ಮನೋರಂಜನೆ

RCB ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ- RCBಯಲ್ಲಿದ್ದ ದ.ಆಫ್ರಿಕಾದ ಸ್ಟಾರ್ ಪ್ಲೇಯರ್ ಮುಂಬೈ ಪಾಲು.

ಕಳೆದ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡಿದ್ದ ದಕ್ಷಿಣ ಆಫ್ರಿಕಾದ ಖ್ಯಾತ ಆಟಗಾರ ಕ್ವಿಂಟನ್ ಡಿ ಕಾಕ್ ಮುಂಬೈ ಇಂಡಿಯನ್ಸ್ ತಂಡದ ಪಾಲಾಗಿದ್ದಾರೆ. 12ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜು ಡಿ.16ಕ್ಕೆ ಗೋವಾದಲ್ಲಿ ನಡೆಯಲಿದೆ ಎನ್ನಲಾಗಿದೆ.

2018ರ ಐಪಿಎಲ್ ಹರಾಜಿನಲ್ಲಿ 2.8 ಕೋಟಿ ರೂಪಾಯಿ ಮೊತ್ತಕ್ಕೆ ಖರೀದಿಸಿದ್ದ ದಕ್ಷಿಣ ಆಫ್ರಿಕಾದ ವಿಕೆಟ್ಕೀಪರ್ ಬ್ಯಾಟ್ಸ್​ಮನ್ ಕ್ವಿಂಟನ್ ಡಿ ಕಾಕ್​ರನ್ನು ಇದೇ ಮೊತ್ತಕ್ಕೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಮಾರಾಟ ಮಾಡಿದೆ.. ಡಿ ಕಾಕ್ ಆರ್’ಸಿಬಿ ತಂಡ ಕೂಡಿಕೊಳ್ಳುವ ಮುನ್ನ ಡೆಲ್ಲಿ ಡೇರ್’ಡೆವಿಲ್ಸ್ ಹಾಗೂ ಸನ್’ರೈಸರ್ಸ್ ಹೈದರಾಬಾದ್ ತಂಡದಲ್ಲಿ ಕಾಣಿಸಿಕೊಂಡಿದ್ದರು. ಕಳೆದ ಆವೃತ್ತಿಯಲ್ಲಿ ಆರ್’ಸಿಬಿ ಪರ 8 ಪಂದ್ಯಗಳನ್ನಾಡಿ 201 ರನ್ ಬಾರಿಸಿದ್ದರು.

 

 

ಇನ್ನೊಂದೆಡೆ ಮುಂಬೈ ತಂಡ ಡಿ ಕಾಕ್​ರನ್ನು ಸೇರಿಸಿಕೊಳ್ಳುವ ಸಲುವಾಗಿ, 2.2 ಕೋಟಿ ರೂ. ಕೊಟ್ಟು ಖರೀದಿಸಿದ್ದ ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಹಾಗೂ 50 ಲಕ್ಷಕ್ಕೆ ಖರೀದಿಸಲಾಗಿದ್ದ ಶ್ರೀಲಂಕಾದ ಆಫ್​ಸ್ಪಿನ್ನರ್ ಅಕಿಲ ಧನಂಜಯರನ್ನು ತಂಡದಿಂದ ಕೈಬಿಟ್ಟಿದೆ. ಆಟಗಾರರನ್ನು ಉಳಿಸಿಕೊಳ್ಳುವ ಹಾಗೂ ಬಿಡುಗಡೆ ಮಾಡುವ ಪ್ರಕ್ರಿಯೆಗೆ ನವೆಂಬರ್ 15 ಕೊನೆಯ ದಿನವಾಗಿದ್ದು, ಬಿಡುಗಡೆಯಾದ ಆಟಗಾರರು ಅಂತಿಮ ಹರಾಜಿಗೆ ತೆರಳಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top