ಮನೋರಂಜನೆ

ಬಿಗ್‍ಬಾಸ್ ಕನ್ನಡ ಸೀಸನ್ 6 ಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳು ಯಾರು,ಅವರ ಹಿನ್ನೆಲೆ ಏನು ಗೊತ್ತಾ

ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಷೋ ಬಿಗ್’ಬಾಸ್ ಕಾರ್ಯಕ್ರಮದ ಮತ್ತೊಂದು ಸೀಸನ್ ಮತ್ತೆ ಶುರುವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ 6ನೇ ಸೀಸನ್ ಅವತ್ತು ಸ್ಟಾರ್ಟ್ ಆಗುತ್ತಂತೆ, ಇವತ್ತು ಸ್ಟಾರ್ಟ್ ಆಗುತ್ತಂತೆ ಅಂತ ಎಷ್ಟೋ ಜನ ಕಾಯುತ್ತ ಕುಳಿತಿದ್ದರು ಕೊನೆಗೂ ಬಿಗ್ ಬಾಸ್ ಸೀಸನ್ 6 ಅಕ್ಟೋಬರ್ 21ಕ್ಕೆ ಸ್ಟಾರ್ಟ್ ಆಗಿದೆ.ಕಳೆದ ಐದು ಸೀಸನ್​ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಕಿಚ್ಚ ಸುದೀಪ್ ಮತ್ತೊಮ್ಮೆ ಬಿಗ್ ಬಾಸ್ ನಿರೂಪಣೆಯ ಹೊಣೆ ಹೊತ್ತು ಅವರ ಕೆಲಸ ನೆನ್ನೆ ಅಚ್ಚುಕಟ್ಟಾಗಿ ನೆರವೇರಿಸಿದ್ದಾರೆ.

ಬಿಗ್ ಬಾಸ್ ಮನೆಗೆ ಈ ಭಾರಿ ಅವರು ಹೋಗ್ತಾರಂತೆ, ಇವರು ಹೋಗ್ತಾರಂತೆ ಎಂಬಂತ ರೂಮರುಗಳು ಸಾಮಾಜಿಕ ಜಾಲತಾಣದಲ್ಲಿ ಸಿಕಾಪಟ್ಟೆ ಹರಿದಾಡುತ್ತಾ ಇತ್ತು ಕೊನೆಗೂ ಬಿಗ್ ಬಾಸ್ ಮನೆಗೆ ನಿಜವಾಗ್ಲೂ ಯಾರ್ ಯಾರು ಎಂಟ್ರಿ ಕೊಟ್ರು ಅನ್ನೋ ವಿಚಾರ ನೆನ್ನೆ ಕೊನೆಗೂ ಬಹಿರಂಗ ಆಯಿತು.ಕಳೆದ ವರ್ಷ​ ಸಾಮಾನ್ಯ ಜನರಿಗೆ ಅವಕಾಶ ಕಲ್ಪಿಸಲಾಗಿತ್ತು. ರಿಯಾಜ್, ದಿವಾಕರ್​ರಂತಹ ಸಾಮಾನ್ಯರು ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಟ್ಟದ್ದರು. ಅಷ್ಟೇ ಅಲ್ಲದೆ ಅತ್ಯಂತ ಹೆಚ್ಚು ಗಮನ ಸೆಳೆದಿರೋರು ಸಹ ಇದೇ ಸಾಮಾನ್ಯರೆ. ಈ ಕಾರಣದಿಂದಲೇ ಈ ಬಾರಿ ಹೆಚ್ಚು ಸಾಮಾನ್ಯ ಜನರಿಗೆ ಅವಕಾಶ ನೀಡಲಾಗಿದೆ.ಮತ್ತೊಂದು ವಿಶೇಷ ಅಂದ್ರೆ ಸೆಲೆಬ್ರಿಟಿಗಳಿಗಿಂತ ಸಾಮಾನ್ಯ ಜನರೇ ಹೆಚ್ಚು ಆಗಮಿಸಲಿದ್ದಾರೆ. 1 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಸಾಮಾನ್ಯ ಜನರ ಕೋಟಾದಿಂದ ಬಂದಿದ್ದು, ಒಂದು ಲಕ್ಷ ಜನರಲ್ಲಿ ಕಲರ್ಸ್ ಬಿಗ್‍ಬಾಸ್ ಟೀಂ 10 ಜನರನ್ನು ಆಯ್ಕೆ ಮಾಡಿಕೊಂಡಿದ್ದಾರೆ ,ಈ ಬಾರಿಯೂ ವಿವಿಧ ಕ್ಷೇತ್ರಗಳಲ್ಲಿನ ಸ್ಪರ್ಧಿಗಳು ಶೋ ಗೆ ಎಂಟ್ರಿ ಕೊಟ್ಟಿದ್ದಾರೆ.

