ಮನೋರಂಜನೆ

ರಾಜ್ಯಾದ್ಯಂತ ‘ದಿ ವಿಲನ್’ ಆರ್ಭಟ- ಮೊದಲ ದಿನವೇ 20.5 ಕೋಟಿ ಗಳಿಕೆ.

ಕನ್ನಡ ಚಿತ್ರರಂಗದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಸಿನಿಮಾ ನೆನ್ನೆ ದೇಶಾದ್ಯಂತ ತೆರೆಕಂಡಿದ್ದು ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಮೊದಲ ದಿನ ಸಿನಿಮಾ ನೋಡಿರುವ ಪ್ರೇಕ್ಷಕರು ಸೂಪರ್, ಸಕ್ಕತ್ತಾಗಿದೆ, ರೆಕಾರ್ಡ್ ಬ್ರೇಕ್, ಬಾಕ್ಸ್ ಆಫೀಸ್ ಧೂಳ್ ಅಂತೆಲ್ಲಾ ಹೇಳುತ್ತಿದ್ದಾರೆ. ಮತ್ತೊಂದೆಡೆ ಸಿನಿಮಾಗೆ ನೆಗಿಟೀವ್ ಕಾಮೆಂಟ್ ಗಳು ಬಂದಿದೆ. ‘ದಿ ವಿಲನ್’ ನಿರೀಕ್ಷೆ ಮಟ್ಟ ತಲುಪಲಿಲ್ಲ, ಚಿತ್ರವನ್ನ ಇನ್ನೂ ಅದ್ಭುತವಾಗಿ ಮಾಡಬಹುದಿತ್ತು ಎಂದು ಅಭಿಪ್ರಾಯಪಡುತ್ತಿದ್ದಾರೆ.

ಮೊದಲ ದಿನ 20.5ಕೋಟಿ ಗಳಿಕೆ:
ಕರುನಾಡ ಚಕ್ರವರ್ತಿ ಶಿವರಾಜ್​ ಕುಮಾರ್​ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ‘ದಿ ವಿಲನ್​’ ಚಿತ್ರ ಪ್ರೇಕ್ಷಕರ ಮನವನ್ನು ಗೆದ್ದಿದೆ. ಅದಕ್ಕೆ ಸಾಕ್ಷಿಯೆಂಬಂತೆ ಬಿಡುಗಡೆಯಾದ ಮೊದಲ ದಿನವೇ ಬರೋಬ್ಬರಿ 20.5 ಕೋಟಿ ರೂ ಬಾಚಿಕೊಂಡಿದೆ.. ಹಾಗಂತ ಇದು ಯಾರೋ ಕೆಲಸಿಲ್ಲದವರು ಸೋಷಿಯಲ್ ಮೀಡಿಯಾದಲ್ಲಿ ಹರಡಿಸಿರುವ ಸುಳ್ಳು ಸುದ್ದಿ ಎಂದು ಭಾವಿಸಬೇಡಿ ಏಕೆಂದರೆ ಚಿತ್ರದ ಮೊದಲ ದಿನ 20.5 ಕೋಟಿ ರೂ ಗಳಿಸಿದೆ ಎಂದು ಸ್ವತಃ ನಿರ್ದೇಶಕ ಪ್ರೇಮ್ ಅವರೇ ಹೇಳಿದ್ದಾರೆ.

ಬಾಕ್ಸ್ ಆಫೀಸ್ ನಲ್ಲಿ ಈ ಪರಿ ಹಣ ಗಳಿಕಗೆ ಮುಖ್ಯ ಕಾರಣ, ಒಂದು ಎಲ್ಲ ಥಿಯೇಟರ್ ಗಳಲ್ಲು ಹೌಸ್ ಫುಲ್ ಆಗಿರೋದು.. ಮತ್ತೊಂದು ಟಿಕೆಟ್ ರೇಟ್ ಜಾಸ್ತಿ ಮಾಡಿರೋದು.. ಜೊತೆಗೆ ವಿಲನ್ ಸಿನಿಮಾ ಮೊದಲ ದಿನದ ಅತಿ ಹೆಚ್ಚು ಶೋ ಕಂಡಿದೆ.. ಇನ್ನು ಶುಕ್ರವಾರ, ಶನಿವಾರ ಮತ್ತು ಭಾನುವಾರ ಕೂಡ ರಜೆ ಇರುವುದರಿಂದ ಮತ್ತು ಟಕೆಟ್ ಬುಕ್ಕಿಂಗ್ ಆಗಿರುವುದರಿಂದ ಕಲೆಕ್ಷನ್ ನಲ್ಲಿ ಈ ಸಿನಿಮಾ ದೊಡ್ಡ ದಾಖಲೆಯನ್ನೇ ಬರೆಯಲಿದೆ ಎನ್ನುತ್ತಿದ್ದಾರೆ ಸಿನಿ ಪಂಡಿತರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top