ಸಮಾಚಾರ

ಇಡೀ ವಿಶ್ವದಲ್ಲೇ ಅತಿ ಎತ್ತರದ ಕಬ್ಬಿಣದ ಏಕತಾ ಮೂರ್ತಿ ಎಲ್ಲಿದೆ ಗೊತ್ತಾ,ಯಾವುದು ಆ ಮೂರ್ತಿ ನೀವೇ ನೋಡಿ

ಇಡೀ ವಿಶ್ವದಲ್ಲೇ ಎತ್ತರದ ಏಕತಾ ಮೂರ್ತಿ ಎನಿಸಿಕೊಂಡಿರುವ 600 ಅಡಿಯಷ್ಟು ಎತ್ತರವಿರುವ ಕಬ್ಬಿಣದ ಏಕತಾ ಮೂರ್ತಿ ಎಲ್ಲಿದೆ ಎಂದು ನಿಮಗೆ ಗೊತ್ತೇ ?ಯಾವುದು ಆ ಮೂರ್ತಿ ?
ನಮ್ಮ ಭಾರತದ ಉಕ್ಕಿನ ಮನುಷ್ಯ ಎಂದರೆ ಅದೇ ಸರ್ದಾರ ವಲ್ಲಭಾಯಿ ಪಟೇಲರವರು.ಇವರು ಭಾರತದ ಮೊದಲ ಉಪ ಪ್ರದಾನ ಮಂತ್ರಿ ಹಾಗೂ ಗೃಹ ಸಚಿವರು ಕೂಡ ಆಗಿದ್ದರು.ಇವರ ನೆನಪಿಗಾಗಿ ನಿರ್ಮಿಸಲಾಗಿರುವ ವಿಶ್ವದ ಅತೀ ಎತ್ತರದ ಪ್ರತಿಮೆಯು ಇದೇ ಅಕ್ಟೋಬರ್ 2018, 31 ನೇ ತಾರೀಖಿನಂದು ಸರ್ದಾರ ವಲ್ಲಭಾಯಿ ಪಟೇಲ ಅವರ ಹುಟ್ಟು ಹಬ್ಬದ ಪ್ರಯುಕ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿಜೀ ಅವರಿಂದಲೇ ಅನಾವರಣಗೊಳ್ಳಲಿದೆ.
ಈ ಏಕತಾ ಪ್ರತಿಮೆಯ ನಿರ್ಮಾಣವು ಶ್ರೀ ನರೇಂದ್ರ ಮೋದಿಜೀಯವರ ಕನಸಿನ ಯೋಜನೆಯಾಗಿತ್ತು,ಗುಜರಾತ್ ನ ನರ್ಮಾದ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸರ್ದಾರ್ ಸರೋವರ ಆನೆಕ್ಕಟ್ಟಿನಿಂದ ಕೆಳಭಾಗಕ್ಕೆ ಇದನ್ನು ನಿರ್ಮಿಸಲಾಗಿದೆ.

 

 

 

ಇದು 182 ಮೀಟರ್ ಎತ್ತರವನ್ನು ಹೊಂದಿದ್ದು ಇದು ವಿಶ್ವದಲ್ಲಿಯೇ ಅತೀ ಎತ್ತರವಾದ ಮೂರ್ತಿಗಳಲ್ಲಿ ಸರ್ದಾರ ವಲ್ಲಭಾಯಿ ಪಟೇಲ್ ಅವರ ಏಕತಾ ಮೂರ್ತಿಯು ಮೊದಲನೇ ಸ್ಥಾನದಲ್ಲಿದೆ.ಈ ಮೂರ್ತಿಯನ್ನು ನಿರ್ಮಿಸಲು ದೇಶದಾದ್ಯಂತ ರೈತರಿಂದ ಸುಮಾರು 135 ಟನ್ ಕಬ್ಬಿಣವನ್ನು ಸಹ ಸಂಗ್ರಹಿಸಿದ್ದರು.ಇದನ್ನು ನಿರ್ಮಾಣ ಮಾಡಲು ಸುಮಾರು 90 ಸಾವಿರ ಟನ್ ಸಿಮೆಂಟ್ ಮತ್ತು 25 ಸಾವಿರ ಟನ್ ಉಕ್ಕನ್ನೂ ಕೂಡ ಬಳಸಿದ್ದಾರೆ.ಈ ಯೋಜನೆಗೆ ಸುಮಾರು 2389 ಕೋಟಿ ರೂಪಾಯಿ ಖರ್ಚಾಗಿದೆ.ಇಲ್ಲಿ ಪಟೇಲರ ಮ್ಯೂಸಿಯಂ ಹಾಗೂ ಪ್ರತಿಮೆಗೆ ಲೇಸರ್ ಬೆಳಕಿನ ವ್ಯವಸ್ಥೆಯನ್ನು ಸಹ ಹೊಂದಿದೆ.ಸರ್ದಾರ ವಲ್ಲಭಾಯಿ ಪಟೇಲರವರ ಏಕತಾ ಮೂರ್ತಿಯು ಇಡೀ ವಿಶ್ವದಲ್ಲೇ ಅತೀ ಎತ್ತರದ ಮೂರ್ತಿಗಳಲ್ಲಿ ಇದೂ ಸಹ ಒಂದಾಗಿದೆ.ಇಂತಹ ಮೂರ್ತಿಯು ನಮ್ಮ ಭಾರತದಲ್ಲಿ ಇರುವುದು ನಮ್ಮೆಲ್ಲರ ಹೆಮ್ಮೆಯಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top