fbpx
ಸಮಾಚಾರ

ಭವ್ಯವಾದ ವಿಧಾನಸೌಧದ ಬಗ್ಗೆ ನಿಮ್ಗೆ ಎಷ್ಟು ಗೊತ್ತು,ವಿಧಾನಸೌಧದ ಕುರಿತ ಈ ಆಶ್ಚರ್ಯಕರ ಕುತೂಹಲಕಾರಿ ವಿಷಯಗಳನ್ನು ತಪ್ಪದೆ ತಿಳ್ಕೊಳ್ಳಿ

ವಿಧಾನಸೌಧದ ಬಗ್ಗೆ ನಿಮಗೆಷ್ಟು ಗೊತ್ತು ?
ವಿಧಾನಸೌಧ ನಮ್ಮ ರಾಜ್ಯದ ಶಕ್ತಿ ಕೇಂದ್ರ. ಭಾರತ ರಾಜ್ಯದ ಯಾವುದೇ ರಾಜ್ಯದಲ್ಲೂ ಕೂಡ ನಮ್ಮ ಬೆಂಗಳೂರಿನಲ್ಲಿ ನಡೆಯುವ ಸರ್ಕಾರಿ ಸೌಧಗಳು ಏನಿವೆ ? ಅವುಗಳೆಲ್ಲವನ್ನೂ ನಾವು ತೂಗಿ ಅಳತೆ ಮಾಡಿದರೆ, ವಿಧಾನಸೌಧದಷ್ಟು ಸುಂದರವಾದ ಒಂದು ಭವ್ಯ ಸೌಧ ಮತ್ತೊಂದಿಲ್ಲ. ಇಂತಹ ವಿಧಾನಸೌಧದ ಬಗ್ಗೆ ನಿಮಗೆ ಗೊತ್ತಿಲ್ಲದೇ ಇರುವ ಕೆಲವು ಕುತೂಹಲಕಾರಿ ಮಾಹಿತಿಗಳನ್ನು ಇಂದು ನಾವು ತಿಳಿದುಕೊಳ್ಳೋಣ ಬನ್ನಿ.

ಹಿಂದಿನ ಕಾಲದಲ್ಲಿ ಆಗಿನ್ನೂ ಕರ್ನಾಟಕ ರಾಜ್ಯ ಹುಟ್ಟಿಕೊಂಡಿರಲಿಲ್ಲ. ಮೈಸೂರು ರಾಜ್ಯ ಎಂದೇ ಇತ್ತು. ಕರ್ನಾಟಕ ಎನ್ನುವ ಹೆಸರು ಇನ್ನೂ ಬಂದಿರಲಿಲ್ಲ. ಆಗ ಮೈಸೂರು ರಾಜ್ಯಕ್ಕೆ ಮುಖ್ಯಮಂತ್ರಿಯಾಗಿದ್ದವರು ಕೆ ಸಿ ರೆಡ್ಡಿಯವರು ಮತ್ತು ಕೆಂಗಲ್ ಹನುಮಂತಯ್ಯನವರು ಸಚಿವರಾಗಿದ್ದರು. ಆಗ ಬೆಂಗಳೂರಿನ ಅಠಾರ ಕಚೇರಿಯಲ್ಲಿ ಸರ್ಕಾರದ ಆಡಳಿತ ನಡೆಯುತ್ತಿತ್ತು. ಯಾಕೆಂದರೆ ಆಗಿನ್ನು ವಿಧಾನಸೌಧ ನಿರ್ಮಾಣವಾಗಿರಲಿಲ್ಲ.ಸರ್ಕಾರದ ಆಡಳಿತ ನಡೆಸುವುದಕ್ಕೆ ಅಠಾರ ಕಛೇರಿಯ ಬದಲು ಒಂದು ಸೌಧವನ್ನು ಕಟ್ಟಬೇಕು ಎಂದು ಕೆ.ಸಿ. ರೆಡ್ಡಿಯವರು ತೀರ್ಮಾನ ಮಾಡುತ್ತಾರೆ. ಅದಕ್ಕೆ ಸುಮಾರು 33 ಲಕ್ಷ ಹಣವನ್ನು ವೆಚ್ಚ ಮಾಡಬೇಕು ಎಂದು ತೀರ್ಮಾನ ಮಾಡುತ್ತಾರೆ. ಅದು ಕೂಡ ಬ್ರಿಟಿಷ್ ಮಾದರಿಯಲ್ಲಿಯೇ ಇರಬೇಕು ಎಂದು ಇವರ ಆಸೆಯಾಗಿರುತ್ತದೆ.