 

 

 

ಬಿಗ್ ಬಾಸ್ ಮನೆ ಸೆಟ್ ಅನ್ನು ಎಂದಿನಂತೆ ಬಿಡದಿಯ ಇನ್ನೋವೆಟಿವ್ ಫಿಲಂ ಸಿಟಿ ಯಲ್ಲಿ ಹಾಕಲಾಗಿದೆ,ಬಿಗ್ ಬಾಸ್ ಕಾರ್ಯಕ್ರಮ ಶುರು ಮಾಡುತಿದಂತೆ ಕಿಚ್ಚ ಸುದೀಪ್ ಹೊಸ ಬಿಗ್ ಬಾಸ್ ಮನೆಯ ಪರಿಚಯ ಮಾಡಿಕೊಟ್ರು ,ಹಳೆಯ ಬಿಗ್ ಬಾಸ್ ಮನೆ ಗಿಂತ ಈ ಸಲದ ಬಿಗ್ ಬಾಸ್ ಮನೆ ದೊಡ್ಡದಾಗಿದ್ದು ತುಂಬಾ ಆಕರ್ಷಕವಾಗಿದೆ.100 ದಿನ ಬಿಗ್ ಬಾಸ್ ಮನೇಲಿ ಇರ್ತೀನಿ ಅಂತ ಹೇಳಿ ಹೋದ ಬಿಗ್ ಬಾಸ್ ಸ್ಪರ್ಧಿಗಳ ವಿವರ ಇದು.ಒಟ್ಟು 15 ಜನ ಬಿಗ್ ಬಾಸ್ ಮನೆ ಒಳಗೆ ಎಂಟ್ರಿ ಕೊಟ್ಟಿದ್ದಾರೆ .

ಮೊದಲಿಗೆ ಸೋನು ಪಾಟೀಲ್ :ಹುಟ್ಟಿದು ಬಾಗಲಕೋಟೆಯಲ್ಲಿ ಮೂಲತಃ ಅಲ್ಲಿನವರೇ , ಒಬ್ಬ ರೈತನ ಮಗಳು ,ವಿದ್ಯಾಭ್ಯಾಸ ಜರ್ನಲಿಸಂ ನಲ್ಲಿ ಪದವಿ ಪಡೆದಿದ್ದಾರೆ,ಹೀರೋಯಿನ್ ಆಗುವ ಕನಸು ಅವರದು.ಸಾಮಾನ್ಯ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಸೋನು ಪಾಟೀಲ್ ತಮ್ಮ ಮಾತಿನ ಮೂಲಕವೇ ಎಲ್ಲರ ಗಮನ ಸೆಳೆಯುವ ಪ್ರತಿಭೆಯುಳ್ಳ ಹುಡುಗಿ

ಆಂಡ್ರೂ:ಬಿಗ್ ಬಾಸ್ ಮನೆಗೆ ಎಂಟ್ರಿ ನೀಡುವಾಗಲೇ ತಮ್ಮನ್ನು ತಾವು ತಿಂಡಿಪೋತ ಎಂದು ಪರಿಚಯಿಸಿಕೊಂಡ ಆಸಾಮಿ, ಆಂಡ್ರೂ ತಮ್ಮ ನೋಡಲು ದಪ್ಪವಾಗಿರುವ ಆಕಾರದಿಂದ ಈ ಬಾರಿ ಗಮನ ಸೆಳೆದಿದ್ದು ,ಈ ಸಲದ ಬಿಗ್ ಬಾಸ್ ನ ವಿಶೇಷ ಸ್ಪರ್ಧಿ.
ಜಯಶ್ರೀ : ಕಿರುತೆರೆಯಲ್ಲಿ ಮಾಯಾಮೃಗ ಧಾರಾವಾಹಿ ಮೂಲಕ ಖ್ಯಾತಿ ಪಡೆದು ಜನರಿಗೆ ತುಂಬಾ ಹತ್ತಿರವಾಗಿ ,ನಂತರ ಅನೇಕ ಧಾರಾವಾಹಿ ಹಾಗೂ ನಿರೂಪಣೆ ಮಾಡಿತ್ತ ಒಂದು ಕಾಲದ ಎಲ್ಲರ ಮೆಚ್ಚಿನ ಮನೆ ಮಗಳಾಗಿದ್ದ ನಟಿ ಜಯಶ್ರೀ ಅವರು ಬಿಗ್‍ಬಾಸ್‍ಗಾಗಿ ಅಮೆರಿಕದಿಂದ ಮತ್ತೆ ಆಗಮಿಸಿದ್ದಾರೆ. ಇವರಿಗೆ ಒಬ್ಬಳು ಮಗಳಿದ್ದು, ಅಮ್ಮ ಸ್ವಲ್ಪ ಭಾವನಾತ್ಮಕ ಜೀವಿ ಎನ್ನುತ್ತಾರೆ.

