fbpx
ದೇವರು

ಹನುಮಂತ ಮತ್ತು ಶನೈಶ್ಚರ ದೇವರ ನಡುವೆ ಇರುವ ರಹಸ್ಯಕಾರಿ ವಿಷಯಗಳು.

ಯಾವ ಜನರು ದೇವರ ಮೇಲೆ ಸನಾತನ ಧರ್ಮದ ಮೇಲೆ ಮತ್ತು ಹನುಮಂತ ದೇವರ ಮೇಲೆ ನಂಬಿಕೆ ಇಡುತ್ತೀರೋ ಅಂತವರ ಕಷ್ಟಗಳು ಮತ್ತು ಸಮಸ್ಯೆಗಳು ದೂರಾಗುತ್ತವೆ.ಶನೈಶ್ಚರನು  ಯಾರು ತಪ್ಪು ಮಾಡುತ್ತಾರೋ ಅವರಿಗೆ ಶಿಕ್ಷೆ ಕೊಡುವ ದೇವರು.ಈ ಇಬ್ಬರು ದೇವರಿಗೂ ಜಗದೊಡೆಯನಾದ ಶಿವನಿಗೂ ಗಾಢವಾದ ಸಂಬಂಧವಿದೆ. ಹನುಮಂತನು ಶಿವನ 11 ನೇ ರುದ್ರನ ಅವತಾರವಾಗಿದ್ದು.ಶನೈಶ್ಚರನು ಶಿವನ ಕುರಿತು ತಪಸ್ಸನ್ನು  ಆಚರಿಸಿ ಶಿವನಿಂದ ಅತೀವವಾದ ಶಕ್ತಿಯನ್ನು ಪಡೆದನು. ಇದಕ್ಕಿಂತ ಹೆಚ್ಚಾಗಿ ಶಿವನನ್ನು ಯಾರು ಹೆಚ್ಚು ಪೂಜಿಸುತ್ತಾರೋ ಅವರಿಗೆ ತಂತಾನೆ ಶನೈಶ್ಚರನ ಆಶೀರ್ವಾದವು ಸಿಗುತ್ತದೆ.

 

 

ಇವಲ್ಲವುಗಳಿಗಿಂತ ಹೆಚ್ಚಾಗಿ  ಈ ದೇವರುಗಳ ಬಗ್ಗೆ ಇನ್ನೂ ಕೆಲವು ವಿಷಯಗಳನ್ನು ಶಾಸ್ತ್ರಗಳು ಎತ್ತಿ ಹಿಡಿದಿವೆ.ಈ ಪಾತ್ರಗಳಲ್ಲಿ  ಇದೇ ರೀತಿಯ ಶಕ್ತಿ ಮತ್ತು ಹೋಲಿಕೆಗಳನ್ನು ಮತ್ತು ಇಬ್ಬರ ಮದ್ಯೆ ಇರುವ ವ್ಯತ್ಯಾಸಗಳನ್ನು ಇಲ್ಲಿ ಹೇಳಲಾಗಿದೆ.ಹನುಮಂತನ ವಿವಿಧ ಹೆಸರುಗಳು ಮಾರುತಿ,ಅಂಜನಿ ಸುತ,ಪವನ ಪುತ್ರ,ಭಜರಂಗ ಬಲಿ,ಕಪೀಶ,ಆಂಜನೇಯ,ಹನುಮಂತ,ಶ್ರೀ ರಾಮ ದೂತ,ರುದ್ರ.ಶಾಸ್ತ್ರಗಳ ಪ್ರಕಾರ ಆಂಜನೇಯ ಮತ್ತು ಶನೈಶ್ಚರನ ಮದ್ಯೆ ಇರುವ ಹೋಲಿಕೆಗಳು, ಸೂರ್ಯ ಸಂಹಿತದ ಪ್ರಕಾರ ,ಹನುಮಂತ ದೇವರು ಜನಿಸಿದ್ದು ಶನಿವಾರ, ಆಂಜನೇಯನು ಶಿವನ 11 ನೇ ರುದ್ರ ಅವತಾರವಾಗಿರುವುದರಿಂದ. ರುದ್ರ ಎನ್ನುವುದು ಶಿವನ ಇನ್ನೊಂದು ಹೆಸರು ಸಹ ಆಗಿದೆ. ಹನುಮಾನ್ ಶಾಸ್ತ್ರ ನಾಮದಲ್ಲಿ ಇರುವ ಇನ್ನೊಂದು  ಹೆಸರು ಶನೈಶ್ಚರ.ಶಾಸ್ತ್ರಗಳಲ್ಲಿ ಅದೆಷ್ಟೋ ಬಾರಿ ಹನುಮಂತನ ದೇಹದ ಬಣ್ಣವು ಶನೈಶ್ಚರನ ದೇಹನ ಬಣ್ಣವು ಒಂದೇ ರೀತಿಯಲ್ಲಿದೆ.ಈ ಬಣ್ಣವು ಹನುಮಂತನ ಶನೈಶ್ಚರ ದೇವನ ಕ್ರೂರ ಕಣ್ಣುಗಳ ದೃಷ್ಟಿಯು ಬಿದ್ದ ಕಾರಣದಿಂದಾಗಿ ಬಂದಿದ್ದು ಎಂದು ನಂಬಲಾಗಿದೆ.