 

 

 

ಆದರೆ ಅದಕ್ಕೆ ತೀವ್ರವಾಗಿ ವಿರೋಧ ಮಾಡಿದರು ಕೆಂಗಲ್ ಹನುಮಂತಯ್ಯನವರು. ಯಾಕೆಂದರೆ ನಾವು ಕಟ್ಟಬೇಕಾಗಿರುವ ಈ ಸೌಧ ನಮ್ಮ ಭಾರತೀಯ ಶೈಲಿಯಲ್ಲಿ ಇರಬೇಕು ಎನ್ನುವುದು ಅವರ ಆಸೆಯಾಗಿತ್ತು. ಬ್ರಿಟಿಷ್ ಮಾದರಿಯ ಸೌಧ ನಮಗೆ ಬೇಕಾಗಿಲ್ಲ. ನಮ್ಮ ಭಾರತೀಯ ಶೈಲಿಯಲ್ಲಿ ಕಟ್ಟೋಣ ಎಂದು ವಿರೋಧ ವ್ಯಕ್ತಪಡಿಸಿದರು. 1951ರಲ್ಲಿ ವಿಧಾನಸೌಧವನ್ನು ಕಟ್ಟುವುದಕ್ಕೆ ಜವಾಹರ್ ಲಾಲ್ ನೆಹರುವರು ಶಂಕುಸ್ಥಾಪನೆಯನ್ನು ಮಾಡುತ್ತಾರೆ.ಆ ಸಂದರ್ಭದಲ್ಲಿ ಯಾರೋ ಒಬ್ಬ ವಿದೇಶಿಯರು ಕೆಂಗಲ್ ಹನುಮಂತಯ್ಯನವರಿಗೆ ಒಂದು ಮಾತನ್ನು ಹೇಳುತ್ತಾರೆ. ನಿಮ್ಮಲ್ಲಿರುವ ಎಲ್ಲಾ ಕಟ್ಟಡಗಳು ಕೂಡ ವಿದೇಶದ ನಕಲುಗಳು ಎನ್ನುವ ಮಾತನ್ನು ಹೇಳುತ್ತಾರೆ. ಈ ಮಾತಿಗೆ ತುಂಬಾ ಬೇಸರವಾಗುತ್ತದೆ. ಇದನ್ನೇ ಸವಾಲಾಗಿ ತೆಗೆದುಕೊಂಡ ಅವರು ವಿಧಾನಸೌಧವನ್ನು ನಮ್ಮ ರಾಜ್ಯ ಮತ್ತು ನಮ್ಮ ದೇಶದ ಸಂಸ್ಕೃತಿ ನಾಡುನುಡಿ ಎಲ್ಲವನ್ನೂ ಬಳಸಿಕೊಂಡು ವಿಧಾನಸೌಧವನ್ನು ನಿರ್ಮಾಣ ಮಾಡುತ್ತಾರೆ. ದ್ರಾವಿಡ ಶೈಲಿಯಲ್ಲಿ ವಿಧಾನಸೌಧವನ್ನು ನಿರ್ಮಾಣ ಮಾಡಿದ್ದಾರೆ. ಕೆಂಗಲ್ ಹನುಮಂತಯ್ಯನವರು ಸ್ವತಃ ಮುಂದೆ ನಿಂತು ಪ್ರತಿಯೊಂದು ಕೆಲಸವನ್ನು ವಿಧಾನಸೌಧದ ನಿರ್ಮಾಣ ಮಾಡಿಸುತ್ತಾರೆ. ನಿರ್ಮಾಣ ಮಾಡುವ ಸಮಯದಲ್ಲಿ ಎಲ್ಲವನ್ನೂ ಇವರೇ ನೋಡಿಕೊಳ್ಳುತ್ತಾರೆ, ತುಂಬಾ ಮುತುವರ್ಜಿಯಿಂದ ಈ ಸೌಧವನ್ನು ಕಟ್ಟುತ್ತಾರೆ, ತುಂಬಾ ಶ್ರಮ ವಹಿಸುತ್ತಾರೆ. ಆದರೆ ದುರಂತ ಏನೆಂದರೆ ಅಷ್ಟು ಮುತುವರ್ಜಿ ವಹಿಸಿ ಕಟ್ಟಿದ ಆ ಸೌಧದಲ್ಲಿ, ಅವರೇ ಕಟ್ಟಿದ ಸೌಧದಲ್ಲಿ ಒಂದು ದಿನ ಕೂಡ ಆಡಳಿತ ನಡೆಸುವುದಕ್ಕೆ ಆಗಲಿಲ್ಲ.