 

ರಾಜೇಶ್: ರಾಜೇಶ್ ಮೂಲತಃ ರಾಜಸ್ಥಾನ ಮೂಲದವರಾದರು ನಾನು ಕನ್ನಡಿಗ ಎಂದು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟವರು . ಬೆಳೆದದ್ದು ಬೆಂಗಳೂರಿನಲ್ಲಿ, ಕನ್ನಡ ಚೆನ್ನಾಗಿ ಮಾತನಾಡುತ್ತಾರೆ. ಇಲ್ಲಿ ನಾನು ಏನು ಎಂಬುದನ್ನು ಸಾಬೀತು ಪಡಿಸುತ್ತೇನೆ ಎಂದರು.
ಮುರಳಿ: ಒಗ್ಗರಣೆ ಡಬ್ಬಿ ಎಂಬ ಅಡುಗೆ ಕಾರ್ಯಕ್ರಮದಿಂದಲೇ ಖ್ಯಾತಿ ಪಡೆದು ನೋಡ್ಕೊಳ್ಳಿ ಮಾಡ್ಕೊಳ್ಳಿ ತಿನ್ಕೋಲ್ಲಿ ಏನೋ ಟ್ರೆಂಡ್ ಕ್ರಿಯೇಟ್ ಮಾಡಿದ ಮುರಳಿ ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು, ತಮ್ಮ ಅಡುಗೆ ರುಚಿಯಾದ ಅಡುಗೆಯಿಂದ ಬಿಗ್‍ಬಾಸ್ ಮನಗೆಲ್ಲುತ್ತರಾ ನೋಡಬೇಕಿದೆ.

ಅಕ್ಷತಾ ಪಾಂಡವಪುರ:ಅಕ್ಷತಾ ಮೂಲ ರಂಗಭೂಮಿ ಕಲಾವಿದೆ, ನಟಿ ಅಕ್ಷತಾ ಪಾಂಡವಪುರ ಅವರು ಬಿಗ್ ಬಾಸ್ ನಾಟಕ ಅಲ್ಲ, ಜೀವನ ಎಂದು ಹೇಳುವ ಮೂಲಕ ಸ್ಪರ್ಧೆಗೆ ಸಿದ್ಧರಾಗಿದ್ದಾರೆ.

ರಕ್ಷಿತಾ ರೈ: ಮೂಲತ ಮಂಗಳೂರು ರಕ್ಷಿತಾ,ಕಸುಬು ಇವರು ಕ್ರಿಕೆಟ್ ಕೋಚ್ ಕೆಲಸ ಮಾಡುತ್ತಿದ್ದಾರೆ, ರಕ್ಷಿತಾ ರೈ ಪಕ್ಕ ಧೋನಿ ಅಭಿಮಾನಿ. ಎಂ ಎಸ್ ಧೋನಿ ಕುರಿತ ಸಿನಿಮಾವನ್ನು 250 ಸಲ ನೋಡಿದ್ದಾರಂತೆ. ಸದ್ಯ ಕರ್ನಾಟಕ ಕ್ರಿಕೆಟ್ ಸಂಸ್ಥೆಯಲ್ಲಿ ಕ್ರಿಕೆಟ್ ಆಡುತ್ತಿದ್ದು, ನಾನು ಹೊರಗೆ ಹೇಗಿದ್ದೇ ಆಗಿಯೇ ಅಲ್ಲಿಯೂ ಇರುತ್ತೇನೆ ಎಂದು ಪ್ರವೇಶದ ಬಿಗ್‍ಬಾಸ್‍ಗೆ ಪ್ರವೇಶ ಪಡೆದಿದ್ದಾರೆ.

