ಮನೋರಂಜನೆ

ಬಿಗ್​​ಬಾಸ್ ಸೀಸನ್ 6ಕ್ಕೆ ಹೋಗಲಿರುವ ಸ್ಪರ್ಧಿಗಳ ಅಂತಿಮ ಪಟ್ಟಿ ಇಂತಿದೆ.

ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಷೋ ಬಿಗ್’ಬಾಸ್ ಕಾರ್ಯಕ್ರಮದ ಮತ್ತೊಂದು ಸೀಸನ್ನನ್ನು ಪ್ರಾರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ನಾಳೆ ಸಂಜೆ ಅಧಿಕೃತವಾಗಿ ಬಿಗ್ ಬಾಸ್ ಸೀಸನ್ 6ಕ್ಕೆ ಚಾಲನೆ ದೊರೆಯಲಿದೆ. ಕಳೆದ ಐದು ಸೀಸನ್​ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಕಿಚ್ಚ ಸುದೀಪ್ ಮತ್ತೊಮ್ಮೆ ಬಿಗ್ ಬಾಸ್ ಆಗಲು ರೆಡಿಯಾಗಿದ್ದಾರೆ.

ಬಿಗ್​ಬಾಸ್​ ಮನೆಗೆ ಯಾವ ಯಾವ ಸೆಲೆಬ್ರಿಟಿಗಳು ಎಂಟ್ರಿ ಆಗಲಿದ್ದಾರೆ ಎಂಬ ದೊಡ್ಡ ಕುತೂಹಲ ಇದೆ. ಇಂಥಾ ಬಿಗ್ ಬಾಸ್ ಮನೆಗೆ ಈ ಭಾರಿ ಅವರು ಹೋಗ್ತಾರಂತೆ, ಇವರು ಹೋಗ್ತಾರಂತೆ ಎಂಬಂತ ರೂಮರುಗಳು ಸಾಮಾಜಿಕ ಜಾಲತಾಣದಲ್ಲಿ ಸಿಕಾಪಟ್ಟೆ ಹರಿದಾಡುತ್ತಿದ್ದಾವೆ. ಆದರೆ ಇದೀಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿರುವ ಸ್ಪರ್ಧಿಗಳ ಪಟ್ಟಿ ಗೊತ್ತಾಗಿದ್ದು ಆ EXCLUSIVE ಡೀಟೈಲ್ಸ್ ಇಲ್ಲಿದೆ. ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ.

ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆಯಲಿರುವ ಸಂಭಾವ್ಯರ ಹೆಸರು.
ಶಾಲಿನಿ ಗೌಡ ( ಟಕಿಲಾ ಖ್ಯಾತಿಯ ನಟಿ), ಪ್ರೇಮಕುಮಾರಿ (ಶಾಸಕ ರಾಮದಾಸ್ ನನ್ನ ಗಂಡ ಅಂತ ಹೇಳಿದಾಕೆ) , ಮುರಳಿ (ಒಗ್ಗರಣೆ ಡಬ್ಬಿ ಖ್ಯಾತಿಯ),ರಂಜಿನಿ (ಪುಟ್ಟಗೌರಿ ಖ್ಯಾತಿಯ) , ಸುಮನ್ ರಂಗನಾಥ್ (ನಟಿಯ), ಕವಿತಾ ಗೌಡ (ನಟಿ) ,ನವೀನ್ ಸಜ್ಜು (ಸಿಂಗರ್), ಖರಾಬ್ ಸಿಂಗರ್ ತುಳಸಿ ಪ್ರಸಾದ್, ನಾಗರತ್ನಾ ದುನಿಯಾ ವಿಜಯ್ ಮೊದಲ ಪತ್ನಿ, ಅಕ್ಷತಾ ಪಾಂಡವಪುರ(ರಂಗಭೂಮಿ ಕಲಾವಿದೆ)

ಮನೆಯೊಳಗೆ ಯಾರು ಹೋಗುತ್ತಾರೆ, ಅವರು ಯಾವ ರೀತಿ ಇರುತ್ತಾರೆ, ಅವರನ್ನು ಕಳುಹಿಸಿಕೊಡಲು ಯಾರು ಬರುತ್ತಾರೆ, ಸುದೀಪ್ ಏನು ಹೇಳುತ್ತಾರೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಅ.21ರ ತನಕ ಕಾಯಲೇಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top