ಯಾಕೆಂದರೆ ಆಗಿನ ಕಾಲಕ್ಕೆ ಆ ಸೌಧದಲ್ಲಿ ಸುಮಾರು 50 ಲಕ್ಷ ಖರ್ಚು ಮಾಡಿ, ನಾಲ್ಕು ಅಂತಸ್ತಿನ ಆ ಸೌಧವನ್ನು ಕಟ್ಟುವುದಕ್ಕೆ ತೀರ್ಮಾನ ಮಾಡುತ್ತಾರೆ. ವಿಧಾನಸೌಧದ ಕಟ್ಟಡ ಮುಗಿಯುವಷ್ಟರಲ್ಲಿ ಸುಮಾರು ಮೂರು ಪಟ್ಟು ಹಣ ಜಾಸ್ತಿ ಖರ್ಚಾಗಿರುತ್ತದೆ, ಅಂದರೆ ಸುಮಾರು ಒಂದು ಕೋಟಿ 80 ಲಕ್ಷ ರೂಪಾಯಿ ಹಣ ಖರ್ಚಾಗಿರುತ್ತದೆ.ಈ ಕಾರಣವನ್ನೇ ತೆಗೆದುಕೊಂಡ ಪಕ್ಷದ ಕೆಲವರು ಇವರ ಮೇಲೆ ಭ್ರಷ್ಟಾಚಾರದ ಆರೋಪವನ್ನು ಮಾಡುತ್ತಾರೆ. ಇದಕ್ಕೆ ಮನನೊಂದ ಅವರು ರಾಜೀನಾಮೆಯನ್ನು ಕೊಟ್ಟು ಹೊರ ಬರುತ್ತಾರೆ. ಈ ಕಾರಣಕ್ಕೋಸ್ಕರ ಅವರೇ ಕಟ್ಟಿದ ಆ ಸೌಧದಲ್ಲಿ ಒಂದು ದಿನವೂ ಸಹ ಕುಳಿತು ರಾಜ್ಯಭಾರವನ್ನು ನಡೆಸಲು ಆಗುವುದಿಲ್ಲ. ಅವರು ಯಾವುದೇ ತಪ್ಪನ್ನು ಮಾಡಿಲ್ಲ ಎಂದರು ಕುತಂತ್ರದಿಂದ ಅವರ ಅಧಿಕಾರ ಕಳೆದುಕೊಳ್ಳಬೇಕಾಯಿತು.

ಈ ವಿಧಾನಸೌಧದ ಕಲ್ಪನೆ ಕೆ.ಸಿ ರೆಡ್ಡಿಯವರಿಗೆ ಬಂದಿತ್ತು ಆದರೂ ಕೂಡ ಇದನ್ನು ಯಶಸ್ವಿಗೊಳಿಸಿದವರು ಕೆಂಗಲ್ ಹನುಮಂತಯ್ಯನವರು. ಕೆ.ಸಿ ರೆಡ್ಡಿಯವರ ನಂತರ ಮುಖ್ಯಮಂತ್ರಿ ಪಟ್ಟಕ್ಕೆ ಏರಿದ ಕೆಂಗಲ್ ಹನುಮಂತಯ್ಯನವರು, 1952 ರಲ್ಲಿ ವಿಧಾನಸೌಧವನ್ನು ಕಟ್ಟುವುದಕ್ಕೆ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ ಮತ್ತು ಇಡೀ ದೇಶದಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗ ಎರಡು ಆಡಳಿತ ನಡೆಸುತ್ತಿರುವುದು ವಿಧಾನಸೌಧದಲ್ಲಿ ಮಾತ್ರ. ಯಾವುದೇ ರಾಜ್ಯದಲ್ಲೂ ಕೂಡ ಈ ರೀತಿ ಇಲ್ಲ.

 

 

 

