ಕನ್ನಡ ಚಿತ್ರರಂಗದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಸಿನಿಮಾ ಇದೇ ವಾರ ದೇಶಾದ್ಯಂತ ತೆರೆಕಂಡಿದ್ದು ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.ಸ್ಯಾಂಡಲ್ವುಡ್ನ ಈ ಹಿಂದಿನ ಎಲ್ಲಾ ದಾಖಲೆಗಳನ್ನು ‘ದಿ ವಿಲನ್’ ಸಿನಿಮಾ ಧೂಳೀಪಟ ಮಾಡಿದೆ. ಮೊದಲ ದಿನವೇ ಬರೋಬ್ಬರಿ 20 ಕೋಟಿ ಕಲೆಕ್ಷನ್ ಮಾಡಿದೆ.. ಆದರೆ, ಇದೀಗ ವಿಲನ್ ಸಿನಿಮಾದ ನಟಿ ಆ್ಯಮಿ ಜಾಕ್ಸನ್ ಸ್ಯಾಂಡಲ್ವುಡ್ ಬದಲಿಗೆ ಕಾಲಿವುಡ್ ಎಂದು ಬಳಸಿ ಪೇಚಿಗೆ ಸಿಲುಕಿದ್ದಾರೆ.
Ahh so many ‘woods’ Bollywood, Tollywood, Kollywood and now Sandalwood. Honoured to be a part of #TheVillain 🎬
— Amy Jackson (@iamAmyJackson) October 18, 2018
ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ಆ್ಯಮಿ ಜಾಕ್ಸನ್ ಟ್ವೀಟ್ ವೊಂದನ್ನು ಮಾಡಿದ್ದರು. ಅದರಲ್ಲಿ ದಿ ವಿಲನ್ ಚಿತ್ರ ಭರ್ಜರಿ ಆರಂಭ ಪಡೆದಿದ್ದು ಕಾಲಿವುಡ್ ನಲ್ಲಿ ನಟಿಸಲು ನನಗೆ ಅವಕಾಶ ನೀಡಿದ ಪ್ರೇಮ್ ಜೀ ನಿಮಗೆ ದೊಡ್ಡ ಧನ್ಯವಾದಗಳು ಎಂದು ಟ್ವೀಟರಿಸಿದ್ದರು. ಇದು ಕನ್ನಡ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ..
ಸ್ಯಾಂಡಲ್ವುಡ್ ಬದಲಿಗೆ ಕಾಲಿವುಡ್ ಎಂದು ಬಳಸಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು. ಕನ್ನಡ ಸಿನಿಮಾದಲ್ಲಿ ನಟಿಸಿದ್ದರೂ ಸ್ಯಾಂಡಲ್ವುಡ್ ಎನ್ನುವುದು ತಿಳಿದಿರಲಿಲ್ಲವೇ ಎಂದು ಟ್ವೀಟಿಗರು ಪ್ರಶ್ನಿಸಿದ್ದಾರೆ.ಇನ್ನು ಆ್ಯಮಿ ಜಾಕ್ಸನ್ ಗೆ ನಮ್ಮ ಸ್ಯಾಂಡಲ್ವುಡ್ ಅನ್ನು ಕಾಲಿವುಡ್ ಎಂದು ಕರೆಯುವ ಮೂಲಕ ಕನ್ನಡಿಗರಿಗೆ ಅವಮಾನ ಮಾಡಿದ್ದೀರಿ ಎಂದು ಟ್ವೀಟರಿಗರು ಪ್ರಶ್ನೆ ಮಾಡಿದ್ದಾರೆ.
ಬಳಿಕ ಎಚ್ಚೆತ್ತುಕೊಂಡ ಆ್ಯಮಿ ಜಾಕ್ಸನ್, ಓಹ್ ಎಷ್ಟೊಂಡು ವುಡ್ಗಳು ಬಾಲಿವುಡ್, ಟಾಲಿವುಡ್, ಕಾಲಿವುಡ್ ಈಗ ಸ್ಯಾಂಡಲ್ವುಡ್. ದಿ ವಿಲನ್ ಚಿತ್ರದಲ್ಲಿ ಭಾಗಿಯಾಗಿದ್ದರೆ ಧನ್ಯವಾದಗಳು ಎಂದಿದ್ದಾರೆ.ಒಟ್ಟಾರೆ ತಮ್ಮ ತಪ್ಪನ್ನು ಒಪ್ಪಿ ಒಪ್ಪಿಕೊಳ್ಳದಂತೆ ಟ್ವೀಟ್ ಮಾಡಿ ಸುಮ್ಮನಾಗಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
