fbpx
ದೇವರು

ಜೀವನದಲ್ಲಿ ಯಶಸ್ಸು ಮತ್ತು ಸಂತೋಷ ಗಳಿಸೊದಕ್ಕೆ ಈ ಒಂದು ಸಣ್ಣ ಕೆಲಸವನ್ನ ಪ್ರತಿದಿನ ಮಾಡಿ.

ಬ್ರಹ್ಮ ವೈವ್ರತ ಪುರಾಣವು ಭಗವಂತನಾದ ಶ್ರೀ ವಿಷ್ಣುವನ್ನು ಪೂಜಿಸುವುದರ  ಹಿಂದಿರುವ ಮುಖ್ಯತೆ ಮತ್ತು ಮಹತ್ವವನ್ನು ಹೀಗೆ ಹೇಳುತ್ತದೆ.ಶ್ರೀ ವಿಷ್ಣುವನ್ನು  ಈ ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿ ದೇವರೆಂದು ಪರಿಗಣಿಸಲಾಗಿದೆ.ಶ್ರೀ ವಿಷ್ಣು ದೇವರ ಮುಂದೆ ವಿಶೇಷವಾಗಿ ಗುರುವಾರದ ದಿನ ಒಂದು ದೀಪವನ್ನು  ಬೆಳಗಿಸಬೇಕು.ಹಾಗೆ ಬೇರೆ ಎಲ್ಲ ದೇವರ ಮುಂದೆಯೂ ಹಚ್ಚಬಹುದು.ನಿಮ್ಮ ಮನೆಯಲ್ಲಿರುವ ಫೋಟೋದ ಮುಂದೆ  ಆಗಲಿ ಅಥವಾ ವಿಷ್ಣುವಿನ ಮಂದಿರದಲ್ಲಿ ಆಗಲಿ ಒಂದು ದೀಪವನ್ನು ಬೆಳಗಿಸಿದರೆ ಬಹಳ ಒಳ್ಳೆಯದು ಅದರಿಂದ ನೀವು ನಿಮ್ಮ ಜೀವನದಲ್ಲಿ ಯಶಸ್ಸು ಮತ್ತು ಸಂತೋಷವನ್ನು ಗಳಿಸಬಹುದು.

ನಿಜವಾಗಿ ಹೇಳಬೇಕೆಂದರೆ  ಬ್ರಹ್ಮ ವೈವ್ರತ ಪುರಾಣದ ಪ್ರಕಾರ ಯಾರು ಪ್ರತಿದಿನವೂ ಕೂಡ ದೇವರನ್ನು ಭಕ್ತಿ ಶ್ರದ್ಧೆಯಿಂದ ಪೂಜಿಸತ್ತಾರೋ ಅವರು ಸುಖ ಸಂತೋಷವನ್ನು ಜೀವನದಲ್ಲಿ ಪಡೆಯುತ್ತಾರೆ.ಪುರಾಣಗಳು ಹೇಳುವ ಪ್ರಕಾರ  ಭಗವಂತನಾದ ಶ್ರೀ ವಿಷ್ಣುವಿಗೆ ಪ್ರತಿದಿನ ಒಂದು ದೀಪ ಬೆಳಗಿಸುವುದರ ಮೂಲಕ  ಪೂಜಿಸಿದರೆ  ಈ ನಾಲ್ಕು  ವಿಷಯಗಳಲ್ಲಿ ಅವರ ಜೀವನದಲ್ಲಿ   ಜಯಗಳಿಸಬಹುದು.

 

 

 

ನಿಮ್ಮ ಎಲ್ಲಾ ಪಾಪ ಕರ್ಮಗಳಿಂದ ಮುಕ್ತಿ ಹೊಂದಲು ಮತ್ತು ನಿಮ್ಮ ಜೀವನದಲ್ಲಿ ಸುಖ,ಸಂತೋಷ ಪಡೆಯಲು ಶ್ರೀ ಹರಿ,ಶ್ರೀ ವಿಷ್ಣು, ಲಕ್ಷ್ಮೀ ಪತಿಯ   ಮೂರ್ತಿ ಅಥವಾ ಫೋಟೋದ ಮುಂದೆ ಪ್ರತಿದಿನ ಒಂದು ದೀಪವನ್ನು ಬೆಳಗಿಸಿದರೆ ಸಾಕು ವಿಷ್ಣು ದೇವನು  ಪ್ರಸನ್ನನಾಗುವನು.ನಿಮ್ಮ ಕೆಲಸ ಕಾರ್ಯಗಳು ಯಾವುದೇ ಅಡ್ಡಿ ಆತಂಕ ಇಲ್ಲದೆ ಸರಾಗವಾಗಿ ನೆರವೇರಲು,ಅರ್ಧಕ್ಕೆ ನಿಂತುಹೋಗಿರುವ ಕಾರ್ಯಗಳನ್ನು  ಪೂರ್ಣಗೊಳಿಸಲು ಮತ್ತು ಅವುಗಳಲ್ಲಿ ಯಶಸ್ಸನ್ನು  ಗಳಿಸಲು ಶ್ರೀ ವಿಷ್ಣು ದೇವರ ಮುಂದೆ ಒಂದು ದೀಪವನ್ನು ಹಚ್ಚಿ ಬೆಳಗಿಸಿ.

 

 

 

ಶ್ರೀ ವಿಷ್ಣುವಿನ ಮುಂದೆ ಈ ರೀತಿ ದೀಪ ಹಚ್ಚುವುದು ಶುದ್ಧತೆಯ ಪ್ರತೀಕವಾಗಿದ್ದು,ನಿಮ್ಮನ್ನು ನೀವು ಕೋಪವನ್ನು ಕಡಿಮೆ ಮಾಡಿಕೊಂಡು , ಶಾಂತವಾಗಿರಲು ಸಹ ಸಹಾಯ ಮಾಡುವುದು . ಅಷ್ಟೇ ಅಲ್ಲದೆ ನಿಮ್ಮಲ್ಲಿರುವ ನಕಾರಾತ್ಮಕ ಭಾವನೆಗಳನ್ನು ಸಹ ತಡೆಯುತ್ತದೆ .ಯಾರು ಭಗವಂತನಾದ ಶ್ರೀ ಹರಿಯ ಮುಂದೆ ನಿಷ್ಕಲ್ಮಶವಾದ ಮನಸ್ಸಿನಿಂದ ಮತ್ತು ಪರಿಶುದ್ಧವಾದ ಹೃದಯದಿಂದ ಪೂಜಿಸಿ ದೀಪ ಬೆಳಗಿಸುತ್ತಾರೋ ಅಂತವರಿಗೆ ಸಮಾಜದಲ್ಲಿ ಘನತೆ,ಗೌರವವು ಹೆಚ್ಚುವುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top