fbpx
ಮನೋರಂಜನೆ

ವೈರಲ್ ಆಯಿತು ಸುಶ್ಮಿತಾ ಸೇನ್ ಮಕ್ಕಳೊಂದಿಗೆ ಮಾಡಿದ ದುರ್ಗಾಪೂಜಾ ಡ್ಯಾನ್ಸ್, ಸೂಪರ್ ಅಂದ್ರು ನೆಟ್ಟಿಗರು,ವಿಡಿಯೋ ಒಳಗಿದೆ

ಮಾಜಿ ವಿಶ್ವ ಸುಂದರಿ, ನಟಿ, ರೂಪದರ್ಶಿ ‘ಸುಶ್ಮಿತಾ ಸೇನ್ ದಕ್ಷಿಣ ಭಾರತದ ಹೈದರಾಬಾದ್ ಚೆಲುವೆ. 1994 ರಲ್ಲಿ ‘ಮಿಸ್ ಯುನಿವರ್ಸ್’ ಕೀರೀಟ ಧರಸಿದ ಪ್ರಪ್ರಥಮ ಭಾರತೀಯ ಮಹಿಳೆ. ಅದೇ ವರ್ಷ ಐಶ್ವರ್ಯ ರೈ ವಿಶ್ವಸುಂದರಿ ಪಟ್ಟ ಪಡೆದದ್ದು. ಸುಶ್ಮಿತಾ ಮದುವೆಯಾಗದ್ದೆ ಇಬ್ಬರು ಹೆಣ್ಣುಮಕ್ಕಳನ್ನು ದತ್ತು ತೆಗೆದುಕೊಂಡು ಅವರನ್ನು ಬೆಳೆಸುತ್ತಿದ್ದಾರೆ.

ನಾಡಿನಾದ್ಯಂತ ದಸರಾ ಅತ್ಯಂತ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುತ್ತಿದೆ,ಎಲ್ಲೆಲ್ಲೂ ತಾಯಿ ಚಾಂಮುಂಡೇಶ್ವರಿಯ ಪೂಜಾ ಪೂಜೆ ನಡೆಯುತ್ತಿವೆ,ಕರ್ನಾಟಕದಲ್ಲಷ್ಟೇ ಅಲ್ಲಾ, ಬೇರೆ ರಾಜ್ಯದಲ್ಲೂ ನವರಾತ್ರಿ ಪ್ರಯುಕ್ತ ದುರ್ಗಾಪೂಜೆ ಮಾಡುವ ಸಂಪ್ರದಾಯವಿದೆ,ಬರೀ ನಮ್ಮ ಸ್ಯಾಂಡಲ್ ವುಡ್ ಮಂದಿ ಮಾತ್ರವಲ್ಲ ಬಾಲಿವುಡ್​ ನಟ ನಟಿಯರು ಕೂಡ ದೇವಿ ಪೂಜೆ ಮಾಡೋದ್ರಲ್ಲಿ ಎತ್ತಿದ ಕೈ ಅದಕ್ಕೆ ಉದಾಹರಣೆ ಮಾಜಿ ವಿಶ್ವ ಸುಂದರಿ ಸುಷ್ಮಿತಾ ಸೇನ್​ ಅದಕ್ಕೆ ಸಾಕ್ಷಿ ಆಯಿತು ಈ ವಿಡಿಯೋ ,ತಮ್ಮ ಇನ್ಸ್​ಟ್ರಾಗ್ರಾಂ ನಲ್ಲಿ ದೇವಿ ಪೂಜೆ ಮಾಡಿರುವ ವಿಡಿಯೋವೊಂದನ್ನು ಅಪ್​ಲೋಡ್​ ಮಾಡಿದ್ದಾರೆ.ಇಷ್ಟು ದಿನ ಸಿನಿಮಾಗಳಲ್ಲಿ ಡಾನ್ಸ್ ಮಾಡುತಿದ್ದ ಸುಶ್ಮಿತಾ ಸೇನ್ ಈಗ ಭಕ್ತಿಪೂರಕ ಹೈ ಗಿರಿ ನಂದಿನಿ ನಂದಿತಾ ಮೇದಿನಿ ಅಂತಾ ದುರ್ಗಾಮಾತೆ ಆರಾಧಿಸುತ್ತಾ ಹೆಜ್ಜೆ ಹಾಕಿದ್ದಾರೆ ,ನವರಾತ್ರಿ ಸಮಯದಲ್ಲಿ ಆಚರಿಸುವ ದುರ್ಗಾಪೂಜೆ, ಬಂಗಾಳಿ ಜನರಿಗೆ ಬಹಳ ಮಹತ್ವದ್ದು. ಈ ಸಮಯದಲ್ಲಿ ಮಾಡುವ ಧನೂಚಿ ನೃತ್ಯ ಕೂಡ ಸಾಕಷ್ಟು ಮನ್ನಣೆ ಪಡೆದಿದೆ.

 

 

 

ಇನ್ನೊಂದು ವಿಶೇಷ ಏನು ಅಂದ್ರೆ ಸುಶ್ಮಿತಾ ಜೊತೆ ಮಕ್ಕಳಾದ ರೇನಿ ಮತ್ತು ಅಲೀಸಾ ಕೂಡ ದುರ್ಗಾ ಪೂಜೆಯಲ್ಲಿ ಭಾಗಿಯಾಗಿ ಅಮ್ಮನ ಜೊತೆ ಅವ್ರು ಹೆಜ್ಜೆ ಹಾಕಿದ್ದಾರೆ.ಆ ಡಾನ್ಸ್ ವಿಡಿಯೋವನ್ನು ಸುಶ್ಮಿತಾ ಜಾಲತಾಣದಲ್ಲಿ ಹಂಚಿಕೊಂಡಿದ್ದು ದುರ್ಗಾ ಪೂಜೆಯಲ್ಲಿ ನನ್ನ ಮಕ್ಕಳ ಜೊತೆ ನೃತ್ಯ ಮಾಡಿದ್ದು, ಭಕ್ತಿ ಭಾವವನ್ನು ಮತ್ತಷ್ಟು ಹೆಚ್ಚಿಸಿದೆ. ಇದು ನಮ್ಮಲ್ಲಿ ಪ್ರೀತಿ, ವಿಶ್ವಾಸ, ಆತ್ಮೀಯತೆ ಇವೆಲ್ಲವನ್ನು ಹೆಚ್ಚಿಸಿತು ಎಂದು ಬರೆದುಕೊಂಡಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top