ಮನೋರಂಜನೆ

#MeToo- ಶ್ರುತಿ ಬೆಂಬಲಕ್ಕೆ ನಿಂತ ಮೂಗುತಿ ಸುಂದರಿ ಶ್ರದ್ಧಾ ಶ್ರೀನಾಥ್.

ಬಾಲಿವುಡ್‌ನಲ್ಲಿ ಹುಟ್ಟಿಕೊಂಡ ಮೀ ಟೂ ಅಭಿಯಾನ ಸ್ಯಾಂಡಲ್‌ವುಡ್‌ನತ್ತಲೂ ಬಂದಿದೆ. ನಟಿಯರನೇಕರು ತಮಗಾದ ಲೈಂಗಿಕ ಕಿರುಕುಳಗಳ ಬಗ್ಗೆ ಹೇಳಿಕೊಂಡಿದ್ದಾರೆ. ಮತ್ತೆ ಕೆಲವರು ಈ ಅಭಿಯಾನಕ್ಕೆ ಬೆಂಬಲ ಸೂಚಿಸಿ ನೊಂದವರ ಬೆನ್ನಿಗೆ ನಿಂತಿದ್ದಾರೆ. ಇದೀಗ ನಟ ಅರ್ಜುನ್‌ ಸರ್ಜಾ ವಿರುದ್ಧ ಯುವ ನಟಿ ಶೃತಿ ಹರಿಹರನ್‌ ಕಿರುಕುಳ ನೀಡಿದ್ದ ಆಪಾದನೆ ಮಾಡಿದ್ದಾರೆ.

ನಟಿ ಶ್ರುತಿ ಹರಿಹರನ್​ ಸಹ ಖ್ಯಾತ ನಟ ಅರ್ಜುನ್ ಸರ್ಜಾ ಅವರಿದ ತಮಗಾದ ಅನುಭವದ ಕುರಿತು ಹೇಳಿಕೊಂಡಿದ್ದಾರೆ. ತಮಿಳಿನ ವಿಸ್ಮಯ ಸಿನಿಮಾದಲ್ಲಿ ಶೃತಿಹರಿಹರನ್​​ ಹಾಗೂ ಅರ್ಜುನ್​​ ಸರ್ಜಾ ಒಂದೇ ಸಿನಿಮಾದಲ್ಲಿ ನಟಿಸಿದ್ರು. ಈ ಸಿನಿಮಾ ಶೂಟಿಂಗ್​​ ವೇಳೆಯಲ್ಲಿ ಅರ್ಜುನ್​​ ಸರ್ಜಾ ನನ್ನೊಂದಿಗೆ ಅಸಹಜವಾಗಿ ವರ್ತಿಸುತ್ತಿದ್ರು” ಎಂದು ಹೇಳಿಕೆ ನೀಡಿದ್ದಾರೆ.

 

 

ಶ್ರದ್ದಾ ಶ್ರೀನಾಥ್ ಬೆಂಬಲ:
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮತ್ತೊಬ್ಬ ನಟಿ ಶ್ರದ್ದಾ ಶ್ರೀನಾಥ್ ಶ್ರುತಿ ಅವ್ರಿಗೆ ಬೆಂಬಲ ನೀಡಿದ್ದಾರೆ. “ನನಗೆ 2016 ರಿಂದಲೇ ಈ ಘಟನೆ ಬಗ್ಗೆ ಗೊತ್ತಿತ್ತು. ನಾವಿಬ್ಬರೂ ಕಾಸ್ಟಿಂಗ್ ಕೌಚ್ ಬಗ್ಗೆ ಒಂದು ಟಾಕ್‌ಶೋದಲ್ಲಿ ಪಾಲ್ಗೊಂಡಾಗ ಶ್ರುತಿ ಈ ಬಗ್ಗೆ ಹೇಳಿದ್ದರು. ಆದರೆ, ಯಾರ ಹೆಸರನ್ನೂ ಹೇಳಿರಲಿಲ್ಲ. ಶ್ರುತಿ ಜೊತೆ ನಡೆದ ಘಟನೆ ಬಗ್ಗೆ ನನಗೆ ವಿಷಾದವಿದೆ. ಯಾರಿಗೂ ಅವರ ಕೆಲಸದ ಸ್ಥಳದಲ್ಲಿ ಇಂತಹ ಶೋಷಣೆ ಆಗಬಾರದು’ ಎಂದು ಶ್ರದ್ಧಾ ಟ್ವೀಟ್ ಮಾಡಿದ್ದಾರೆ.

