ಭವಿಷ್ಯ

21 ಅಕ್ಟೋಬರ್: ನಾಳೆಯ ಭವಿಷ್ಯ ಮತ್ತೆ ಪಂಚಾಂಗ

ಭಾನುವಾರ, ೨೧ ಅಕ್ಟೋಬರ್ ೨೦೧೮
ಸೂರ್ಯೋದಯ : ೦೬:೩೯
ಸೂರ್ಯಾಸ್ತ : ೧೮:೦೬
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಆಶ್ವಯುಜ

ಪಕ್ಷ : ಶುಕ್ಲ ಪಕ್ಷ
ತಿಥಿ : ದ್ವಾದಶೀ – ೨೧:೩೧ ವರೆಗೆ
ನಕ್ಷತ್ರ : ಪೂರ್ವಾ ಭಾದ್ರ – ಪೂರ್ಣ ರಾತ್ರಿ ವರೆಗೆ
ಯೋಗ : ವೃದ್ಧಿ – ೧೧:೩೯ ವರೆಗೆ
ಸೂರ್ಯ ರಾಶಿ : ತುಲಾ

ಅಭಿಜಿತ್ ಮುಹುರ್ತ: ೧೧:೫೯ – ೧೨:೪೫
ಅಮೃತಕಾಲ : ೨೩:೦೦ – ೨೪:೪೪+
ರಾಹು ಕಾಲ:೧೬:೪೦ – ೧೮:೦೬
ಗುಳಿಕ ಕಾಲ:೧೫:೧೪ – ೧೬:೪೦
ಯಮಗಂಡ:೧೨:೨೨ – ೧೩:೪೮

ಮಾನಸಿಕ ಚಂಚಲತೆ ವಿಪರೀತವಾಗುವುದರಿಂದ ಅದನ್ನು ಹತೋಟಿಯಲ್ಲಿಡಲು ಧ್ಯಾನ ಯೋಗಗಳನ್ನು ಅಭ್ಯಾಸ ಮಾಡಿ.  ನೆರೆಹೊರೆಯವರೊಂದಿಗೆ ಸೌಹಾರ್ದವಿರಲಿ. ಮತ್ತಾರದೋ ಉಪಕಾರಕ್ಕಾಗಿ ನೀವು ವೃಥಾ ತಿರುಗಾಡಬೇಕಾದ ಪ್ರಸಂಗ ಎದುರಾಗುವುದು. ಇದರಿಂದ ನಿಮ್ಮ ಆರೊಗ್ಯ ಕೆಡುವುದು.

ಮನಸ್ಸು ಪ್ರಫುಲ್ಲತೆಯಿಂದ ಕೂಡಿರುವುದು. ಒಂದು ಬೃಹತ್‌ ಕೆಲಸವನ್ನು ಸಕಾಲದಲ್ಲಿ ಮುಗಿಸಿದ ಆತ್ಮತೃಪ್ತಿಯೂ ನಿಮ್ಮದಾಗುವುದು. ವಿವಿಧ ಮೂಲಗಳಿಂದ ಬರುವ ಹಣದ ಮಾರ್ಗ ತಿಳಿಯುವುದು.

ಪದೇ ಪದೆ ನಿಮ್ಮ ವಿರುದ್ಧದ ಮಾತುಗಳು ಕೇಳಿಸುವವು. ಅದನ್ನು ಕೇಳಿ ನಕ್ಕುಬಿಡಿ. ನೀವು ಬದಲಾಗಿರುವ ವಿಚಾರ ಅವರಿಗೆ ತಿಳಿದಿಲ್ಲ ಅಥವಾ ಹಿಂದಿನ ದಿನಗಳ ಸ್ವಭಾವವನ್ನು ಮೆಲುಕು ಹಾಕಿದರೆ ನಿಮಗೇ ನಗು ಬರುವ ಸಂಭವವಿದೆ.

ನಿಮ್ಮ ಸುತ್ತಮುತ್ತಲಿನ ಇಷ್ಟಕಷ್ಟಗಳನ್ನು ನೀವು ಜಾಣತನದಿಂದ ಅರ್ಥ ಮಾಡಿಕೊಳ್ಳುವಿರಿ ಮತ್ತು ಇದರಿಂದ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.

 

ಕಾಲಚಕ್ರದ ಉರುಳುವಿಕೆಯ ದೆಸೆಯಿಂದ ಕೆಲವು ಕಾರ್ಯಗಳು ದಿಢೀರನೆ ಯಶಸ್ಸನ್ನು ಮತ್ತು ಬದಲಾವಣೆಯನ್ನು ತಂದುಕೊಡುವವು. ಇದರಿಂದ ಮಾನಸಿಕ ನೆಮ್ಮದಿ, ಸಂತೋಷ ಉಂಟಾಗುವವು. ಮಡದಿ ಮಕ್ಕಳ ಸಂಭ್ರಮಕ್ಕೆ ಕಾರಣವಾಗುವುದು.