 

 

 

ರ‍್ಯಾಪಿಡ್ ರಶ್ಮಿ : ರೇಡಿಯೋ ಜಾಕಿ ರಶ್ಮಿ ,ಮೂಲತ ಬೆಂಗಳೂರಿನವರು,ತಮ್ಮ ಮಾತಿನಿಂದ ಈ ವರಿಗೆ ಅನೇಕ ಕಾಂಟ್ರವರ್ಸಿ ಮಾಡಿಕೊಂಡ ಹುಡುಗಿ, ತಮ್ಮ ಮಾತಿನ ಮೂಲಕವೇ ಹಲವರನ್ನು ತಮ್ಮತ್ತ ಸೆಳೆಯುವ ಮಾತಿನ ಪಟಾಕಿ ಖ್ಯಾತಿಯ ರ್ಯಾಪಿಡ್ ರಶ್ಮಿ ತಮ್ಮ ಇಮೇಜನ್ನು ಕಾಪಾಡಿಕೊಂಡು ರಂಜಿಸಿಲು ಬಂದಿದ್ದಾಗಿ ತಿಳಿಸಿದ್ದಾರೆ. ಇಷ್ಟು ದಿನ ಮಾತಲ್ಲೇ ಕಿಕ್ ನೀಡಿದ್ದ ರಶ್ಮಿ ಎಂದಿನಂತೆ ಇರುತ್ತೇನೆ ಎಂದರು.

ಆಡಮ್ :ಆಡಮ್ ವಿಭಿನ್ನ ಶೈಲಿಯ ನೃತ್ಯ ಮಾಡುವ ಆಡಮ್ ಪಾಷಾ ಬಿಗ್ ಬಾಸ್ ಮನೆಗೆ ಪ್ರವೇಶ ಪಡೆದಿದ್ದಾರೆ. ಡ್ರ್ಯಾಗ್ ಕ್ವೀನ್ ಎಂದೇ ಖ್ಯಾತಿ ಪಡೆದಿರುವ ಆಡಮ್ ಪಾಷಾ ಬೆಂಗಳೂರಿನ ಫಸ್ಟ್ ಡ್ರ್ಯಾಗ್ ಕ್ವೀನ್ ಹೆಗ್ಗಳಿಕೆ ಹೊಂದಿದ್ದಾರೆ. ನಮ್ಮಂತ ಜನರು ಇರುತ್ತಾರೆ. ನಾವು ಎಲ್ಲಾ ಕೆಲಸ ಮಾಡಲು ಬರುತ್ತೇ ಎಂದು ಜನರಿಗೆ ತೋರಿಸುವುದೇ ನಮ್ಮ ಉದ್ದೇ ಎಂದರು.

ಕವಿತಾ ಗೌಡ:ಲಕ್ಷ್ಮಿ ಬಾರಮ್ಮ ಧಾರವಾಹಿಯ ಮೂಲಕ ಟಿವಿ ಯಲ್ಲಿ ಕಾಣಿಸಿಕೊಂಡ ನಟಿ ,ಕವಿತಾ ಗಿಂತ ಚಿನ್ನು ಅಂತ ಫೇಮಸ್ ಈ ಹುಡುಗಿ, ಬೆಳ್ಳಿ ಪರದೆ ಕಿರುತೆರೆಯಲ್ಲಿ ಮಿಂಚಿರುವ ಕವಿತಾ ಗೌಡ, ತಮಿಳು, ತೆಲುಗುನಲ್ಲೂ ಮಿಂಚಿದ್ದಾರೆ. ಬಿಗ್‍ಬಾಸ್ ಮೂಲಕ ಮತ್ತೊಮ್ಮೆ ಜನರಿಗೆ ಮನರಂಜನೆ ನೀಡಲು ಬರುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಎವಿ ರವಿ: ಚಿನ್ನದ ಊರು ಕೋಲಾರದಲ್ಲಿ ಹುಟ್ಟಿ ಬಾಡಿಬಿಲ್ಡಿಂಗ್‍ನಲ್ಲಿ ವಿಶ್ವದ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅಷ್ಟೇ ಅಲ್ಲ. ಮಿಸ್ಟರ್ ಇಂಡಿಯಾ, ವಿಶ್ವ ಬಾಡಿ ಬಿಲ್ಡಿಂಗ್‍ನಲ್ಲಿ ಭಾಗವಹಿಸಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕರ್ನಾಟಕ ಸರ್ಕಾರ ನೀಡುವ ಏಕಲವ್ಯ ಪ್ರಶಸ್ತಿ ಪಡೆದಿದ್ದು, ಅದಾಯ ತೆರಿಗೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಶಶಿ ಕುಮಾರ್: ಆಧುನಿಕ ಶೈಲಿಯಲ್ಲಿ ಕೃಷಿ ಮಾಡಲು ಮುಂದಾಗಿರುವ ಚಿಂತಾಮಣಿಯ ರೈತ ಯುವಕ ಶಶಿಕುಮಾರ್. ಬಿಗ್ ಬಾಸ್ ಮನೆಯ ಸಾಮಾನ್ಯ ಸ್ಪರ್ಧಿ. ತಾನು ಕೇವಲ ರೈತ ಮಾತ್ರವಲ್ಲ ಜನಪದ ಕಲೆಗಳನ್ನು ಕರಗತ ಮಾಡಿಕೊಂಡಿವೆ. ಕೃಷಿಯಲ್ಲಿ ಎಂಎಸ್ಸಿ ಪದವಿ ಪಡೆದಿದ್ದು, ಕೃಷಿಯಲ್ಲೂ ಸಾಧನೆ ಮಾಡಬಹುದು ಎಂದು ಸಾಭೀತು ಪಡಿಸುವುದು ನನ್ನ ಉದ್ದೇಶ ಎಂದು ತಿಳಿಸಿದ್ದಾರೆ.