ಶ್ರುತಿ ಮಾಡಿದ್ದ ಆರೋಪವೇನು?
ವಾರಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಶ್ರುತಿ ಹರಿಹರನ್‌ ಅವರು ನಟ ಅರ್ಜುನ್ ಸರ್ಜಾ ವಿರುದ್ಧ ಮೀ ಟೂ ಆರೋಪ ಹೊರಿಸಿದ್ದಾರೆ. ಅರ್ಜುನ್‌ ಸರ್ಜಾ ಅವರ ಜತೆ ವಿಸ್ಮಯ ಸಿನಿಮಾದಲ್ಲಿ ನಟಿಸುವಾಗ ತನಗಾದ ಕೆಟ್ಟ ಅನುಭವಗಳ ಕುರಿತು ಹೇಳಿಕೊಂಡಿರುವ ಅವರು, ಸರ್ಜಾ ಅವರ ಜತೆ ನಟಿಸುವಾಗ ಕೆಟ್ಟ ಅನುಭವವಾಗಿತ್ತು. ತಮ್ಮ ಗಡಿರೇಖೆಯನ್ನೂ ದಾಟಿ ನನ್ನ ಜತೆ ವರ್ತಿಸಿದ್ದರು. ತಬ್ಬಿಕೊಳ್ಳುವ ದೃಶ್ಯದ ರಿಹರ್ಸಲ್‌ ವೇಳೆ ಅನ್​​ಕಂಫರ್ಟಬಲ್​ ಆಗುವ ರೀತಿ ವರ್ತಿಸಿದ್ದರು. ಆಗ ನಾನೇ ಒಂದು ಕ್ಷಣ ತಬ್ಬಿಬ್ಬಾಗಿದ್ದೆ ಎಂದು ಹೇಳಿಕೊಂಡಿದ್ದಾರೆ.

ಪತಿ – ಪತ್ನಿ ಪಾತ್ರದಲ್ಲಿ ಅಭಿನಯಿಸಿದರೆ ಗಡಿರೇಖೆ ಇರುತ್ತದೆ. ಆದರೆ ಅರ್ಜುನ್ ಸರ್ಜಾ ಆ ಗಡಿ ರೇಖೆಯನ್ನು ಸರ್ಜಾ ಮೀರಿದ್ದರು,, ಚಿತ್ರದಲ್ಲಿ ನಾನು ಅವರ ಹೆಂಡತಿಯಾಗಿ ನಟಿಸುತ್ತಿದ್ದೆ, ಅದರ ಪ್ರ್ಯಾಕ್ಟೀಸ್ ಮಾಡುತ್ತಿದ್ದೆವು. ಆಗ ಸರ್ಜಾ ‘ಇನ್ನೊಂಚೂರು ಹೀಗೆ ಪ್ರಾಕ್ಟೀಸ್ ಮಾಡಬಹುದಲ್ವಾ?’ ಅಂತ ಹೇಳಿ ಅವರು ನನ್ನನ್ನು ಜೋರಾಗಿ ತಬ್ಬಿಕೊಂಡರು. ಅವರ ವರ್ತನೆ ತುಂಬಾನೇ ಅಸಹ್ಯವಾಗಿತ್ತು. ಇದರಿಂದ ನನಗೆ ಇರಿಸು ಮುರುಸು ಉಂಟಾಗಿತ್ತು ಎಂದು ಶ್ರುತಿ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top