ದೇವರು

ತೆಂಗಿನಕಾಯಿಯಿಂದ ದೃಷ್ಟಿ ತೆಗೆಯುವುದು ಹೇಗೆ ಮತ್ತು ಅದನ್ನು ಏನು ಮಾಡಬೇಕು ತಿಳಿಯಿರಿ.

ಆಧುನಿಕತೆಯ ಅಬ್ಬರದಲ್ಲೂ ದೃಷ್ಟಿ ತೆಗೆಯುವ ಆಚರಣೆಯನ್ನು ಕಾಣುತ್ತೇವೆ. “ ದೃಷ್ಟಿ” ಎನ್ನುವುದು ದೃಷ್ಟಿಯ ಜನಪದ ರೂಪವಾಗಿದೆ. ಅಂದರೆ ನೋಟ ಎಂದರ್ಥ. ಹಿರಿ-ಕಿರಿಯರಿಗೆ ಕೆಟ್ಟ ನೋಟಗಳು ಬಿದಿದ್ದರೇ ಅದನ್ನು ನಿವಾರಿಸಲು ಸಲುವಾಗಿ ಮಾಡುವ ಒಂದು ರೀತಿಯ ಶಾಂತಿಯನ್ನು “ದೃಷ್ಟಿ ತೆಗೆಯುವುದ”ನ್ನು ಮಾಡುತ್ತಾರೆ.

ತೆಂಗಿನಕಾಯಿಯಲ್ಲಿ ದೃಷ್ಟಿ ತೆಗೆಯುವ ಕ್ಷಮತೆಯು ಇತರ ವಸ್ತುಗಳಿಗಿಂತ ಹೆಚ್ಚಿರುವುದರಿಂದ, ವ್ಯಕ್ತಿಯ ಸೂಕ್ಷ್ಮದೇಹದಲ್ಲಿರುವ ಕಪ್ಪು ಶಕ್ತಿಯ ಆವರಣವನ್ನು ಸೆಳೆದುಕೊಳ್ಳುವಲ್ಲಿ ಅದು ಶ್ರೇಷ್ಠವಾಗಿದೆ. ಯಾವುದೇ ರೀತಿಯ ದೊಡ್ಡ ದೃಷ್ಟಿಯೂ ಸಹ ತೆಂಗಿನಕಾಯಿಯಿಂದ ಕಡಿಮೆಯಾಗುತ್ತದೆ.ತೆಂಗಿನಕಾಯಿಯು ಸರ್ವಸಮಾವೇಶಕವಾಗಿರುವುದರಿಂದ ಅದು ಎಲ್ಲ ವಿಧದ ದೃಷ್ಟಿಯನ್ನು ಅಥವಾ ಮಾಟವನ್ನು ತೆಗೆಯಲು ಉಪಯುಕ್ತವಾಗಿದೆ

 

 

 

ತೆಂಗಿನಕಾಯಿಯಿಂದ ದೃಷ್ಟಿಯನ್ನು ತೆಗೆಯುವುದು ಹೇಗೆ.

ಮೊದಲಿಗೆ ಈ ಪ್ರಾರ್ಥನೆ ಯನ್ನು ಮಾಡಬೇಕು, ದೃಷ್ಟಿ ತೆಗೆಯುವ ವ್ಯಕ್ತಿಯು ಮಾರುತಿಗೆ ನಮಸ್ಕರಿಸಿ ಮುಂದಿನಂತೆ ಪ್ರಾರ್ಥನೆಯನ್ನು ಮಾಡಬೇಕು – ‘ಹೇ ಮಾರುತಿ, ದೃಷ್ಟಿ ತಗಲಿದ ವ್ಯಕ್ತಿಯ  ಹೆಸರನ್ನು ಹೇಳಬೇಕು ದೇಹದಲ್ಲಿನ ಹಾಗೂ ದೇಹದ ಹೊರಗಿನ ಎಲ್ಲ ತ್ರಾಸದಾಯಕ ಸ್ಪಂದನಗಳನ್ನು ನೀನು ಈ ತೆಂಗಿನಕಾಯಿಯಲ್ಲಿ ಸೆಳೆದುಕೊಂಡು ನಾಶಗೊಳಿಸು. ದೃಷ್ಟಿಯನ್ನು ತೆಗೆಯುವಾಗ ನಿನ್ನ ಕೃಪೆಯಿಂದ ನನ್ನ ಸುತ್ತಲೂ ಸಂರಕ್ಷಣಾಕವಚವು ನಿರ್ಮಾಣವಾಗಲಿ.ಯಾವ ತೆಂಗಿನಕಾಯಿಯಿಂದ ದೃಷ್ಟಿಯನ್ನು ತೆಗೆಯಬೇಕಾಗಿದೆಯೋ, ಆ ತೆಂಗಿನಕಾಯಿಯ ಜುಟ್ಟನ್ನು ಬಿಟ್ಟು ಉಳಿದ ಸಿಪ್ಪೆಯನ್ನು ಸುಲಿಯಬೇಕು.ದೃಷ್ಟಿಯನ್ನು ತೆಗೆಯುವವನು ತೆಂಗಿನಕಾಯಿಯನ್ನು ತನ್ನ ಬೊಗಸೆಯಲ್ಲಿ ಹಿಡಿದುಕೊಂಡು ದೃಷ್ಟಿ ತಗಲಿದ ವ್ಯಕ್ತಿಯ ಎದುರು ನಿಲ್ಲಬೇಕು. ತೆಂಗಿನಕಾಯಿಯ ಜುಟ್ಟಿನ ತುದಿಯು ದೃಷ್ಟಿ ತಗಲಿದ ವ್ಯಕ್ತಿಯ ಕಡೆಗಿರಬೇಕು.ದೃಷ್ಟಿ ತೆಗೆಸಿಕೊಳ್ಳುವವನು ತೆಂಗಿನಕಾಯಿಯ ಜುಟ್ಟಿನ ಕಡೆಗೆ ನೋಡುತ್ತಿರಬೇಕು.

