ಭವಿಷ್ಯ

ತುಲಾ ಮಾಸದಲ್ಲಿ ಕಾವೇರಿ ನದಿಯಲ್ಲಿ ಸ್ನಾನ ಮಾಡುವುದರ ಪ್ರಾಮುಖ್ಯತೆ ಹಾಗೂ ಇದರಿಂದ ಸಿಗೋ ಫಲಗಳು ಏನೇನು ಗೊತ್ತಾ

ತುಲಾ ಮಾಸದಲ್ಲಿ ಕಾವೇರಿ ನದಿಯಲ್ಲಿ ಸ್ನಾನ ಈ ಸಂದರ್ಭದಲ್ಲಿ ಕಾವೇರಿ ಸ್ನಾನ ಮಾಡುವುದರ ಪ್ರಾಮುಖ್ಯತೆ ಏನು ? ಇದರಿಂದ ಯಾವೆಲ್ಲಾ ಫಲಗಳು ಲಭಿಸುತ್ತವೆ ?
ತುಲಾ ಮಾಸದಲ್ಲಿ ಕಾವೇರಿಯ ತೀರ್ಥ ಸ್ನಾನ ಮಾಡುವುದರಿಂದ ಪಾಪಗಳೆಲ್ಲವೂ ಕಳೆದು ಪುಣ್ಯ ಪ್ರಾಪ್ತಿಯಾಗುತ್ತದೆ , ಒಳ್ಳೆಯ ಫಲ ಸಿದ್ಧಿಸುತ್ತದೆ ಎಂದು ಹೇಳಲಾಗುತ್ತದೆ. ಇದರ ವಿಶೇಷತೆ ಏನು ? ಇದರ ಜೊತೆಗೆ ಈ ಸಂದರ್ಭದಲ್ಲಿ ಯಾವೆಲ್ಲಾ ನಿಯಮಗಳನ್ನು ಪಾಲಿಸಬೇಕು ? ಎಂಬುದನ್ನು ಈಗ ತಿಳಿದುಕೊಳ್ಳೋಣ ಬನ್ನಿ.

 

 

 

ಇದೀಗ ನಡೆಯುತ್ತಿರುವುದು ತುಲಾ ಮಾಸ. ಮೊನ್ನೆ ತಾನೆ ಕಾವೇರಿ ತೀರ್ಥೋದ್ಭವವಾಗಿದೆ. ಈ ತುಲಾ ಮಾಸದಲ್ಲಿ ಕಾವೇರಿ ತೀರ್ಥೋದ್ಭವಕ್ಕೆ ನಾವು ಹೋಗುವುದಕ್ಕೆ ಆಗಲಿಲ್ಲ ಸ್ನಾನ ಮಾಡುವುದಕ್ಕೆ ಆಗಲಿಲ್ಲ ಎಂದು ಚಿಂತೆ ಮಾಡಿ ಕೊರಗಬೇಡಿ.ತುಲಾ ಮಾಸದಲ್ಲಿ ಪ್ರತಿಯೊಬ್ಬರು ಕೂಡ ಕಾವೇರಿ ಸ್ನಾನವನ್ನು ಮಾಡಲೇಬೇಕು. ದೇವತೆಗಳಿಗೆ ಸ್ನಾನವನ್ನು ಮಾಡುವುದಕ್ಕೂ ಕೂಡ ಮಂತ್ರದಲ್ಲಿ ನಾವು “ಗಂಗೈಚಯಮುನಾ ನರ್ಮದಾಸಿಂಧುಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರುಂ” ಎಂದು ಹೇಳುತ್ತೇವೆ. ನಾವು ಪ್ರತಿನಿತ್ಯ ಸ್ನಾನ ಮಾಡಬೇಕಾದರೂ ಕೂಡ ಸಪ್ತ ನದಿ ಮತ್ತು ದೇವತೆಗಳ ಹೆಸರನ್ನು ಹೇಳಿ ಸ್ನಾನವನ್ನು ಮಾಡುತ್ತೇವೆ, ಅದಕ್ಕೆ ಹೇಳುವುದು ಗಂಗಾ, ಯಮುನಾ ಗೋದಾವರಿ, ಸರಸ್ವತಿ, ನರ್ಮದಾ, ಸಿಂಧು ,ಕಾವೇರಿ ಎಂದು ಹೇಳಿ ನಮಸ್ಕರಿಸಿ ಸ್ನಾನ ಮಾಡುವುದು, ಒಂದೊಂದು ನದಿಗಳು ಕೂಡ ಒಂದೊಂದು ಶಕ್ತಿಯನ್ನು ಅಡಗಿಸಿಟ್ಟುಕೊಂಡಿವೆ. ನಮ್ಮ ಕರ್ನಾಟಕ ಪ್ರಾಂತ್ಯದಲ್ಲಿ ಕಾವೇರಿ ಎನ್ನುವ ನದಿ ಹರಿಯುತ್ತಿದೆ.ಈ ತುಲಾ ಮಾಸದಲ್ಲಿ ವ್ಯವಸ್ಥಿತವಾಗಿ ಹುಟ್ಟಿ ರಂಗನಾಥ ಸ್ವಾಮಿಯ ಪ್ರದಕ್ಷಿಣೆಯನ್ನು ಮಾಡಿ, ಆದಿರಂಗ , ಮಧ್ಯರಂಗ ಮತ್ತು ಅಂತ್ಯ ರಂಗ ದೇವಸ್ಥಾನಗಳನ್ನು ಪ್ರದಕ್ಷಿಣೆಯನ್ನು ಮಾಡಿ, ಸಾಕ್ಷಾತ್ ಶ್ರೀಮನ್ನಾರಾಯಣನನ್ನೇ ಪ್ರದಕ್ಷಿಣೆ ಮಾಡಿ, ಸಾಗರವನ್ನು ಸೇರುತ್ತಾಳೆ ಕಾವೇರಿ .

