ಮನೋರಂಜನೆ

“ನನಗೂ ಕಿರುಕುಳ ಆಗಿದೆ” ಶ್ರುತಿ ಹರಿಹರನ್ ಪರ ಬ್ಯಾಟ್ ಬೀಸಿದ ನಟಿ ಅವಂತಿಕಾ ಶೆಟ್ಟಿ.

ಸಿನಿಮಾ ಹೀರೋಯಿನ್ನುಗಳಿಗೆ ಥರಥರದ ಕಾಟ ಕಾಡುವ ಪ್ರವೃತ್ತಿಯ ಸರಣಿಗಳು ಈಗ ದೇಶದೆಲ್ಲೆಡೆ ಬಿಚ್ಚಿಕೊಳ್ಳುತ್ತಿವೆ, ಅಂತೆಯೇ ಹೀಗೆ ಧ್ವನಿ ಎತ್ತಿದ ನಟಿಯರ ಧ್ವನಿಯಡಗಿಸುವ ಪ್ರಯತ್ನಗಳೂ ಭರ್ಜರಿಯಾಗಿ ನಡೆಯುತ್ತಿವೆ..ಇತ್ತೀಚಿಗೆ ಬಾಲಿವುಡ್ ನಟಿ ತನುಶ್ರೀ ದತ್ತ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದೇ ತಡ ಮೀಟೂ ಎಂಬ ಅಭಿಯಾನವೊಂದಕ್ಕೆ ಚಾಲನೆ ನೀಡಿದೆ. ಇದರ ಮೂಲಕ ಚಿತ್ರರಂಗದ ನಟಿಯರು ತಾವೇ ಕಂಡುಂಡ ನೋವುಗಳನ್ನ ಸಾಮಾಜಿಕ ಜಾಲತಾಣಗಳ ಮೂಲಕ ಜಾಹೀರು ಮಾಡಲಾರಂಭಿಸಿದ್ದಾರೆ. ಈ ಮೂಲಕ ಸಭ್ಯ ನಟರು ಎಂಬ ಲೇಬಲ್ಲು ಮೆತ್ತಿಕೊಂಡು ಓಡಾಡುತ್ತಿರುವ ಸ್ಟಾರ್ ನಟರ ಅಸಲಿ ಮುಖವಾಡಗಳು ಕಳಚಿ ಬೀಳಲಾರಂಭಿಸಿವೆ.

ಬಾಲಿವುಡ್‌ನಲ್ಲಿ ಹುಟ್ಟಿಕೊಂಡ ಮೀ ಟೂ ಅಭಿಯಾನ ಸ್ಯಾಂಡಲ್‌ವುಡ್‌ನತ್ತಲೂ ಬಂದಿದೆ. ಕನ್ನಡದ ನಟಿಯರನೇಕರು ಕೂಡ ತಮಗಾದ ಲೈಂಗಿಕ ಕಿರುಕುಳಗಳ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ. ಮತ್ತೆ ಕೆಲವರು ಈ ಅಭಿಯಾನಕ್ಕೆ ಬೆಂಬಲ ಸೂಚಿಸಿ ನೊಂದವರ ಬೆನ್ನಿಗೆ ನಿಂತಿದ್ದಾರೆ. ಅಂತೆಯೇ ಹೀಗೆ ಧ್ವನಿ ಎತ್ತಿದ ನಟಿಯರ ಧ್ವನಿಯಡಗಿಸುವ ಪ್ರಯತ್ನಗಳೂ ಭರ್ಜರಿಯಾಗಿ ನಡೆಯುತ್ತಿವೆ.. ಇದೀಗ ನಟ ಅರ್ಜುನ್‌ ಸರ್ಜಾ ವಿರುದ್ಧ ಯುವ ನಟಿ ಶೃತಿ ಹರಿಹರನ್‌ ಕಿರುಕುಳ ನೀಡಿದ್ದ ಆಪಾದನೆ ಮಾಡಿದ್ದಾರೆ.

ನಟಿ ಶ್ರುತಿ ಹರಿಹರನ್​ ಸಹ ಖ್ಯಾತ ನಟ ಅರ್ಜುನ್ ಸರ್ಜಾ ಅವರಿದ ತಮಗಾದ ಅನುಭವದ ಕುರಿತು ಹೇಳಿಕೊಂಡಿದ್ದಾರೆ. ತಮಿಳಿನ ವಿಸ್ಮಯ ಸಿನಿಮಾದಲ್ಲಿ ಶೃತಿಹರಿಹರನ್​​ ಹಾಗೂ ಅರ್ಜುನ್​​ ಸರ್ಜಾ ಒಂದೇ ಸಿನಿಮಾದಲ್ಲಿ ನಟಿಸಿದ್ರು. ಈ ಸಿನಿಮಾ ಶೂಟಿಂಗ್​​ ವೇಳೆಯಲ್ಲಿ ಅರ್ಜುನ್​​ ಸರ್ಜಾ ನನ್ನೊಂದಿಗೆ ಅಸಹಜವಾಗಿ ವರ್ತಿಸುತ್ತಿದ್ರು” ಎಂದು ಹೇಳಿಕೆ ನೀಡಿದ್ದಾರೆ. ಅರ್ಜುನ್​ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್ ಅವರ ಪರ ನಟಿ ಆವಂತಿಕಾ ಶೆಟ್ಟಿ ಕೂಡ ಬ್ಯಾಟ್ ಬೀಸಿದ್ದಾರೆ.

ಅಸಭ್ಯ ಅನುಭವಗಳು ಆಗಿದ್ದರೇ ಯಾಕೆ ಶ್ರುತಿ ಹರಿಹರನ್ ಸಿನಿಮಾದಿಂದ ಹೊರಬರಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಆವಂತಿಕಾ “ಒಂದು ಸಿನಿಮಾ ಒಪ್ಪಿಕೊಂಡು ಸಹಿ ಮಾಡಿದ ನಂತರ ಏನೇ ಸಮಸ್ಯೆಗಳಾದರೂ, ಅಷ್ಟು ಸುಲಭವಾಗಿ ಆ ಸಿನಿಮಾದಿಂದ ಹೊರ ಬರಲು ಸಾಧ್ಯವಿಲ್ಲ” ಎಂದು ಶ್ರುತಿ ಅವರಿಗೆ ಬೆಂಬಲಿಸಿದ್ದಾರೆ.

ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ಆವಂತಿಕಾ ಶೆಟ್ಟಿ “ಬಾಲಿವುಡ್​ನಲ್ಲೂ ಲೈಂಗಿಕ ಕಿರುಕುಳ ನೀಡಲಾಗುತ್ತದೆ. ನನಗೂ ಅಲ್ಲಿ ಅದರ ಅನುಭವವಾಗಿದೆ. ಸಾಕಷ್ಟು ದೊಡ್ಡ ದೊಡ್ಡ ನಟರ ಹೆಸರು ಈ ಪ್ರಕರಣದಲ್ಲಿದೆ. ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದೇನೆ, ಕಾಲ ಬಂದಾಗ ಎಲ್ಲ ಸತ್ಯವನ್ನೂ ಬಿಚ್ಚಿಡುತ್ತೇನೆ’ ಎಂದು ಅವಂತಿಕಾ ಹೇಳಿಕೆ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top