ಮನೋರಂಜನೆ

ಹೊಸ ಟ್ವಿಸ್ಟ್,ನಟ ಚೇತನ್ ಸೇಡಿಗಾಗಿ ಶೃತಿ ಹರಿಹರನ್ ಜೊತೆ ಸರ್ಜಾ ವಿರುದ್ಧ ನಿಂತ್ರಾ

ಬಾಲಿವುಡ್‌ನಲ್ಲಿ ಹುಟ್ಟಿಕೊಂಡ ಮೀ ಟೂ ಅಭಿಯಾನ ಸ್ಯಾಂಡಲ್‌ವುಡ್‌ನತ್ತಲೂ ಬಂದಿದೆ. ನಟಿಯರನೇಕರು ತಮಗಾದ ಲೈಂಗಿಕ ಕಿರುಕುಳಗಳ ಬಗ್ಗೆ ಹೇಳಿಕೊಂಡಿದ್ದಾರೆ. ಮತ್ತೆ ಕೆಲವರು ಈ ಅಭಿಯಾನಕ್ಕೆ ಬೆಂಬಲ ಸೂಚಿಸಿ ನೊಂದವರ ಬೆನ್ನಿಗೆ ನಿಂತಿದ್ದಾರೆ. ಇದೀಗ ನಟ ಅರ್ಜುನ್‌ ಸರ್ಜಾ ವಿರುದ್ಧ ಯುವ ನಟಿ ಶೃತಿ ಹರಿಹರನ್‌ ಕಿರುಕುಳ ನೀಡಿದ್ದ ಆಪಾದನೆ ಮಾಡಿದ್ದಾರೆ.

ನಟಿ ಶ್ರುತಿ ಹರಿಹರನ್​ ಸಹ ಖ್ಯಾತ ನಟ ಅರ್ಜುನ್ ಸರ್ಜಾ ಅವರಿದ ತಮಗಾದ ಅನುಭವದ ಕುರಿತು ಹೇಳಿಕೊಂಡಿದ್ದಾರೆ. ತಮಿಳಿನ ವಿಸ್ಮಯ ಸಿನಿಮಾದಲ್ಲಿ ಶೃತಿಹರಿಹರನ್​​ ಹಾಗೂ ಅರ್ಜುನ್​​ ಸರ್ಜಾ ಒಂದೇ ಸಿನಿಮಾದಲ್ಲಿ ನಟಿಸಿದ್ರು. ಈ ಸಿನಿಮಾ ಶೂಟಿಂಗ್​​ ವೇಳೆಯಲ್ಲಿ ಅರ್ಜುನ್​​ ಸರ್ಜಾ ನನ್ನೊಂದಿಗೆ ಅಸಹಜವಾಗಿ ವರ್ತಿಸುತ್ತಿದ್ರು” ಎಂದು ಹೇಳಿಕೆ ನೀಡಿದ್ದಾರೆ.ಈ ವಿಷಯವೇ ಈಗ ಫುಲ್ ಸುದ್ದಿ ಮಾಡಿದ್ದೂ ಕೆಲ ನಟ ನಟಿಯರು ಶ್ರುತಿಯವರಿಗೆ ಸಪೋರ್ಟ್ ಮಾಡಿದ್ರೆ ಇನ್ನು ಕೆಲವರು ಅರ್ಜುನ್ ಸರ್ಜಾ ಪರ ನಿಂತಿದ್ದಾರೆ.
ಈ ಬೆನ್ನಲೇ ಈಗ ಹೊಸ ವಿಷಯ ಯೊಂದು ಹುಟ್ಟಿಕೊಂಡಿದೆ,ಆ ವಿಷ್ಯ ಏನು ಅಂದ್ರೆ ನಟ ಚೇತನ್ ಶ್ರುತಿ ಪರ ನಿಂತು ಹೋರಾಟ ಮಾಡುತ್ತಿರುವುದು ಅವರ ಮೇಲಿನ ಸೇಡಿಗಾಗಿ ಎಂಬ ಮಾತುಗಳು ಹರಿದಾಡುತ್ತಾ ಇದೆ, 10 ಲಕ್ಷ ರೂ. ಹಣದ ವಿಚಾರವಾಗಿ ನಟ ಚೇತನ್ ಅರ್ಜುನ್ ಶೃತಿ ಹರಿಹರನ್ ಪರವಾಗಿ ಮಾತನಾಡುತ್ತಿದ್ದಾರೆ ಎಂದು ಅರ್ಜುನ್ ಸರ್ಜಾ ಸ್ನೇಹಿತ ಪ್ರಶಾಂತ್ ಸಂಬರ್ಗಿ ಅವರು ಆರೋಪ ಮಾಡಿದ್ದಾರೆ.