ದೃಷ್ಟಿ ತಗಲಿದ ವ್ಯಕ್ತಿಯ ಕಾಲಿನಿಂದ ತಲೆಯವರೆಗೆ ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ತೆಂಗಿನಕಾಯಿಯನ್ನು ವರ್ತುಲಾಕಾರದಲ್ಲಿ ಮೂರು ಸಲ ತಿರುಗಿಸಬೇಕು. ನಂತರ ಆ ವ್ಯಕ್ತಿಯ ಸುತ್ತಲೂ ಮೂರು ಸಲ ಪ್ರದಕ್ಷಿಣೆ ಹಾಕಬೇಕು. ಪ್ರದಕ್ಷಿಣೆಯನ್ನು ಹಾಕುವಾಗ ತೆಂಗಿನಕಾಯಿಯ ಜುಟ್ಟು ಸತತವಾಗಿ ದೃಷ್ಟಿ ತಗಲಿದ ವ್ಯಕ್ತಿಯ ಕಡೆಗಿರಬೇಕು. ಎಲ್ಲರನ್ನು ಒಟ್ಟಿಗೆ ಕೂರಿಸಿ ಸಾಮೂಹಿಕ ದೃಷ್ಟಿಯನ್ನೂ ತೆಗೆಯಬಹುದು.

ದೃಷ್ಟಿಯನ್ನು ತೆಗೆದ ತೆಂಗಿನಕಾಯಿಯನ್ನು ಏನು ಮಾಡಬೇಕು:ದೃಷ್ಟಿ ತಗಲಿರುವ ವ್ಯಕ್ತಿಗೆ ಮಂದ ಅಥವಾ ಮಧ್ಯಮ ತೊಂದರೆಯಿದ್ದರೆ, ದೃಷ್ಟಿ ತೆಗೆದ ತೆಂಗಿನಕಾಯಿಯನ್ನು ಮೂರ‍್ದಾರಿಯ ಮೇಲೆ ಮೂರು ದಾರಿಗಳು ಒಂದಾಗುವ ಸ್ಥಳದಲ್ಲಿ ಒಡೆಯಬೇಕು.

 

 

 

ದೃಷ್ಟಿ ತಗಲಿರುವ ವ್ಯಕ್ತಿಗೆ ತೀವ್ರ ತೊಂದರೆಯಿದ್ದರೆ ದೃಷ್ಟಿಯನ್ನು ತೆಗೆದ ತೆಂಗಿನಕಾಯಿಯನ್ನು ಮಾರುತಿಯ ಹನುಮಂತನ ದೇವಸ್ಥಾನದಲ್ಲಿ ಒಡೆಯಬೇಕು. ಮಾರುತಿಯ ದೇವಸ್ಥಾನವು ಹತ್ತಿರವಿಲ್ಲದಿದ್ದರೆ, ಇತರ ಯಾವುದಾದರೂ ಜಾಗೃತ ದೇವತೆಯ ಅಥವಾ ಉಚ್ಚ ದೇವತೆಯ ದೇವಸ್ಥಾನದ ಮೆಟ್ಟಿಲುಗಳ ಮೇಲೆ ತೆಂಗಿನಕಾಯಿಯನ್ನು ಒಡೆಯಬೇಕು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top