ಮನೋರಂಜನೆ

”ಶಿವಣ್ಣ ದಡ್ಡರಲ್ಲ, ದೊಡ್ಡ ಮನುಷ್ಯ” ದಿ ವಿಲನ್ ವಿವಾದದ ಬಗ್ಗೆ ಸುದೀಪ್ ಪ್ರತಿಕ್ರಿಯೆ.

ನಿರ್ದೇಶಕ ಪ್ರೇಮ್ ಅವರ ಬಹುನಿರೀಕ್ಷಿತ ಚಿತ್ರ ‘ದಿ ವಿಲನ್’ ಗುರುವಾರವಷ್ಟೇ ತೆರೆಕಂಡಿದ್ದು, ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಆದರೆ ಸಿನಿಮಾ ನೋಡಿದ ಬಳಿಕ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಅಭಿಮಾನಿಗಳು ನಿರ್ದೇಶಕ ಪ್ರೇಮ್ ವಿರುದ್ಧ ತಿರುಗಿ ಬಿದ್ದಿದ್ದಾರೆ.,

“ಸಿನಿಮಾದಲ್ಲಿ ಸುದೀಪ್ ಅವರ ಪಾತ್ರವನ್ನು ಮಾತ್ರವೇ ಹೈಲೈಟ್ ಮಾಡಲಾಗಿದೆ, ಅಲ್ಲದೇ ಶಿವಣ್ಣನ ಪಾತ್ರವನ್ನು ಅತಿಥಿ ಪಾತ್ರದ ರೀತಿ ತೋರಿಸಲಾಗಿದೆ, ಅಲ್ಲದೇ ಕ್ಲೈಮಾಕ್ಸ್ ನಲ್ಲಿ ಸುದೀಪ್ ಅವರು ಶಿವಣ್ಣನಿಗೆ ಹೊಡೆಯುವ ದೃಶ್ಯವಿದ್ದು, ಈ ದೃಶ್ಯಕ್ಕೆ ಕತ್ತರಿ ಹಾಕಬೇಕು ಅಂತ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಈ ಸಂಬಂಧ ಇಂದು ಮಧ್ಯಾಹ್ನ 3 ಗಂಟೆಗೆ ನರ್ತಕಿ ಚಿತ್ರಮಂದಿರದ ಮುಂದೆ ಪ್ರತಿಭಟನೆ ಮಾಡಲು ಸಜ್ಜಾಗಿದ್ದಾರೆ..

ಈ ಬಗ್ಗೆ ದಾವಣಗೆರೆಯಲ್ಲಿ ನಟ ಕಿಚ್ಚ ಸುದೀಪ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. “ಶಿವಣ್ಣ 35 ರಿಂದ 40 ವರ್ಷದಿಂದ ಚಿತ್ರರಂಗದಲ್ಲಿದ್ದಾರೆ. ಸಿನಿಮಾ ಕಥೆ ಕೇಳದೆಯೇ ಅಭಿನಯಿಸಲು ಅವರು ಒಪ್ಪಿಕೊಂಡಿಲ್ಲ.. ಶಿವಣ್ಣ ಕಥೆಯನ್ನು ಒಪ್ಪಿಕೊಂಡು ಚಿತ್ರ ಮಾಡಿದ್ದಾರೆ., ಶಿವಣ್ಣ ಏನು ದಡ್ಡರೇ? ಕತೆ ಕೇಳಿ ಸಿನಿಮಾ ಮಾಡುವ ಬಗ್ಗೆ ಅವರ ನಿರ್ಧಾರ ತೆಗೆದುಕೊಂಡಿದ್ದಾರೆ. ಶಿವಣ್ಣ ಪಾತ್ರವನ್ನು ಒಪ್ಪಿಕೊಂಡಿರುವುದು ಅವರ ದೊಡ್ಡತನವನ್ನು ತೋರಿಸುತ್ತದೆ. ಪ್ರತಿಭಟನೆ ಮಾಡುವುದು ಶಿವಣ್ಣರ ನಿರ್ಧಾರಕ್ಕೆ ವಿರೋಧ ಮಾಡಿದಂತಾಗುತ್ತದೆ. ಒಬ್ಬ ವ್ಯಕ್ತಿ ಇನ್ನೊಬ್ಬನನ್ನ ಆತನ ತಾಯಿಯ ಜೊತೆ ಸೇರಿಸುವುದಕ್ಕೆ ಹೋದಾಗ ಮಾಡುವ ತ್ಯಾಗವನ್ನು ಸಿನಿಮಾದಲ್ಲಿ ತೋರಿಸಲಾಗಿದೆ.”

‘ಪಾತ್ರ ಅಂತಾ ಬಂದಾಗ ಅಲ್ಲಿ ಶಿವಣ್ಣ ನನ್ನ ಮೇಲೆ ಕೈ ಮಾಡುವ ದೃಶ್ಯ ಬಂದಿದ್ದರೆ, ಖಂಡಿತ ನಾನು ಹೊಡೆಸಿಕೊಳ್ಳುತ್ತಿದ್ದೆ. ಒಬ್ಬ ಹಿರಿಯ ಕಲಾವಿದನಾಗಿರುವ ಶಿವಣ್ಣ ಅವರು ತೆಗೆದುಕೊಂಡಿರುವ ನಿರ್ಧಾರವನ್ನು ಗೌರವಿಸಬೇಕು ಎಂದು ಮನವಿ ಮಾಡಿದರು. ಮಗನನ್ನು ಕರೆದುಕೊಂಡು ಬರುತ್ತೇನೆ ಅಂತಾ ಶಿವಣ್ಣ ತಾಯಿಗೆ ಮಾತು ಕೊಟ್ಟಿರುತ್ತಾರೆ. ಹಾಗಾಗಿ ನನ್ನ ಪಾತ್ರದ ಮೇಲೆ ಕೈ ಮಾಡಲ್ಲ.. ನನ್ನ ಪಾತ್ರ ಶಿವಣ್ಣನ ಪಾತ್ರದ ಮೇಲೆ ಕೈ ಮಾಡುವ ಮುನ್ನ ಶಿವಣ್ಣ ಯಾರು ಅಂತಾ ಗೊತ್ತಿರುವುದಿಲ್ಲ. ಬಳಿಕ ತಾಯಿ ಜೊತೆ ಸೇರಿಸಲು ಬಂದ ವ್ಯಕ್ತಿ ಅಂತಾ ಗೊತ್ತಾದ ಕೂಡಲೇ ಫೈಟಿಂಗ್ ಸೀನ್ ನಿಂತು ಹೋಗುತ್ತದೆ.” ಎಂದು ಸುದೀಪ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top