 

ನಿಮ್ಮ ದ್ವಂದ್ವ ನಿಲುವಿನ ವಿಚಾರಧಾರೆಯಿಂದ ನಿಮ್ಮನ್ನು ಇತರರು ತಪ್ಪಾಗಿ ಅಥೈರ್‍ಸಿಕೊಳ್ಳುವ ಸಾಧ್ಯತೆ ಇದೆ. ಮನಸ್ಸಿನ ಏಕಾಗ್ರತೆಗಾಗಿ ಪರಮಶಿವನ ಧ್ಯಾನ ಮಾಡಿ. ಯಾರೊಟ್ಟಿಗೂ ಅನವಶ್ಯಕ ಮಾತುಗಳನ್ನು ಆಡದಿರಿ.

 

ನಿಮ್ಮ ನಡೆನುಡಿಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿರುವ ಈ ಸಂದರ್ಭದಲ್ಲಿ ನಿಮ್ಮನ್ನು ಮೆಚ್ಚದಿರಲು ಸಾಧ್ಯವೇ ಇಲ್ಲ. ಜನರೊಡನೆ ಸಂಪರ್ಕಿಸುವ ಮತ್ತು ಸಂವಹನ ನಡೆಸುವ ಕ್ರಿಯೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗುವಿರಿ.

 

ಒಂದನ್ನು ಪಡೆಯಲು ಮತ್ತೊಂದರ ತ್ಯಾಗದ ಅನಿವಾರ್ಯತೆ ಇರುತ್ತದೆ. ಹಾಗಾಗಿ ಮುಷ್ಟಿಕಾಳು ಚೆಲ್ಲಿ ಮೂಟೆ ಕಾಳನ್ನು ಬಾಚಿಕೊಳ್ಳುವಂತೆ ಕೆಲವು ವಿಚಾರಗಳಲ್ಲಿ ಯಶಸ್ಸು ಸಾಧಿಸಲು ಹಣ ನೀರಿನಂತೆ ಖರ್ಚಾಗುವುದು. ಈ ಬಗ್ಗೆ ಬೇಸರ ಬೇಡ.

 

ಯುದ್ಧದ ಮೊದಲೇ ಸೋಲುವ ಕುರಿತು ಚಿಂತಿಸದಿರಿ. ಮಾಡು ಇಲ್ಲವೆ ಮಡಿ ಎನ್ನುವ ಧ್ಯೇಯೋದ್ದೇಶದಿಂದ ಹೋರಾಟ ಮಾಡಿ. ಯಶಸ್ಸು ದೊರೆತರೆ ಜನರು ಹರ್ಷಿಸುವರು. ಸೋತರೆ ಜೀವನಕ್ಕೊಂದು ಪಾಠ ಆಗುವುದು.

ತಣ್ಣೀರನ್ನು ಆರಿಸಿ ಕುಡಿಯುವ ಕಾಲ. ಹಾಗಾಗಿ ನಿಮ್ಮ ಎದುರಾಳಿ ಆಡಿದ ಮಾತಿಗೆ ತಕ್ಷ ಣವೇ ಪ್ರತಿಕ್ರಿಯಿಸುವುದು ಸೂಕ್ತವಲ್ಲ. ಇದು ನಿಮ್ಮ ಸೋಲಲ್ಲ. ಸೋತಂತೆ ನಟಿಸಿ ಗೆಲ್ಲುವ ಪ್ರಯತ್ನ.

 

 

ಸಮಯ ಸಾಧಕರನ್ನು ಎಷ್ಟೆಂದು ದೂರ ಇಡುತ್ತೀರಿ? ಆದರೂ ನಿಮ್ಮ ತಾರ್ಕಿಕ ಹೆಜ್ಜೆಗಳು ಅವರಿಗೆ ಪಾಠ ಕಲಿಸುವುದು ಮತ್ತು ಅವರು ನಿಮ್ಮಿಂದ ದೂರ ಸರಿಯಲು ಸಹಕಾರಿಯಾಗುವುದು.

ಕಷ್ಟಪಡುವ ಮನಸ್ಸಿದೆ. ಆದರೆ ಬೆಂಬಲಿಸಬೇಕಾದ ಗೆಳೆಯರು ಕೈಕೊಡುವ ಸಾಧ್ಯತೆ ಇದೆ. ಆದರೆ ನಿಮ್ಮ ಆತ್ಮಬಲ ಮತ್ತು ನಿಮಗಿರುವ ದೈವಬಲದ ಮೇಲೆ ಎಲ್ಲಾ ಕಾರ್ಯವೂ ಸುಲಲಿತವಾಗುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top