ಅರೋಗ್ಯ

ಅಡುಗೆ ಸೋಡಾದ ಈ 7 ಉಪಯೋಗಗಳು ತಿಳ್ಕೊಂಡ್ಮೇಲೆ ಬೇಕಾಬಿಟ್ಟಿ ನೋಡ್ತಿದ್ದ ಸೋಡಾನ ಬಂಗಾರದಂಗೆ ನೋಡ್ತೀರಾ

ಅಡುಗೆ ಸೋಡ ಅಡುಗೆ ಮಾಡೋದು ಬಿಟ್ಟು ಇನ್ನು ಬೇರೆ ಎಷ್ಟೋ ಕೆಲಸಕ್ಕೇ ಉಪಯೋಗ ಮಾಡಿಕೊಳ್ಳಬಹುದು.

 

 

 

ಕಪ್ಪಾದ ಒಡವೆ ಗಳಿಗೆ ಅಡುಗೆ ಸೋಡ ಹಾಕಿ ತೊಳೆದಾಗ ಒಡವೆ ಪಳಪಳ ಹೊಳೆಯುತ್ತದೆ .ಬಕೆಟ್  ನೀರಿಗೆ ಸ್ವಲ್ಪ ಅಡಿಗೆ ಸೋಡಾ ಬೆರೆಸಿ ಮನೆ ಒರೆಸುವುದರಿಂದ ನೆಲದಲ್ಲಿರುವ ಕ್ರಿಮಿ ಕೀಟ ಎಲ್ಲಾ ಹೋಗಿ ನೆಲ ಸ್ವಚ್ಛವಾಗಿ ಪಳ ಪಳ ಹೊಳೆಯುತ್ತದೆ  ಫ್ರಡ್ಜ್ ನಲ್ಲಿ ತರಕಾರಿ ಹಣ್ಣು ಇವೆಲ್ಲ ಕೊಳೆತು ವಾಸನೆ ಬರುತ್ತಾ ಇದ್ರೆ ನೀರಿಗೆ ಸ್ವಲ್ಪ ಅಡಿಗೆ ಸೋಡಾ ಮಿಶ್ರಣ ಮಾಡಿ ಒರೆಸಿ ಇದರಿಂದ ವಾಸನೆ ಹೋಗಿ ಸ್ವಚ್ಛವಾಗಿ ಹೊಳೆಯುತ್ತದೆ.ಅಡುಗೆ ಮನೆಯಲ್ಲಿ ಖಾಲಿ ಡಬ್ಬಗಳನ್ನು ಮುಚ್ಚಳ ಮುಚ್ಚಿ ಹಾಗೇ ಇಟ್ಟರೆ ಕೆಟ್ಟ ವಾಸನೆ ಬರುತ್ತದೆ ಇದನ್ನು ತಪ್ಪಿಸಲು ನಾವು ಸ್ವಲ್ಪ ಅಡುಗೆ ಸೋಡಾವನ್ನು ಒಳಗಡೆ ಹಾಕಿ ಹಾಗೇ ಬಿಡಬೇಕು ಇದರಿಂದ ಕೆಟ್ಟ ವಾಸನೆ ಬರೋದಿಲ್ಲ.ಯಾವುದೇ ಕೊಳಾಯಿ ಕೊಳವೆ ಸಿಂಕ್ ಕಟ್ಟಿಕೊಂಡರೆ ಬಿಸಿನೀರಿಗೆ ಸ್ವಲ್ಪ ಅಡುಗೆ ಸೋಡಾ ಮತ್ತೆ ವಿನಿಗರ್ ಮಿಶ್ರಣ ಮಾಡಿ ನೀರನ್ನು ಹರಿಸಬೇಕು ಇದರಿಂದಕಟ್ಟಿರುವ ನಲ್ಲಿ ಕೊಳವೆ ಸರಿ ಹೋಗುತ್ತದೆ.ಪಾತ್ರೆ ತೊಳೆಯುವಾಗ ಪಾತ್ರೆ ವಾಸನೆ ಕೆಟ್ಟದಾಗಿ ಬರುತ್ತಿದ್ದರೆ ಸ್ವಲ್ಪ ಅಡುಗೆ ಸೋಡಾದ ಜೊತೆಗೆ ನಿಂಬೆ ಹಣ್ಣನ್ನು ಮಿಶ್ರಣ ಮಾಡಿ ಪಾತ್ರೆ ತೊಳೆಯಬೇಕುಇದರಿಂದ ಪಾತ್ರೆಯ ವಾಸನೆ ಹೋಗುತ್ತದೆ.

 

 

 

ಹಳೆಯ ತಾಮ್ರದ ಅಥವಾ ರಾಗಿ ಪಾತ್ರಗಳನ್ನು ತೊಳೆಯುವಾಗ ಹುಣಸೆ ಹಣ್ಣಿಗೆ ಸ್ವಲ್ಪ ಅಡುಗೆ ಸೋಡಾ ಮಿಶ್ರಣ ಮಾಡಿ ತೊಳೆಯಬೇಕು ಇದರಿಂದ ಪಾತ್ರೆ ಹೊಳೆಯುವುದರ ಜೊತೆಗೆ ಕಪ್ಪು ಕಲೆ ಮಾಯವಾಗುತ್ತೆ  .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top