 

ರೀಮಾ :ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ರೀಮಾ ತಾವು ಫೋನ್ ಬಿಟ್ಟು ಇರೋದಿಲ್ಲ. ಹೇಗೆ ಅಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಇರುತ್ತೇನೆ ಗೊತ್ತಿಲ್ಲ. ಆದರೆ ನಮ್ಮ ವೃತ್ತಿಯಲ್ಲಿರುವ ಮಂದಿಯಲ್ಲೂ ಸಾಕಷ್ಟು ಟ್ಯಾಲೆಂಟ್ ಇರುತ್ತೆ ಎಂಬುವುದನ್ನು ತಿಳಿಸಲು ಬಂದಿದ್ದೇನೆ. ಮಂಗಳೂರು ಬೆಡಗಿ ಎಂಬುವುದೇ ನ್ನ ಹ್ಯಾಷ್ ಟ್ಯಾಗ್ ಎಂದು ಎಂಟ್ರಿ ಕೊಟ್ಟರು.

ನವೀನ್: ಲೂಸಿಯಾ ಸಿನಿಮಾ ಗಾಯಕನಾಗಿ ಹೆಚ್ಚು ಖ್ಯಾತಿ ಪಡೆದಿರುವ ನವೀನ್ ಪ್ಯಾಥೋ ಸಿಂಗರ್ ಎಂದೇ ಹೆಸರು ಪಡೆದಿದ್ಧಾರೆ. ಸದ್ಯ ಕನಕ ಸಿನಿಮಾ ಮೂಲಕ ಸಂಗೀತ ನಿರ್ದೇಶನಕ್ಕೂ ಇಳಿದಿದ್ದು, ಬಿಗ್ ಬಾಸ್ ನನ್ನ ಜೀವನಕ್ಕೆ ಪ್ರಮುಖ ತಿರುವು ನೀಡುತ್ತೆ. ಸ್ಪರ್ಧೆಯನ್ನು ತುಂಬಾ ಸೀರಿಯಸ್ ಆಗಿ ತೆಗೆದುಕೊಂಡಿದ್ದೇನೆ. ಎಣ್ಣೆ ನಿಮ್ದು ಊಟ ನಮ್ದು ಎಂದು ಹೇಳುವ ಮೂಲಕ ನವೀನ್ ಬಿಗ್ ಬಾಸ್‍ಗೆ ಪ್ರವೇಶ ಪಡೆದರು.

ಸ್ನೇಹಾ ಆಚಾರ್ಯ:ಕೊರಿಯೋಗ್ರಾಫರ್ ಆಗಿರುವ ಸ್ನೇಹಾ ಅಚಾರ್ಯ ಅವರು ಮುಂದಿನ ತಿಂಗಳು ಮದುವೆ ಇದ್ದರೂ, ಬಿಗ್ ಬಾಸ್ ಮನೆಗೆ ಪ್ರವೇಶ ಪಡೆದಿದ್ದಾರೆ. ಮದುವೆಗೂ ಮುನ್ನ ಏನಾದರೂ ಸಾಧಿಸಬೇಕು ಎಂದಿದ್ದೇನೆ. ಮುಂದೇ ಏನಾಗುತ್ತೆ ನೋಡಬೇಕು ಎನ್ನುತ್ತಲೇ ಪ್ರವೇಶ ಮಾಡಿದರು. ಆದರೆ 25 ದಿನಗಳಿಗಿಂತ ಹೆಚ್ಚು ದಿನ ಇರಲ್ಲ ಎಂಬ ಅಭಿಪ್ರಾಯ ಹಳೆ ಸ್ಪರ್ಧಿಗಳಿಂದ ಕೇಳಿ ಬಂತು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top