fbpx
ಮನೋರಂಜನೆ

ಕೇರಳದ ಶಾಸನಸಭೆಯಲ್ಲಿ ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿದ್ದ ಪಿಬಿ ಅಬ್ದುಲ್ ರಜಾಕ್ ವಿಧಿವಶ.

ಕನ್ನಡ ಪರ ಅಪಾರ ಕಾಳಜಿ ಹೊಂದಿದ್ದ ಕೇರಳದ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಅಬ್ದುಲ್‌ ರಜಾಕ್‌ ಅವರು ಶನಿವಾರ ನಸುಕಿನ ವೇಳೆ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಅವರ ಪಾರ್ಥಿವ ಶರೀರವನ್ನು ಕಾಸರಗೋಡಿನ ನೈಮರ್ಮೂಲಗೆ ತೆಗೆದುಕೊಂಡು ಹೋಗಲಾಗಿದೆ

63 ವರ್ಷ ವಯಸ್ಸಿನ ಅಬ್ದುಲ್ ರಜಾಕ್ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದಗೇ ಇಂದು ನಸುಕಿನ ಜಾವ ಮೃತಪಟ್ಟಿದ್ದಾರೆ.

 

 

ಮುಸ್ಲಿಂ ಲೀಗ್‌ನ ಪ್ರಮುಖ ನಾಯಕರಲ್ಲಿ ಅಬ್ದುಲ್‌ ರಜಾಕ್‌ ಅವರು ಒಬ್ಬರಾಗಿದ್ದ ರಜಾಕ್ 2011 ರಲ್ಲಿ ಮುಸ್ಲಿಂ ಲೀಗ್ ಪಕ್ಷದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿದ್ದರು. 2016 ರಲ್ಲಿ ಬಿಜೆಪಿಯ ಸುರೇಂದ್ರನ್‌ ಅವರ ವಿರುದ್ಧ ಕೇವಲ 85 ಮತಗಳಿಂದ ಅಚ್ಚರಿಯ ಗೆಲುವು ಸಾಧಿಸಿ ಕೇರಳ ವಿಧಾನಸಭೆ ಪ್ರವೇಶಿದ್ದ ರಜಾಕ್‌ ಅವರು ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸುವ ಮೂಲಕ ಕನ್ನಡದ ಕಂಪನ್ನ ಕೇರಳ ಶಾಸನಸಭೆಯಲ್ಲಿ ಸಾರಿದ್ದರು.

ರಜಾಕ್​ ಅವರ ಅಗಲಿಕೆಗೆ ರಾಜ್ಯದ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರೂ ಕಂಬನಿ ಮಿಡಿದಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top