ಒಂದೇ ಚಿತ್ರರಂಗದಲ್ಲಿ ಇಬ್ಬರು ನಟಿಯರು ಇದ್ದ ಮೇಲೆ ಒಂದು ಅವರಿಬ್ಬರು ಒಳ್ಳೆ ಫ್ರೆಂಡ್ಸ್ ಆಗಿರುತ್ತಾರೆ ಇಲ್ಲ ಅಂದ್ರೆ ಶತ್ರುಗಳಾಗಿರುತ್ತಾರೆ,ಯಾವ ಚಿತ್ರರಂಗ ಆದ್ರೂ ಸರಿ ಇದು ತುಂಬಾ ಕಾಮನ್ ,ಭಾರತ ಚಿತ್ರರಂಗದಲ್ಲಿ ಒಂದು ಒಳ್ಳೆ ಹೆಸರು ಇರೋ ಕಾರ್ಯಕ್ರಮಗಳಲ್ಲಿ ಕರಣ್ ಜೋಹರ್ ನಿರೂಪಣೆ ಮಾಡಿ ನಡೆಸಿಕೊಡುವ ಅತೀ ದೊಡ್ಡ ಶೋ ‘ಕಾಫಿ ವಿತ್ ಕರಣ್’ಕೂಡ ಒಂದು ,ಆ ಕಾರ್ಯಕ್ರಮ ಎಷ್ಟು ಫೇಮಸ್ ಅಂದ್ರೆ 5 ಸೀಸನ್ ಕಂಪ್ಲೀಟ್ ಮಾಡಿ ಈಗ 6 ನ್ನೇ ಸೀಸನ್ ಪ್ರಸಾರವಾಗುತ್ತಿದೆ ,ಈ ಕಾರ್ಯಕ್ರಮಕ್ಕೆ ಅನೇಕ ಬಾಲಿ ವುಡ್ ಸೆಲೆಬ್ರಿಟಿ ಗಳು ಬಂದು ಅವರು ಮನರಂಜನೆ ತಗೊಳುವುದರ ಜೊತೆ ಜನರಿಗೂ ಮನರಂಜನೆ ಕೊಟ್ಟು ಹೋಗುತ್ತಾರೆ .
ಇಂಥ ಸುಪ್ರಸಿದ್ಧ ಕಾರ್ಯಕ್ರಮ ಕಾಫಿ ವಿತ್ ಕರಣ್ ಗೆ ಬಾಲಿವುಡ್ ಬೆಡಗಿ ಅಲಿಯಾ ಭಟ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಆಗಮಿಸಿದ್ದರು ,ದೀಪಿಕಾ ಪಡುಕೋಣೆ ಹಾಗೂ ಅಲಿಯಾ ಭಟ್ ಬಹಳ ಒಳ್ಳೆಯ ಸ್ನೇಹಿತರು. ಆದರೆ ಇಬ್ಬರು ಹೆಚ್ಚು ಸಮಯ ಜೊತೆಯಲ್ಲಿ ಕಳೆಯುವುದಿಲ್ಲ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲೂ ಇಬ್ಬರು ಇಂಟರ್ಯಾಕ್ಟ್ ಮಾಡುವುದಿಲ್ಲ. ಸದ್ಯ ಅಲಿಯಾ ಹಾಗೂ ದೀಪಿಕಾ ಇಬ್ಬರು ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಸ್ನೇಹದ ಬಗ್ಗೆ ಮಾತನಾಡಿದ್ದಾರೆ.ಇವರಿಬ್ಬರು 2 ವರ್ಷದ ಹಿಂದೆ ನಡೆದ ಒಂದು ಘಟನೆ ಯೊಂದನ್ನು ಇಲ್ಲಿ ಮೆಲಕು ಹಾಕಿದ್ದಾರೆ ,ದೀಪಿಕಾ ಹಾಗೂ ಅಲಿಯಾ ಎರಡು ವರ್ಷಗಳ ಹಿಂದೆ ಐಫಾ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗಿದ್ದರು.
ಈ ವೇಳೆ ದೀಪಿಕಾ ಹಾಗೂ ಅಲಿಯಾ ಕೋಲ್ಡ್ ಪ್ಲೇ ಕಾನ್ಸರ್ಟ್ ನೋಡಲು ಸಡನ್ ಪ್ಲಾನ್ ಮಾಡಿಕೊಂಡು ಹೋಗಿದ್ದರು.ಕಾನ್ಸರ್ಟ್ ವೇಳೆ ದೀಪಿಕಾ ಹಾಗೂ ಅಲಿಯಾಗೆ ಶೌಚಾಲಯಕ್ಕೆ ಹೋಗಬೇಕಿತ್ತು, ಆದರೆ ಮಹಿಳಾ ಶೌಚಾಲಯದಲ್ಲಿ ಉದ್ದದ ಲೈನ್ ಇತ್ತು. ಅಲ್ಲದೇ ಪುರುಷರ ಶೌಚಾಲಯದ ಹೊರಗೆ 4ರಿಂದ 5 ಜನರಿದ್ದರು. ಈ ವೇಳೆ ನಾವು ಎಲ್ಲರಿಗೂ ದೂರ ತಳ್ಳಿ ಪುರುಷರ ಶೌಚಾಲಯಕ್ಕೆ ಹೋಗಿದ್ದೇವು ಎಂದು ಇಬ್ಬರು ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.ಪುರುಷರ ಶೌಚಾಲಯಕ್ಕೆ ಹೋಗಿದ್ದು ನನಗೆ ಹೊಸ ಅನುಭವವಾಯಿತು. ಆದರೆ ದೀಪಿಕಾಳನ್ನು ನೋಡಿ ನಾನು ಆಕೆ ಶಾಂತ ಮಹಿಳೆ ಎಂದುಕೊಂಡಿದ್ದೆ. ಆದರೆ ದೀಪಿಕಾ ಒಬ್ಬಳು ಹುಚ್ಚಿ, ಕ್ರ್ಯಾಕ್ ಎಂದು ಅಲಿಯಾ ಕಾರ್ಯಕ್ರಮದ ನಿರೂಪಕ ಕರಣ್ ಜೋಹರ್ಗೆ ಹೇಳಿದ್ದಾರೆ.ಇದನ್ನು ನೋಡಿದ ಜನ ಬಿದ್ದು ಬಿದ್ದು ನಕ್ಕಿದ್ದಾರೆ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
