ಸಮಾಚಾರ

ಬಿಜೆಪಿ ನಾಯಕ ಸದಾನಂದ ಗೌಡ ವಿರುದ್ಧ ಲೈಂಗಿಕ ಕಿರುಕುಳ ಆರೋಪ- ಇದಕ್ಕೆ ಡಿವಿಎಸ್ ಹೇಳಿದ್ದೇನು?

ದೇಶಾದ್ಯಂತ ಬಿರುಗಾಳಿಯಂತೆ ಆವರಿಸುತ್ತಿರುವ “MeToo” ಅಭಿಯಾನದ ಪ್ರಭಾವ ದಿನೇ ದಿನೇ ಹೆಚ್ಚಿಸಿಕೊಳ್ಳುತ್ತಿದೆ. ಇದೀಗ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ವಿರುದ್ಧ ಸಹ “ಮೀಟೂ” ಆರೋಪ ಕೇಳಿ ಬಂದಿದೆ. ಬಿಜೆಪಿಯಲ್ಲಿ ಈ ಹಿಂದೆ ಗುರುತಿಸಿಕೊಂಡಿದ್ದ ಮಾಧುರಿ ಎಂಬವರು ಈ ಆರೋಪ ಮಾಡಿದ್ದು ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ಸದಾನಂದಗೌಡ ಮುಖ್ಯಮಂತ್ರಿಗಳಾಗಿದ್ದ ವೇಳೆ ತಮ್ಮ ಜತೆ ಅನುಚಿತವಾಗಿ ವರ್ತಿಸಿದ್ದರೆಂದು ಮಹಿಳಾ ಮೋರ್ಚಾದಲ್ಲಿದ್ದ ಮಾಧುರಿ ಮುಧೋಳ್ ಅವರು ಫೇಸ್ಬುಕ್ ನಲ್ಲಿ ಆರೋಪಿಸಿದ್ದಾರೆ. “ನಾನು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯದರ್ಶಿಯಾಗಿದ್ದಾಗ ಸದಾನಂದಗೌಡರು ನನಗೆ ಪದೇ ಪದೇ ಕರೆ ಮಾಡಿ ತೊಂದರೆ ಕೊಡುತ್ತಿದ್ದರು,,ಅಷ್ಟೇ ಅಲ್ಲದೇ ಮೈ ಮೇಲೆ ಬೀಳೋದು, ಮೈ ಕೈ ಮುಟ್ಟೋದು ಹೀಗೆಲ್ಲಾ ಮಾಡುತ್ತಿದ್ದರು” ಎಂದು ಮಾಧುರಿ ಆರೋಪ ಮಾಡಿದ್ದಾರೆ.

ಮಾಧುರಿ ಅವರ ಆರೋಪದ ಬಗ್ಗೆ ಖಾಸಗಿ ಮಾದ್ಯಮಕ್ಕೆ ಪ್ರತಿಕ್ರಿಯಿಸಿದ ಸದಾನಂದಗೌಡರು “ಆಕೆ ಮಹಿಳಾ ಮೋರ್ಚಾದಲ್ಲಿದ್ದದ್ದು ನನಗೆ ನೆನಪಿದೆ ನಿಜ ಆದರೆ ನಾನಾಗ ಮುಖ್ಯಮಂತ್ರಿಯಾಗಿರಲಿಲ್ಲ, ಅಧ್ಯಕ್ಷನಾಗಿದ್ದೆ,, ಆ ಆರೋಪದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಅದೆಲ್ಲ ಏನು ಇಲ್ಲ,, ನಾನು ಹೇಗಿದ್ದೇನೆ ಎನ್ನುವುದು ಜಗತ್ತಿಗೆ ಗೊತ್ತು. ನಾನು ಯಾರಿಗೆ ಏನೂ ಹೆಳಲು ಹೋಗಲ್ಲ” ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top