಲಿ ಭಗವಂತನ ಸಹಾಯ ದೊರೆಯುತ್ತದೆ ಹಾಗೂ ಯಶಸ್ಸಿನ ಮುಂದಿನ ಹೆಜ್ಜೆಗಳು ಸಮಯಕ್ಕೆ ತಕ್ಕಂತೆ ಮುಂದಕ್ಕೆ ಸಾಗುತ್ತಲೇ ಹೋಗುತ್ತವೆ. ಯಶಸ್ಸಿಗೆ ಕೊನೆ ಎಂಬುದು ಇರುವುದಿಲ್ಲ.ಮನುಷ್ಯ ತನ್ನ ಯೋಚನೆ ಹಾಗೂ ಯೋಜನೆಗಳನ್ನು ಬದಲಿಸಬಾರದು. ಅದಕ್ಕೂ ಮೀರಿ ಬಹು ಹಾಗೂ ಶೀಘ್ರ ಯಶಸ್ಸಿನ ಆಸೆ ಪಟ್ಟು ಮನುಷ್ಯನು ಏನಾದರೂ ಮಾರ್ಗ ಬದಲು ಮಾಡಿ ಇನ್ನೊಂದು ಮಾರ್ಗದಲ್ಲಿ ಹೋದರೆ, ಒಳ್ಳೆಯವರನ್ನು ತುಳಿದು ಬೆಳೆಯುವ ಆಸೆ ಪಟ್ಟಲ್ಲಿ, ಅಥವಾ ತುಳಿದು ಬೇಗ ಯಶಸ್ಸು ಪಡೆಯುವ ಆಸೆ ಪಟ್ಟಲ್ಲಿ, ಅದೇ ಅಹಂಕಾರದ ಮೊದಲ ಹೆಜ್ಜೆಯಾಗಿ ಪರಿವರ್ತನೆಯಾಗುತ್ತದೆ.

 

 

 

ಈ ಯೋಚನೆಗಳು ಮನಸ್ಸಿಗೆ ಬಂದ ತಕ್ಷಣ, ಅಂದರೆ ಒಬ್ಬರನ್ನು ತುಳಿದು ಯಶಸ್ಸು ಪಡೆಯುವ ಯೋಚನೆಯು ಮನಸ್ಸಿಗೆ ಬಂದ ತಕ್ಷಣ ಸರಿ ಮಾಡಿಕೊಂಡರೆ, ಆಗ ಯಾವುದೇ ಸಮಸ್ಯೆಗಳು ಆಗುವುದಿಲ್ಲ, ಇಲ್ಲದಿದ್ದರೆ ಆ ಅಹಂಕಾರ ಹತೋಟಿಯನ್ನು ಮೀರಿದರೆ ಸಮಸ್ಯೆಗಳಾಗಿ ಪರಿವರ್ತನೆಯಾಗುತ್ತದೆ. ಆದ್ದರಿಂದ ಕಂಡ ಯಶಸ್ಸೆಲ್ಲ ಕರಗಿ ಹೋಗುತ್ತದೆ.ಮನುಷ್ಯನ ಯಶಸ್ಸಿಗೆ ಭಗವಂತನ ಸಹಾಯ ಯಾವಾಗಲೂ ಇದ್ದೇ ಇರುತ್ತದಯೇ ಹೊರತು,ಅಹಂಕಾರಕ್ಕಲ್ಲ. ಮನುಷ್ಯನಲ್ಲಿ ಅಭಿಮಾನ, ಅಹಂಕಾರ ಸಮಸ್ಯೆಗಳು ನಡೆಯುವ ಒಂದು ಒಳ್ಳೆ ಕೆಲಸದಿಂದ ಶುರುವಾಗುತ್ತದೆ . ಅದು ಪ್ರೀತಿ ಇರಬಹುದು, ಪ್ರೇಮ ವಾಗಿರಬಹುದು, ಸಂಬಂಧವಾಗಿರಬಹುದು ,ಅಥವಾ ಆಕಸ್ಮಿಕವಾಗಿರಬಹುದು. ಇದನ್ನು ಮನುಷ್ಯ ತನಗೆ ದಕ್ಕಿದ ಯಶಸ್ಸು ಎಂದುಕೊಂಡರೆ ಅದೇ ಅವನ ಮೊದಲ ಅಭಿಮಾನದ ಹೆಜ್ಜೆಯಾಗಿ, ಆದೇ ಅಭಿಮಾನ ಅವನ ಹತೋಟಿ ಮೀರಿದರೆ ಅದು ಅವನ ಅಹಂಕಾರದ ಮೊದಲ ಹೆಜ್ಜೆಯಾಗಿರುತ್ತದೆ.

ಅದೇ ಅಹಂಕಾರ ಸಮಸ್ಯೆಯಾಗಿ ಪರಿವರ್ತನೆಯಾಗುತ್ತದೆ . ಆದೇ ಸಮಸ್ಯೆಗಳು ಮನುಷ್ಯನ ಅಂತ್ಯವನ್ನು ಮಾಡುತ್ತವೆ. ಆದ್ದರಿಂದ ಅಭಿಮಾನ ,ಅಹಂಕಾರ, ಸಮಸ್ಯೆ ಈ ಮೂರನ್ನೂ ಅರಿತು ಮನುಷ್ಯ ಜೀವನದ ದೋಣಿಯನ್ನು ಸಾಗಿಸುವುದು ಅತ್ಯಂತ ಒಳ್ಳೆಯದು. ಮಿತಿ ಮೀರಿದರೆ ಮನುಷ್ಯ ಬರುವ ಸಮಸ್ಯೆಗಳಿಂದ ಅವನ ಅಂತ್ಯವಾಗುತ್ತದೆ. ಅತ್ಯಂತ ಕೆಟ್ಟ ಅಂತ್ಯ ನಿಮ್ಮ ಅಹಂಕಾರದಿಂದಲೇ ಆಗಿರುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top