ಅರೋಗ್ಯ

ನಿದ್ದೆ ಬರ್ತಿಲ್ಲ ಅಂತ ಆ ಕಡೆ ಈ ಕಡೆ ಹೊರಳಾಡೋರು ಈ 10 ಮಾರ್ಗ ಹುಡ್ಕೊಂಡ್ರೆ ಖಂಡಿತಾ ನಿದ್ದೆ ಬರುತ್ತೆ

 

 

 

ಪಾಯಸ ತಿನ್ನೋಕೆ ನಿಮಗೆ ಇಷ್ಟವೇ ? ಹಾಗಾದರೆ ಇನ್ನೇಕೆ ತಡ ಗಸಗಸೆ ಪಾಯಸ ಮಾಡ್ಕೊಂಡು ತಿನ್ಬಿಡಿ ಇದು ದೇಹಕ್ಕೆ ಬಹಳ ತಂಪು .ಸಬ್ಬಕ್ಕಿ ಸೊಪ್ಪನ್ನು ಹೆಚ್ಚಾಗಿ ಸೇವಿಸಿ ಇದು ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯದು .ಹರಳೆಣ್ಣೆಯನ್ನು ತಲೆಗೆ ಚೆನ್ನಾಗಿ ಹಚ್ಚಿ ಮಸಾಜ್ ಮಾಡಿ ರಾತ್ರಿಯಿಡೀ ಹಾಗೇ ಬಿಟ್ಟು ಬೆಳಗ್ಗೆ ಸ್ನಾನ ಮಾಡಿ .ಸೌತೆಕಾಯಿ ತಿರುಳು ಸಹ ದೇಹದ ಉಷ್ಣವನ್ನು ಕಡಿಮೆ ಮಾಡುತ್ತೆ ಇದರಿಂದ ಒಳ್ಳೆಯ ನಿದ್ರೆ ಬರುತ್ತೆ .ಮೊಳಕೆ ಕಟ್ಟಿದ ಕಾಳುಗಳನ್ನು ಹೆಚ್ಚಾಗಿ ಸೇವನೆ ಮಾಡಿ ಇದು ದೇಹಕ್ಕೆ ತಂಪು ನೀಡುವುದಲ್ಲದೆ ಆರೋಗ್ಯಕ್ಕೂ ಬಹಳ ಒಳ್ಳೆಯದು .ಬೆಳಗಿನ ಜಾವ ವಾಕಿಂಗ್ ಮಾಡೋದು ಅಥವಾ ಸಂಜೆ ವಾಕಿಂಗ್ ಮಾಡೋದು ಒಳ್ಳೆಯ ಅಭ್ಯಾಸ ಇದನ್ನು ರೂಢಿ ಮಾಡಿಕೊಳ್ಳಿ .

 

 

ರಾಗಿ ಅಂಬಲಿ ಅಥವಾ ರಾಗಿ ಮುದ್ದೆಯನ್ನು ಸೇವಿಸುತ್ತಾ ಬನ್ನಿ ಇದು ದೇಹಕ್ಕೆ ತಂಪು ಆರೋಗ್ಯಕ್ಕೆ ಹಿತ .ಮದ್ಯಪಾನ ಹಾಗೂ ಧೂಮಪಾನ ಇಂತಹ ಅಭ್ಯಾಸಗಳಿಂದ ದೂರವಿರಿ .ಮೃದುವಾದ ಹಾಸಿಗೆ ಹಾಗೂ ದಿಂಬುಗಳನ್ನು ಬಳಸಿ .ಮಲಗುವ ಮುಂಚೆ ಒಂದು ಲೋಟ ಬಿಸಿ ಹಾಲನ್ನು ಕುಡಿದು ಮಲಗುವ ಅಭ್ಯಾಸ ಮಾಡಿಕೊಳ್ಳಿ ಇದು ನಿಮ್ಮ ದೇಹಕ್ಕೆ ಒಳ್ಳೆಯ ಆಹಾರ ಹಾಗೂ ನಿದ್ರೆಗೂ ಸಹ ಒಳ್ಳೆಯ ಆಹಾರ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top