ವಿಧಾನಸೌಧದ ವಾಸ್ತು ಶಿಲ್ಪಿ ಯಾರು ಎಂದರೆ ಬಿಆರ್ ಮಾಣಿಕ್ಯನವರು. 1952 ರಲ್ಲಿ ವಿಧಾನಸೌಧದ ಕಟ್ಟಡ ಕಟ್ಟುವುದಕ್ಕೆ ಆರಂಭವಾದ ಕೆಲಸ 1956ರಲ್ಲಿ ಮುಕ್ತಾಯವಾಗುತ್ತದೆ. ಈಗ ನಿರ್ಮಾಣವಾಗಿರುವ ಆ ಪ್ರದೇಶ ಒಂದು ಕಾಲದಲ್ಲಿ ಗುಡ್ಡಗಾಡು ಪ್ರದೇಶವಾಗಿದ್ದು. ಬ್ರಿಟಿಷರು ಅದನ್ನು ಹೈಗ್ರೌಂಡ್ಸ್ ಎಂದು ಕರೆಯುತ್ತಿದ್ದರು. ವಿಧಾನಸೌಧದ ಒಟ್ಟು ವಿಸ್ತೀರ್ಣ 1,32,400 ಚದುರ ಅಡಿ.ಇದರ ಅಗಲ 700 ಅಡಿ ಅಗಲ , 350 ಅಡಿ ಉದ್ದ ಇದೆ, ಮತ್ತು ಪೂರ್ತಿ ವಿಧಾನಸೌಧವನ್ನು ಸುತ್ತು ಹಾಕಿದರೆ 7 ಕಿಲೋ ಮೀಟರ್ ನಡೆದಷ್ಟು ಅನುಭವವಾಗುತ್ತದೆ. ವಿಧಾನಸೌಧವನ್ನು ಗುಡುಗು ಮತ್ತು ಸಿಡಿಲಿನಿಂದ ರಕ್ಷಣೆ ಮಾಡುವುದಕ್ಕೆ ಕಾಪರ್ ಗ್ರೌಂಡಿಂಗ್ ಕೂಡ ಮಾಡಲಾಗಿದೆ.
ಈ ವಿಧಾನ ಸೌಧವನ್ನು ಕಟ್ಟುವುದಕ್ಕೆ ಶ್ರಮಿಸಿದ ಕಾರ್ಮಿಕರು 6300 ಜನ. ಅದರಲ್ಲಿ ಐದು ಸಾವಿರ ಕೈದಿಗಳಿದ್ದಾರೆ. ರಾಜ್ಯದ ಜಿಲ್ಲೆಯಲ್ಲಿ ಕೈದಿಗಳನ್ನು ಕರೆಸಿ ಕೆಲಸ ಮಾಡಿಸುತ್ತಾರೆ. ಅಷ್ಟು ಜನ ಕೈದಿಗಳನ್ನು ಸನ್ನಡತೆಯ ಆಧಾರದ ಮೇಲೆ ಐದು ಸಾವಿರ ಜನ ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ಅದರಲ್ಲಿ ಮಹಿಳಾ ಕೈದಿಗಳು ಕೂಡ ಇದ್ದರು. ದಿನಕ್ಕೆ ಅವರಿಗೆ ಒಂದು ರೂಪಾಯಿ ಕೂಲಿಯನ್ನು ಕೊಡುತ್ತಿದ್ದರು. ಕೈದಿಗಳನ್ನು ಯಾಕೆ ಬಳಸಿಕೊಂಡಿದ್ದರು ಎಂದರೆ ಆ ಸಮಯದಲ್ಲಿ ಕೂಲಿಕಾರ್ಮಿಕರ ಕೊರತೆ ಇರುತ್ತದೆ ಮತ್ತು ಖರ್ಚು ಕಡಿಮೆಯಾಗುತ್ತದೆ ಎನ್ನುವ ಕಾರಣಕ್ಕೋಸ್ಕರ ಅವರನ್ನು ಬಳಸಿಕೊಂಡಿದ್ದರು.

ಈ ಸೌಧವನ್ನು ಕಟ್ಟುವುದಕ್ಕೆ ಸ್ಥಳೀಯ ಮರಗಳು ಬಳಸಿಕೊಂಡಿರುವುದು ಇನ್ನೊಂದು ವಿಶೇಷ. ಬೆಟ್ಟಲಸೂರಿನಿಂದ ತರಿಸಿದ ಕಲ್ಲುಗಳನ್ನೇ ಬಳಸಿಕೊಂಡಿರುವುದು ಇನ್ನೊಂದು ವಿಶೇಷ. ಆ ಊರಿನಿಂದ ತರಿಸಿರುವ ಕಲ್ಲುಗಳಿಗೆ ಬಣ್ಣವನ್ನು ಕೂಡ ಮಾಡದೆ ಮೂಲ ರೂಪವನ್ನು ಉಳಿಸಿಕೊಂಡು ಆ ಕಟ್ಟಡದ ಭವ್ಯತೆಗೆ ಒಂದು ಒಳ್ಳೆಯ ರೂಪವನ್ನು ಕೊಟ್ಟಿದ್ದಾರೆ.ಟೀಕ್ ವುಡ್ ಮತ್ತು ತೇಗದ ಮರ ಇವೆಲ್ಲ ಕೂಡ ನಾನಾ ಜಿಲ್ಲೆಗಳಿಂದ ತರಿಸಿಕೊಂಡು ಬಳಸಿಕೊಂಡಿದ್ದಾರೆ. ಇಷ್ಟು ಅದ್ಭುತವಾಗಿ ಇಡೀ ದೇಶವೇ ತಿರುಗಿ ನೋಡುವಂತಹ ಸೌಧವನ್ನು ನಿರ್ಮಾಣ ಮಾಡಿದ, ಕೆಂಗಲ್ ಹನುಮಂತಯ್ಯನವರು ಒಂದು ದಿನ ಕೂಡಾ ಕೂತು ಆಡಳಿತ ನಡೆಸಲು ಆಗುವುದಿಲ್ಲ ಎನ್ನುವುದು ತುಂಬಾ ನೋವಿನ ಸಂಗತಿಯಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top