ಅಂದರೆ ಈ ತುಲಾ ಮಾಸದಲ್ಲಿ ಮಾನವರಾದ ನಾವು ಮಾಡಬೇಕಾಗಿರುವ ಕೆಲಸ ಏನೆಂದರೆ… ವ್ಯವಸ್ಥಿತವಾಗಿ ಕಾವೇರಿ ಸ್ನಾನವನ್ನು ಮಾಡಬೇಕು, ತುಲಾ ಮಾಸದಲ್ಲಿ ಸಂಕಲ್ಪವನ್ನು ಮಾಡಬೇಕು, ನಾವು ನಮಗೆ ತಿಳಿದೋ ಅಥವಾ ತಿಳಿಯದೆಯೋ ಅನೇಕ ಪಾಪ ,ಕರ್ಮಗಳನ್ನು ಮಾಡಿರುತ್ತೇವೆ ಅವೆಲ್ಲ ನಿವಾರಣೆಯಾಗಬೇಕು ಎಂದರೆ ಕಾವೇರಿ ಸ್ನಾನವನ್ನು ಮಾಡಿ ರಂಗನಾಥನಿಗೆ ಅಂಗ ಪ್ರದಕ್ಷಿಣೆಯನ್ನು ಮಾಡಿ ಶರೀರವನ್ನು ದಂಡಿಸಿ.ಅಂದರೆ ಒದ್ದೆ ಬಟ್ಟೆಯಲ್ಲಿ ರಂಗನಾಥನಿಗೆ ಪ್ರದಕ್ಷಿಣೆಯನ್ನು ಮಾಡಿ ನಂತರ ದೀರ್ಘದಂಡ ನಮಸ್ಕಾರವನ್ನು ಮಾಡಿ. ಆಗ ನಿಮಗೆ ತಿಳಿದೋ ಅಥವಾ ತಿಳಿಯದೆಯೋ ಮಾಡಿರುವ ಪಾಪ ಕರ್ಮಗಳು ನಿವಾರಣೆಯಾಗಿ ಸುಖಜೀವನ ಪ್ರಾಪ್ತಿಯಾಗಲಿದೆ. ಆಗ ನಮ್ಮ ಶರೀರದಲ್ಲಿರುವ ಕೆಟ್ಟ ದೋಷಗಳು ಮತ್ತು ನಕಾರಾತ್ಮಕ ಶಕ್ತಿಗಳು ದೂರವಾಗಿ ಆರೋಗ್ಯ, ಐಶ್ವರ್ಯ, ಮಾನಸಿಕ ನೆಮ್ಮದಿ ಪ್ರಾಪ್ತಿಯಾಗುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top