ಶನೈಶ್ಚರ ದೇವರ ತಂದೆ ಸೂರ್ಯ ದೇವ,ಸೂರ್ಯ ದೇವನೇ ಮಾರುತಿಗೆ ಶಿಕ್ಷಣ ನೀಡಿದ್ದು .ಶನೈಶ್ಚರನು ತನ್ನ ಸ್ವಂತ ತಂದೆಯ ಜೊತೆಯಲ್ಲೇ ಯುದ್ಧ ಮಾಡುತ್ತಾನೆ.ಆದರೆ ಸೂರ್ಯ ದೇವನೇ ಹನುಮಂತನಿಗೆ ಅದೆಷ್ಟೋ ಅನೇಕ ಶಕ್ತಿಗಳನ್ನು ಪ್ರದಾನ ಮಾಡಿದ್ದಾನೆ.ಮಾರುತಿಯನ್ನು ಮಹಾವೀರನನ್ನಾಗಿ ಮಾಡಿದ್ದಾರೆ.ಶನೈಶ್ಚರ ದೇವನು ತುಂಬಾ ಕ್ರೂರಿ ಎಂದು ಪರಿಗಣಿಸಲಾಗಿದೆ, ಯಾಕೆಂದರೆ ಮಾಡಿದ ತಪ್ಪಿಗೆ ಶಿಕ್ಷೆ ಖಂಡಿತವಾಗಿಯೂ ಸಿಗುತ್ತದೆ.ಶನೈಶ್ಚರನು ಎಂದಿಗೂ ಕ್ಷಮಿಸುವುದಿಲ್ಲ. ಆದರೆ ಹನುಮಂತನು ಶಿವನ ರೀತಿಯಲ್ಲಿ ತುಂಬಾ ಕರುಣಾಮಯಿ,ಕ್ಷಮಿಸುವ ಗುಣ ಅಧಿಕವಾಗಿದೆ.

 

 

 

4.ಶನೈಶ್ಚರ ದೇವನು ಹುಟ್ಟಿದ್ದು ಬೆಂಕಿಯಿಂದ.ಹನುಮಂತ ದೇವನು ಹುಟ್ಟಿದ್ದು ಗಾಳಿಯಿಂದ ವಾಯು ಪುತ್ರ,ಪವನ ಪುತ್ರ ಯಾರೂ ಕೂಡಾ ಶನಿವಾರದ ದಿನ ಎಣ್ಣೆಯನ್ನು ಖರೀದಿಸಬಾರದು,ಮಾರಾಟ ಕೂಡ ಮಾಡಬಾರದು. ಆದರೆ ಶನಿವಾರದ  ದಿನ ಎಣ್ಣೆಯನ್ನು ಹನುಮಂತನ ದೇವಸ್ಥಾನಕ್ಕೆ ದಾನವಾಗಿ ಕೊಟ್ಟರೆ ಒಳ್ಳೆಯದು ಅತ್ಯಂತ ಮಂಗಳಕರವೆಂದು ಭಾವಿಸಲಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top