fbpx
ಮನೋರಂಜನೆ

ದೀಪಿಕಾ ಮತ್ತು ರಣ್‍ವೀರ್ ಮದುವೆ ನವೆಂಬರ್ 15 ರಂದೇ ಫಿಕ್ಸ್ ಆಗಿದ್ದು ಯಾಕೆ ಗೊತ್ತಾ?

ಬಾಲಿವುಡ್ ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆ ಮದುವೆ ಆಗ್ತಾರಂತೆ ಅನ್ನೋ ಸುದ್ದಿ ಹುಟ್ಟಿಕೊಂಡು ವರ್ಷಗಳೇ ಕಳೆದಿವೆ..ದೀಪಿಕಾ ಪಡುಕೋಣೆ ಹಾಗೂ ನಟ ರಣ್ವೀರ್ ಸಿಂಗ್ ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ. ಇಬ್ಬರು ಇದೇ ವರ್ಷ ಮದುವೆ ಆಗ್ತಾರೆ ಎಂಬ ಗಾಸಿಪ್ ಸದಾ ಚಾಲ್ತಿಯಲ್ಲಿರುತ್ತವೆ. ಇವರಿಬ್ಬರೂ ಕೂಡಾ ತಮ್ಮ ಬಗ್ಗೆ ಹರಿದಾಡೋ ಎಲ್ಲ ಸುದ್ದಿ ರೂಮರುಗಳನ್ನೂ ಸುಳ್ಳು ಅನ್ನೋ ಕ್ಲಾರಿಫಿಕೇಷನ್ ಕೊಡುತ್ತಾ ಒಟ್ಟೊಟ್ಟಿಗೇ ಓಡಾಡಿಕೊಂಡಿದ್ದಾರೆ. ಆದರೆ, ಇದೀಗ ತಮ್ಮ ಮದುವೆ ವಿಚಾರವನ್ನ ದೀಪಿಕಾ ಪಡುಕೋಣೆ ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ.

ಬಾಲಿವುಡ್ ಹಾಟ್ ಆ್ಯಂಡ್ ರೊಮ್ಯಾಂಟಿಕ್ ಜೋಡಿ ರಣ್‍ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಮದುವೆ ಇದೇ ನವೆಂಬರ್ 14 ಹಾಗೂ 15ಕ್ಕೆ ನಡೆಯಲಿದೆ. ಸದ್ಯ ಈ ಬಗ್ಗೆ ದೀಪಿಕಾ ಪಡುಕೋಣೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

 

ನವೆಂಬರ್ 15 ರಂದೇ ಫಿಕ್ಸ್ ಒದ್ದು ಯಾಕೆ?
ದೀಪಿಕಾ ಮತ್ತು ರಣ್‍ವೀರ್ ತೆರೆಯ ಮೇಲೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಗೋಲಿಯೋಂ ಕೀ ರಾಸಲೀಲಾ: ರಾಮಲೀಲಾ’ ಚಿತ್ರದಲ್ಲಿ ಒಂದಾಗಿದ್ದರು. ಈ ಸಿನಿಮಾದ ಚಿತ್ರೀಕರಣ ವೇಳೆಯೇ ಇಬ್ಬರ ಮಧ್ಯೆ ಲವ್ ಆರಂಭವಾಗಿತ್ತು. ಸಿನಿಮಾ 2013 ನವೆಂಬರ್ 15ರಂದು ಬಿಡುಗಡೆ ಆಗಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರು ನವೆಂಬರ್ 15ರಂದು ಮದುವೆ ದಿನಾಂಕ ಫಿಕ್ಸ್ ಮಾಡಿಕೊಂಡಿದ್ದಾರೆಂದು ಬಾಲಿವುಡ್ ಪತ್ರಿಕೆಯೊಂದು ವರದಿ ಮಾಡಿದೆ.

 

 

ಇಬ್ಬರು ನಟರು ತಮ್ಮ ಅಧಿಕೃತ ಫೇಸ್’ಬುಕ್, ಟ್ವಿಟರ್ ಹಾಗೂ ಇನ್ ಸ್ಟಾಗ್ರಾಮ್ ಖಾತೆಗಳಲ್ಲಿ ವಿವಾಹ ಆಹ್ವಾನ ಪತ್ರಿಕೆಯನ್ನು ಪೋಸ್ಟ್ ಮಾಡಿಕೊಂಡಿದ್ದು ವಿವಾಹವು ನ.14 ಹಾಗೂ ನ.15 ರಂದು ನರವೇರಲಿದೆ. ಎಲ್ಲಿ ನಡೆಯಲಿದೆ ಎಂಬ ವಿಷಯವನ್ನು ಬಹಿರಂಗ ಪಡಿಸಿಲ್ಲ. ನಮ್ಮ ಪ್ರೀತಿಗೆ ಬೆಂಬಲ ನೀಡಿದ್ದಕ್ಕೆ ಪ್ರತಿಯೊಬ್ಬರಿಗೂ ಚಿರಋಣಿ ಎಂದು ತಿಳಿಸಿರುವ ಇಬ್ಬರು ವಿವಾಹಕ್ಕೆ ನಿಮ್ಮೆಲ್ಲರ ಹಾರೈಕೆ ಇರಲಿ ಎಂದಿದ್ದಾರೆ.

 

 

ಈ ಹಿಂದೆ ಹಲವಾರು ಬಾರಿ ಮದುವೆಯ ದಿನಾಂಕದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗಿತ್ತು,, ಕಳೆದ ಕೆಲವು ವಾರಗಳಿಂದ ದೀಪಿಕಾ ಮತ್ತು ರಣವೀರ್ ವಿವಾಹ ಮುಂದಿನ ತಿಂಗಳು ನಡೆಯಲಿದೆ ಎಂಬ ಚರ್ಚೆ ನಡೆಯುತ್ತಿರುವಾಗಲೇ ಕುತೂಹಲಕ್ಕೆ ತೆರೆ ಎಳೆದಿರುವ ತಾರಾಜೋಡಿ ವಿವಾಹ ಸಮಾರಂಭದ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top