ಮನೋರಂಜನೆ

“ಶ್ರುತಿಯ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡಬಾರದು” ಶ್ರುತಿ ಹರಿಹರನ್ ಬೆಂಬಲಕ್ಕೆ ನಿಂತ ನಟ ‘ಹುಲಿ ಕಿಶೋರ್’.

ಸಿನಿಮಾ ಹೀರೋಯಿನ್ನುಗಳಿಗೆ ಥರಥರದ ಕಾಟ ಕಾಡುವ ಪ್ರವೃತ್ತಿಯ ಸರಣಿಗಳು ಈಗ ದೇಶದೆಲ್ಲೆಡೆ ಬಿಚ್ಚಿಕೊಳ್ಳುತ್ತಿವೆ, ಅಂತೆಯೇ ಹೀಗೆ ಧ್ವನಿ ಎತ್ತಿದ ನಟಿಯರ ಧ್ವನಿಯಡಗಿಸುವ ಪ್ರಯತ್ನಗಳೂ ಭರ್ಜರಿಯಾಗಿ ನಡೆಯುತ್ತಿವೆ.. ಬಾಲಿವುಡ್‌ನಲ್ಲಿ ಹುಟ್ಟಿಕೊಂಡ ಮೀ ಟೂ ಅಭಿಯಾನ ಸ್ಯಾಂಡಲ್‌ವುಡ್‌ನತ್ತಲೂ ಬಂದಿದೆ. ನಟಿಯರನೇಕರು ತಮಗಾದ ಲೈಂಗಿಕ ಕಿರುಕುಳಗಳ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ. ಮತ್ತೆ ಕೆಲವರು ಈ ಅಭಿಯಾನಕ್ಕೆ ಬೆಂಬಲ ಸೂಚಿಸಿ ನೊಂದವರ ಬೆನ್ನಿಗೆ ನಿಂತಿದ್ದಾರೆ. ಇದೀಗ ನಟ ಅರ್ಜುನ್‌ ಸರ್ಜಾ ವಿರುದ್ಧ ಯುವ ನಟಿ ಶೃತಿ ಹರಿಹರನ್‌ ಕಿರುಕುಳ ನೀಡಿದ್ದ ಆಪಾದನೆ ಮಾಡಿದ್ದಾರೆ.

ನಟಿ ಶ್ರುತಿ ಹರಿಹರನ್​ ಸಹ ಖ್ಯಾತ ನಟ ಅರ್ಜುನ್ ಸರ್ಜಾ ಅವರಿದ ತಮಗಾದ ಅನುಭವದ ಕುರಿತು ಹೇಳಿಕೊಂಡಿದ್ದಾರೆ. ತಮಿಳಿನ ವಿಸ್ಮಯ ಸಿನಿಮಾದಲ್ಲಿ ಶೃತಿಹರಿಹರನ್​​ ಹಾಗೂ ಅರ್ಜುನ್​​ ಸರ್ಜಾ ಒಂದೇ ಸಿನಿಮಾದಲ್ಲಿ ನಟಿಸಿದ್ರು. ಈ ಸಿನಿಮಾ ಶೂಟಿಂಗ್​​ ವೇಳೆಯಲ್ಲಿ ಅರ್ಜುನ್​​ ಸರ್ಜಾ ನನ್ನೊಂದಿಗೆ ಅಸಹಜವಾಗಿ ವರ್ತಿಸುತ್ತಿದ್ರು” ಎಂದು ಹೇಳಿಕೆ ನೀಡಿದ್ದಾರೆ. ಅರ್ಜುನ್​ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್ ಅವರ ಪರ ನಟ ಹುಲಿ ಕಿಶೋರ್ ಕೂಡ ಬ್ಯಾಟ್ ಬೀಸಿದ್ದಾರೆ.

‘ಶೂರ ಸಿಂಧೂರ ಲಕ್ಷ್ಮಣ’ ಚಿತ್ರದ ಪತ್ರಿಕಾಗೋಷ್ಠಿ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಕಿಶೋರ್ ಅವ್ರು, “ನನಗೆ ಅರ್ಜುನ್‌ ಸರ್ಜಾ ಅವರ ಮೇಲೆ ಅಪಾರ ಗೌರವವಿದೆ. ಅವರೊಟ್ಟಿಗೆ ನಾನು ಕೂಡ ಕೆಲಸ ಮಾಡಿದ್ದೇನೆ. ಆದರೆ, ಶ್ರುತಿ ಹರಿಹರನ್‌ ಮತ್ತು ಅರ್ಜುನ್‌ ಸರ್ಜಾ ಅವರ ನಡುವೆ ‘ವಿಸ್ಮಯ’ ಚಿತ್ರದ ಶೂಟಿಂಗ್‌ ವೇಳೆ ನಿಜಕ್ಕೂ ಏನು ನಡೆದಿದೆ ಎಂಬುದು ನನಗೆ ಗೊತ್ತಿಲ್ಲ. ಘಟನೆಯ ಸತ್ಯಾಸತ್ಯತೆಯ ಪರಿಶೀಲನೆ ನಡೆಯಬೇಕು,. ಶ್ರುತಿ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಅದು ಆಕೆಯ ಹಕ್ಕು. ನಮಗೆ ಕೇಳಿಸಿಕೊಳ್ಳುವ ತಾಳ್ಮೆ ಇರಬೇಕೆ ಹೊರತು ಆಕೆಯ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಅಥವಾ ಅವರನ್ನು ಅಡ್ಡಿಪಡಿಸುವುದು ಸರಿಯಲ್ಲ’ ಎಂದು ಹೇಳಿದ್ದಾರೆ.

ಶ್ರುತಿ ಅವರ ಆರೋಪದ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಜನರು ಪ್ರತಿಕ್ರಿಯಿಸುತ್ತಿರುವ ರೀತಿ ಸರಿಯಲ್ಲ. ಆಕೆಯ ಚಾರಿತ್ರ್ಯಹರಣ ಮಾಡುವುದು ತಪ್ಪು. ಅಂತಹ ಸಂಸ್ಕೃತಿಯನ್ನು ಹುಟ್ಟುಹಾಕುವುದು ಒಳ್ಳೆಯದಲ್ಲ. ಜನರ ಟೀಕೆಗಳ ಬಗ್ಗೆ ನನ್ನ ವಿರೋಧವಿದೆ.” ಎಂದು ಕೂಡ ಕಿಶೋರ್ ಪ್ರತಿಕ್ರಿಯಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top