 

 

 

ಈ ವಿಚಾರದ ವೇಳೆ ಖಾಸಗಿ ವಾಹಿನಿಯ ಜೊತೆ ಮಾತನಾಡಿದ ಅರ್ಜುನ್ ಸರ್ಜಾ ಫ್ರೆಂಡ್ ಪ್ರಶಾಂತ್ ಸಂಬರ್ಗಿ ಹೇಳಿದು ಇಷ್ಟು ಚೇತನ್ ನಟನೂ ಅಲ್ಲ, ರಾಜಕರಣೀಯೂ ಅಲ್ಲ ಮತ್ತು ಸಾಮಾಜಿಕ ಕಾರ್ಯಕರ್ತನೂ ಅಲ್ಲ,ಕಳೆದ ವರ್ಷ ಬಂದ ಅರ್ಜುನ್ ಸರ್ಜಾ ರವರ ಮಗಳ ಚಿತ್ರ ಪ್ರೇಮ ಬರಹ ಚಿತ್ರಕ್ಕೆ ನಟ ಚೇತನ್ ಆಯ್ಕೆಯಾಗಿದ್ದರಂತೆ ಆ ಸಮಯದಲ್ಲಿ ದುಡ್ಡಿನ ಅವಶ್ಯಕತೆ ಇದೆ ಎಂದು ಚೇತನ್ ಅರ್ಜುನ್ ಸರ್ಜಾ ಬಳಿ ಮುಂಗಡವಾಗಿ 10 ಲಕ್ಷ ರೂ. ಹಣವನ್ನು ಕೂಡ ಪಡೆದುಕೊಂಡಿದ್ದರಂತೆ ,ಆದರೆ ವರ್ಕ್ ಶಾಪ್ ವೇಳೆ ಚೇತನ್ ನಟನೆ ಇಷ್ಟವಾಗದೇ ಇದ್ದಾಗ ಅರ್ಜುನ್ ಸರ್ಜಾ ಬೇರೆ ನಟನನ್ನು ಹಾಕಿಕೊಂಡು ಸಿನಿಮಾ ಮಾಡಿದ್ದರು.ನಂತರ ಮುಂಗಡ ಹಣವನ್ನು ನೀಡುವಂತೆ ಅರ್ಜುನ್ ಸರ್ಜಾ ಕೇಳಿದ್ದರೂ ಚೇತನ್ ಹಣ ಮರು ಪಾವತಿ ಮಾಡಿರಲಿಲ್ಲ. ಹೀಗಾಗಿ 10 ಲಕ್ಷ ರೂ. ವಾಪಸ್ ಕೊಡುವಂತೆ ಲೀಗಲ್ ನೋಟಿಸ್ ಕೂಡ ರವಾನೆ ಮಾಡಲಾಗಿತ್ತು. ಈ ನೋಟಿಸ್‍ಗೆ ಪ್ರತೀಕಾರವಾಗಿ ಈಗ ಸೇಡು ತೀರಿಸಿಕೊಳ್ಳಲು 10 ಲಕ್ಷ ರೂ. ಹಣಕ್ಕಾಗಿ ನಟ ಅರ್ಜುನ್ ಸರ್ಜಾ ವಿರುದ್ಧ ಚೇತನ್ ನಿಂತಿದ್ದಾರೆ ಎಂದು ಆರೋಪ ಮಾಡಿದ್ದಾರೆ..ಮೂರು ತಿಂಗಳಿಂದ ಹಣ ವಾಪಸ್ ಕೊಡುವಂತೆ ನೋಟಿಸ್ ಕಳುಹಿಸಿದ್ದೇವು. ಈ ವೇಳೆ ನನ್ನನ್ನು ಬಿಟ್ಟು ಸಿನಿಮಾ ಮಾಡಿದ್ದೀಯಾ, ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಮೆಸೇಜ್ ಮಾಡಿದ್ದರು. ಇದೇ ಒಂದು ಕಾರಣ ಇಟ್ಟುಕೊಂಡು ಪ್ರಕಾಶ್ ರೈ ಸೇರಿದಂತೆ ಇನ್ನಿತರ ಜೊತೆ ಸೇರಿ ಅರ್ಜುನ್ ಸರ್ಜಾ ವಿರುದ್ಧ ಮಾತನಾಡಬೇಕು ಎಂದು ಅವರ ಗುಂಪಿಗೆ ಸೇರಿದ್ದಾರೆ ಎಂದು ಪ್ರಶಾಂತ್ ಸಂಬರ್ಗಿ ಅವರು ಆರೋಪ ಮಾಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top