fbpx
ಸಮಾಚಾರ

ಈ ಭೂಮಿಯಲ್ಲಿ ಉಕ್ಕುತ್ತಿರುವ ಲಾವಾರಸ ಪ್ರಕೃತಿಯ ವಿನಾಶಕ್ಕೆ ಕಾರಣವೇ ಅಥವಾ ಕಲಿಯುಗದ ವಿನಾಶದ ಮುನ್ಸೂಚನೆಯೇ

ಚಿತ್ರದುರ್ಗದ ಈ ಭೂಮಿಯಲ್ಲಿ ಉಕ್ಕುತ್ತಿರುವ ಲಾವಾರಸ ಕಲಿಯುಗದ ವಿನಾಶದ ಮುನ್ಸೂಚನೆಯೇ ?
ಇತ್ತೀಚಿನ ದಿನಗಳಲ್ಲಿ ಬೆಳೆಯುತ್ತಿರುವ ಬೆಳವಣಿಗೆಗಳಿಂದಾಗಿ ಪ್ರಾಕೃತಿಕ ವಿಕೋಪಗಳು ಹೆಚ್ಚಾಗುತ್ತಿವೆ. ಅಷ್ಟೇ ಅಲ್ಲದೆ ನಿಜಕ್ಕೂ ಭೂಮಿಯ ಮೇಲೆ ವಿನಾಶ. ಅಥವಾ ಕಲಿಯುಗದ ಅಂತ್ಯ ಆಗುತ್ತಿದೆಯೇ ? ಎನ್ನುವ ಪ್ರಶ್ನೆಗಳು ಕೂಡ ಉದ್ಭವಿಸುತ್ತವೆ.ಈಗ ಇಂತಹದೇ ಒಂದು ಪ್ರಶ್ನೆಗೆ ಮತ್ತಷ್ಟು ಕುತೂಹಲ ಮತ್ತು ಪುಷ್ಠಿ ನೀಡುವಂತಹ ಒಂದು ಘಟನೆ ನಮ್ಮ ಕರ್ನಾಟಕದ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಮನ ಮೈನಾ ಹಳ್ಳಿಯಲ್ಲಿ ನಡೆದಿದೆ.
ಈ ಸಾಮಾನ್ಯವಾದ ಜಮೀನು ಒಂದರಲ್ಲಿ ಭೂಮಿಯಿಂದ ಲಾವಾರಸ ಉಕ್ಕಿ ಹರಿಯುತ್ತಿದೆ. ಇದನ್ನು ನೋಡಿದ ಅಲ್ಲಿನ ರೈತರು ಕಂಗಾಲಾಗಿ ಹೋಗಿದ್ದಾರೆ. ಇಡೀ ಊರಿಗೆ ಊರೇ ಈ ದೃಶ್ಯವನ್ನು ಕಂಡು ಬೆಚ್ಚಿ ಬೆರಗಾಗಿದೆ. ಭೂಮಿಯಲ್ಲಿ ಬರುತ್ತಿರುವಂತಹ ಈ ಜ್ವಾಲಾಮುಖಿಯನ್ನು ಕಂಡು ಕೇಳಿರುವುದು ಇಲ್ಲಿಯವರೆಗೂ ನಮ್ಮ ಭಾರತದಲ್ಲಿ ಎಲ್ಲಿಯೂ ಕಂಡುಬಂದಿಲ್ಲ.

 

 

 

ಕಾರಣ ದೇಶ ವಿದೇಶಗಳಲ್ಲಿ ಇಂತಹ ಪರಿಣಾಮಗಳು ಕಾಣಿಸಿ ಕೊಳ್ಳುತ್ತಿರುತ್ತವೆ. ಆದರೆ ಇದೀಗ ಕರ್ನಾಟಕದ ಕೋಟೆಯ ನಾಡು ಚಿತ್ರದುರ್ಗದಲ್ಲಿ ಇಂತಹ ಒಂದು ಸನ್ನಿವೇಶ ಎದುರಾಗಿರುವುದು ನಿಜಕ್ಕೂ ಅಲ್ಲಿನ ಪ್ರತಿಯೊಬ್ಬರಲ್ಲೂ ಸಹ ಅಚ್ಚರಿ ಹುಟ್ಟಿಸಿದೆ.ಅಲ್ಲಿನ ಜನರು ಹೆದರಿ ಕಂಗಾಲಾಗಿ ಹೋಗಿದ್ದಾರೆ.ಸರಿಸುಮಾರಾಗಿ 5 ದಿನಗಳಿಂದ ಸಾಮಾನ್ಯವಾದ ಈ ಜಮೀನಿನಲ್ಲಿ ಈ ರೀತಿಯ ಬೆಂಕಿಯ ಜ್ವಾಲೆ ಬರುತ್ತಿರುವುದು ಆಶ್ಚರ್ಯ ಹುಟ್ಟಿಸಿದೆ. ಬೆಂಕಿ ತನ್ನಷ್ಟಕ್ಕೆ ತಾನೇ ಜ್ವಾಲೆಯನ್ನು ಉಗುಳುತ್ತಿದೆ. ಇದೇನಾದರೂ ಪ್ರಕೃತಿಯ ವಿನಾಶಕ್ಕೆ ಕಾರಣವೇ ? ಅಥವಾ ಮುನ್ಸೂಚನೆ ? ಅಥವಾ ಈ ಜಗತ್ತು ಅಂತ್ಯವಾಗುವ ಲಕ್ಷಣಗಳು ಇದರಿಂದ ಎದ್ದುಕಾಣುತ್ತಿವೆಯೇ ? ಎಂದು ಗೊಂದಲಕ್ಕೆ ಒಳಗಾಗಿದ್ದಾರೆ.

ಒಟ್ಟಾರೆಯಾಗಿ ಇದನ್ನು ದೂರದಿಂದ ನೋಡಲು ಮಾತ್ರ ಸಾಧ್ಯ. ಹತ್ತಿರ ಹೋಗುವಷ್ಟು ಧೈರ್ಯ ಯಾರಿಗೂ ಇಲ್ಲ. ಜ್ವಾಲಾಮುಖಿ ಮತ್ತು ಲಾವಾರಸ ಕೇವಲ ನಾವು ಮಾಧ್ಯಮಗಳಲ್ಲಿ ನೋಡಿದ್ದೇವೆ. ಆದರೆ ಇದೀಗ ನಮ್ಮ ಕರ್ನಾಟಕ ರಾಜ್ಯದಲ್ಲಿ ಇಂತಹ ಒಂದು ಜ್ವಾಲಾಮುಖಿಯು ಉಕ್ಕಿ ಹರಿಯುತ್ತಿರುವುದರಿಂದ ನಿಜಕ್ಕೂ ಇದು ಕರ್ನಾಟಕ ರಾಜ್ಯದ ಜನತೆಯನ್ನು ಚಿಂತಾಕ್ರಾಂತರನ್ನಾಗಿಸಿದೆ. ಈ ರೀತಿ ಭೂಮಿಯಿಂದ ಉಕ್ಕಿಹರಿಯುತ್ತಿರುವ ಜ್ವಾಲಾಮುಖಿ ಇನ್ನೂ ಎಲ್ಲೆಲ್ಲಿ ಕಾಣಿಸಿಕೊಳ್ಳುತ್ತದೆಯೋ ಗೊತ್ತಿಲ್ಲ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top